twitter
    For Quick Alerts
    ALLOW NOTIFICATIONS  
    For Daily Alerts

    ನಮ್ಮ ಚಲನಚಿತ್ರಗಳು ರೂಢಿಗತ ವರ್ತನೆಗಳನ್ನು ಪ್ರಚೋದಿಸುತ್ತವೆಯೆ?

    By ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ
    |

    ನಮ್ಮ ಚಲನಚಿತ್ರಗಳು ರೂಢಿಗತ ವರ್ತನೆಗಳನ್ನು ಪ್ರಚೋದಿಸುತ್ತವೆಯೆ?
    ಹೌದೇ ಹೌದು...
    ನಮ್ಮೆಲ್ಲರ ದಿನನಿತ್ಯ ನಡೆನುಡಿಗಳು ತನ್ನಷ್ಟಕ್ಕೆ ತಾನೇ, ಯಾವುದೇ ಹೊಸತನ ಇರದೇ ಮುಂದುವರೆಯುವುದರ ಹಿಂದಿರುವ ಮನೋವೈಜ್ಞಾನಿಕ ವಿವರಣೆ ಎಂದರೆ ರೂಢಿಗತ(ಇಂಗ್ಲಿಷಿನಲ್ಲಿ ಸ್ಟಿರೀಯೋಟೈಪ್‌) ವರ್ತನೆ. ಎಲ್ಲರೂ ಹಂಚಿಕೊಳ್ಳುವ, ಸರಾಗವಾಗಿ ಅರ್ಥವಾಗುವಂತೆ ತೋರುವ ಮತ್ತೂ ಸರಿ ಎನಿಸುವ ರೀತಿಯ ನಡೆನುಡಿಗಳು. ಇಂತಹ ವರ್ತನೆಗಳನ್ನು ಯಾರೂ ಕಲಿಸಿಕೊಡುವುದಿಲ್ಲ, ನೋಡಿ ಕಲಿಯುವ ರೀತಿಯೇ ರೂಢಿಗತ ವರ್ತನೆಯ ಲಕ್ಷಣ.

    Recommended Video

    KGF 2 : 29ಕ್ಕೆ ರಿಲೀಸ್ ಆಗಲಿದೆ KGF 2 ಭಯಂಕರ ಅಪ್ಡೇಟ್ | Yash | PrashanthNeel | Filmibeat Kannada

    ಈ ವಿಧದ ಕಲಿಕೆಯಿಂದ ಲಾಭವೂ ಇದೆ, ಅಪಾಯವೂ ಇದೆ. ಲಾಭವೆಂದರೆ ಆಲೋಚನೆ, ವಿಚಾರ ಮಾಡದೆಯೇ, ಅಂದರೆ ಏಕೆ? ಏನು? ಎಂದು ಪ್ರಶ್ನಿಸಿದೆ ವಿಷಯ, ವಿಚಾರ, ಸಲಹೆಗಳನ್ನು ಒಪ್ಪಿಕೊಳ್ಳುವುದು ಅಥವಾ ಅನುಸರಿಸುವುದು. ಈ ನಮೂನೆಯ ನಡೆನುಡಿಗಳು ನಮ್ಮ ನಿತ್ಯ ಜೀವನದ ಹಲವಾರು ಸಂಗತಿ, ವಿಷಯ, ವಸ್ತುಗಳ ಬಗ್ಗೆ ಹರಿಯುವುದು ಸಾಮಾನ್ಯ. ಆಹಾರ, ಉಡುಪು, ಭಾಷೆ, ಹವಾಭಾವ ಮುಂತಾದವುಗಳು ರೂಢಿಗತ ವರ್ತನೆಗಳಾಗಿ ಹೊರಬರುವುದೇ ಹೆಚ್ಚು.

