For Quick Alerts
  ALLOW NOTIFICATIONS  
  For Daily Alerts

  'ಅಂಜನಿಪುತ್ರ'ನ ಹಾಡಿಗೆ ಇನ್ಫೋಸಿಸ್ ಉದ್ಯೋಗಿಗಳ ಪವರ್ ಫುಲ್ ಡ್ಯಾನ್ಸ್

  By ಸುನೀತಾ ಗೌಡ
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸ್ಟೆಪ್ ಹಾಕಿದ್ದ 'ಚಂದ ಚಂದ ಚಂದ ನನ್ ಹೆಂಡ್ತಿ' ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಹಾಡಿಗೆ ಅಭಿಮಾನಿಗಳು ತರೇಹವಾರಿ ಡ್ಯಾನ್ಸ್, ಡಬ್ ಸ್ಮಾಶ್ ಮಾಡಿ ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಹಾಕಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದ್ದಾರೆ.

  ಇತ್ತೀಚೆಗಷ್ಟೇ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಶಿಕ್ಷಕಿ ಶ್ರುತಿ ಜೈನ್ ಮತ್ತು ವಿದ್ಯಾರ್ಥಿಗಳು ಜೊತೆಗೂಡಿ ಕಲರ್ ಫುಲ್ ಸೆಟ್ ಹಾಕಿ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು. ಇದೀಗ ಮೈಸೂರಿನ ಇನ್ಫೋಸಿಸ್ ಕಂಪೆನಿಯ ಉದ್ಯೋಗಿಗಳ ಸರದಿ. ಸ್ವೆವೆನ್ ಮತ್ತು ದಿ ಅಮಿಗೋಸ್ ತಂಡ ಸೇರಿಕೊಂಡು 'ಚಂದ ಚಂದ ಚಂದ ನನ್ ಹೆಂಡ್ತಿ' ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

  SDM ಕಾಲೇಜಿನಲ್ಲಿ ಅಂಜನಿಪುತ್ರನ 'ಹೆಂಡ್ತಿ' ಹವಾ ಬಲು ಜೋರು ಮಾರ್ರೆ.!

  ಸಿನಿಮಾ ರೀತಿಯಲ್ಲಿ ಕಾನ್ಸೆಪ್ಸ್ ಇಟ್ಟುಕೊಂಡು, 'ಚಂದ ಚಂದ ಚಂದ ನನ್ ಹೆಂಡ್ತಿ' ಹಾಡನ್ನು ಕ್ರಿಯೇಟ್ ಮಾಡಿರುವ ಐಟಿ ಉದ್ಯೋಗಿಗಳು ಯಶಸ್ಸು ಕಂಡಿದ್ದಾರೆ. ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಶೂಟ್ ಮಾಡಲಾಗಿದ್ದು, ವಿಭಿನ್ನ ಕಾಸ್ಟ್ಯೂಮ್, ಸಿಂಪಲ್ ಆಗಿ ಬ್ಯೂಟಿಫುಲ್ ಸ್ಟೆಪ್ಸ್ ಹಾಕಿ ಚೊಕ್ಕವಾಗಿ ಮಾಡಿರುವ 'ನನ್ ಹೆಂಡ್ತಿ' ಡ್ಯಾನ್ಸ್ ವೀಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಸದ್ಯಕ್ಕೆ ಯೂಟ್ಯೂಬ್ ನಲ್ಲಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿರುವ 'ನನ್ನ ಹೆಂಡ್ತಿ' ಭರ್ತಿ 2 ಲಕ್ಷ ವೀಕ್ಷಕರನ್ನು ಸಂಪಾದಿಸಿದ್ದು, 5 ಸಾವಿರ ಲೈಕ್ಸ್ ಗಿಟ್ಟಿಸಿಕೊಂಡಿದೆ.