    ಫ್ರೆಂಚ್ ಬಿರಿಯಾನಿ: ಗೊಂದಲಗಳ ಕೊಲಾಜು, ಅಲ್ಲಲ್ಲಿ ನಾನ್‌ವೆಜ್ಜುಫ್ರೆಂಚ್ ಬಿರಿಯಾನಿ: ಗೊಂದಲಗಳ ಕೊಲಾಜು, ಅಲ್ಲಲ್ಲಿ ನಾನ್‌ವೆಜ್ಜು

    ಒಂದು ರೀತಿಯಲ್ಲಿದು ವ್ಯಕ್ತಿಗಳ ದಿನನಿತ್ಯದ ಹೊಂದಾಣಿಕೆಯ ರೀತಿಯನ್ನು ಸರಳಗೊಳಿಸುವುದಂತೂ ನಿಜವೇ. ಈ ಮಾದರಿಯ ವರ್ತನೆಗಳಲ್ಲಿ ಇತರರ ಅಭ್ಯಾಸ, ಆಚರಣೆ, ಆಕೃತಿ, ಅಂದಚೆಂದಗಳನ್ನು ಲಘುವಾಗಿಯೋ, ಕೀಳು ಎನ್ನುವ ಅಭಿಪ್ರಾಯದಿಂದಲೋ ನೋಡುವುದು ಸ್ವಭಾವವಾಗಿ ನಿಲ್ಲುವುದು.

    Influence of Films on Habitual Behaviour of viewers

    ಬೆಳ್ಳಗಿರುವುದೆಲ್ಲಾ ಹಾಲಲ್ಲಾ- ಎನ್ನುವುದೇನೋ ಗಾದೆಯ ಮಾತಾಗಿದ್ದರೂ ಜನಮಾನಸದಲ್ಲಿ ಬೆಳಗಿರುವುದೆಲ್ಲವು ಉತ್ತಮ, ಆರ್ಕಷಣೀಯ ಎನ್ನುವಂತಹ ಭಾವನೆಗಳೇ ಪ್ರಬಲವಾಗಿದ್ದು ನಡೆನುಡಿಗಳ ಮೂಲಕ ವ್ಯಕ್ತಗೊಳ್ಳುವುದು. ಹೀಗೆ ವ್ಯಕ್ತಗೊಳ್ಳುವ ಅಭಿಪ್ರಾಯಗಳು ತೀರಾ ಅಪಾಯಕಾರಿ ಎನ್ನುವುದರ ಜ್ವಲಂತ ನಿದರ್ಶನ ಅಮೆರಿಕದಲ್ಲಿಂದು ಕಾಣಿಸಿಕೊಂಡಿರುವ ಕಪ್ಪು ವರ್ಣೀಯರನ್ನು ಕಡೆಗಾಣಿಸುತ್ತಿರುವುದರ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶ.

    ಮನರಂಜನೆ ಮತ್ತು ಉತ್ತಮ ಸಂದೇಶಗಳನ್ನು ನೀಡಬಹುದಾದ ನಮ್ಮ ಚಲನಚಿತ್ರಗಳಲ್ಲಿಯೂ ಕಪ್ಪು ವರ್ಣದ ಬಗ್ಗೆ ನಕಾರಾತ್ಮಕವಾಗಿರುವಂತಹ ಭಾವನೆಗಳನ್ನೇ ವ್ಯಕ್ತಪಡಿಸುವುದು ಪ್ರತೀತಿ. ಈಚೆಗೆ ನಾ ವೀಕ್ಷಿಸಿದ ಕೆಲ ಚಲನಚಿತ್ರಗಳಲ್ಲಿ ಈ ಮಾದರಿಯ ರೂಢಿಗತ ವರ್ತನೆ ಪ್ರಬಲವಾಗಿದೆ ಎನ್ನುವುದರ ಒಂದೆರಡು ಉದಾಹರಣೆಗಳು: ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಪನ್ನಗಾಭರಣ ಅವರ ನಿರ್ದೇಶನ ಮತ್ತು ಚಿತ್ರಕತೆಯ ಕನ್ನಡ ಚಲನಚಿತ್ರ '' ಫ್ರೇಂಚ್‌ ಬಿರಿಯಾನಿ'' ಇದರಲ್ಲಿ ಒಂದು.

    ಚಿತ್ರದ ಪಾತ್ರಗಳಲ್ಲಿ ಅಪಹಾಸ್ಯವೇ ಪ್ರಧಾನವಾಗಿರುವುದು ಗಮನಕ್ಕೆ ಬಾರದಿರುವಂತಹ ವಿಷಯ. ಪೊಲೀಸು ಅಧಿಕಾರಿಗಳು, ರೌಡಿಗಳ ಪಾತ್ರ ಪ್ರಮುಖರಲ್ಲಿ ಚರ್ಮದ ಬಣ್ಣ, ವಕ್ರವೆನ್ನುವಂತಹ ವರ್ತನೆಗಳು ''ಹೊಟ್ಟೆ ಹುಣ್ಣಾಗಿಸುವಷ್ಟು ನಗೆ'' ತರುಸುತ್ತದೆ ಎನ್ನುವ ಸಾಲುಗಳು ಈಗಾಗಲೇ ಹೊರಬಿದ್ದಿವೆ. ಆದರೆ ಮನರಂಜನೆಯ ಹೆಸರಿನಲ್ಲಿ ಪೂರ್ವಗ್ರಹಗಳನ್ನು ಉತ್ತೇಜಿಸುವುದು ಉದ್ದೇಶ ಪೂರಕವಿರದಿರಬಹುದು. ಆದರೆ ಅದರ ಹಿಂದಿರುವ ಮನೋಸ್ವರೂಪದ ಉದ್ದೇಶ ಬೇರೆಯವರದ್ದೇ (ಪೂರ್ವಗ್ರಹ ಪೀಡಿತ) ಆಗಿರಬಲ್ಲದು.

    ''ಫ್ರೆಂಚ್ ಬಿರಿಯಾನಿ'' ಚಿತ್ರದ ನಿರ್ದೇಶಕರು ಕಾಲೇಜು ವ್ಯಾಸಂಗದ ಮಟ್ಟದಲ್ಲಿ ಶಿಸ್ತಿನಿಂದ ಮನೋವಿಜ್ಞಾನವನ್ನು ಒಂದು ವಿಷಯವನ್ನಾಗಿ ನಾಲ್ಕೈದು ವರ್ಷ ಅಭ್ಯಾಸ ಮಾಡಿರುವಂತಹವರು. ಹೀಗಿದ್ದಾಗ್ಯೂ ಸಾಮಾನ್ಯ ವಿಧದ ರೂಢಿಗತ ವರ್ತನೆಯ ಹಿಡಿತಕ್ಕೆ ಸಿಕ್ಕಿಕೊಂಡಿರುವುದು ಸ್ಪಷ್ಟ. ಕೆಟ್ಟ ನಡೆನುಡಿಗಳಿಗೂ ವ್ಯಕ್ತಿಯ ಅಂದಚೆಂದಕ್ಕೂ ಸಂಬಂಧ ಇಲ್ಲವೆನ್ನುವುದನ್ನು ವ್ಯಕ್ತಪಡಿಸುವ ಪಕ್ವತೆ ನಮ್ಮ ಚಲನಚಿತ್ರ ನಿರ್ದೇಶಕರ ಮನದಾಳದಲ್ಲಿ ಈ ಕಾಲದಲ್ಲಿಯೂ ಮೂಡಿಲ್ಲವೆನ್ನುವುದು ದೌರ್ಬಾಗ್ಯವೇ ಸರಿ.

    ಇದೆ ರೀತಿಯ ಉದಾಹರಣೆ ಕೊಂಚ ಹಳೆಯ ಚಿತ್ರವಾದ ಶಾರುಖ್‌ ಖಾನ್‌ -ದೀಪಿಕಾ ಪಡುಕೊಣೆ ಅಭಿನಯಿಸಿರುವ ''ಚೆನ್ನೈ ಎಕ್ಸ್‌ಪ್ರೆಸ್‌'' ಹಿಂದಿ ಚಲನಚಿತ್ರದಲ್ಲಿಯೂ ಕಾಣಬಹುದು. ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ಕಪ್ಪು ವರ್ಣದವರು ಒರಟರು, ದುಷ್ಟರು ಎನ್ನುವಂತಹ ಭಾವನೆಗಳನ್ನು ಬಲಪಡಿಸುತ್ತವೆ. ಚಿತ್ರದ ಕೊನೆಯಂಚಿನಲ್ಲಿ ಖಳನಾಯಕನ ವಿರುದ್ಧ ಕಾದಾಡಿ ಗೆದ್ದ ಸಮಯದಲ್ಲಿ ನಾಯಕ ಹೇಳುವ ಮಾತುಗಳು ಹೀಗಿವೆ... ಖಳನಾಯಕನ ಎದೆ ಚುಚ್ಚಿ ಹೇಳುತ್ತಾ ...ನಿನ್ನ ದೇಹಾಕಾರದಷ್ಟು ದೊಡ್ಡದಲ್ಲಾ ನಿನ್ನ ಹೃದಯ ಭಾವ... ಎನ್ನುವ ವಾಕ್ಯದ ಹಿನ್ನೆಲೆಯ ಮನಸಿನಲ್ಲಿ ''ಇಮೊಷನಲ್‌ ಇಂಟೆಲಿಜೆನ್ಸ್‌'' ಕಡಿಮೆ ನಿಮಗೆ ಎನ್ನುವುದು ಜೋರಾಗಿಯೇ ಕೇಳಿಸುತ್ತದೆ.

    ಈ ಮಾದರಿಯ ಮಾತುಗಳೇನು ಹೊಚ್ಚ ಹೊಸದಲ್ಲ. ಹಲವಾರು ದಶಕಗಳಿಂದಲೂ ಹಿಂದಿ ಚಲನ ಚಿತ್ರಗಳು ದಕ್ಷಿಣ ಭಾರತದ ಭಾಷೆ, ಜನರ ಬಗ್ಗೆ ನಕಾರಾತ್ಮಕ ರೂಢಿಗತ ವರ್ತನೆಗಳನ್ನು ಬಿಂಬಿಸುತ್ತಲೇ ಬಂದಿವೆ. ಅಂತೆಯೇ ಅದನ್ನೇ ಮಾದರಿಯನ್ನಾಗಿಸಿಕೊಂಡಿವೆ ನಮ್ಮ ಚಲನಚಿತ್ರ ನಿರ್ದೇಶನದ ಒಂದು ವರ್ಗ. ರೂಢಿಗತ ವರ್ತನೆಯ ಹಿಡಿತವೇ ಹೀಗೆ. ಜನರ ವರ್ಚಸ್ಸು, ವರ್ತನೆಗಳ ಮೇಲೆ ಚಲನಚಿತ್ರದ ಪಾತ್ರಧಾರಿಗಳು ಭಾರಿ ಪ್ರಭಾವ ಬೀರುತ್ತಾರೆ. ಹಾಗೆಯೇ ಈ ಪಾತ್ರಗಳು ನಕಾರಾತ್ಮಕ ಅಭಿಪ್ರಾಯಗಳನ್ನೂ ವ್ಯಕ್ತಿಯ ಅರಿವಿಗೆ ಬಾರದಂತೆಯೇ ನಾಟಿಸಿಬಿಡುತ್ತವೆ.

    English summary
    Can Films stimulate or influence Habitual Behaviour in viewers. Here is analogy by Dr Acharya Sridhara after watching much talked French Biryani film on Amazona prime OTT.
    Monday, July 27, 2020, 14:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X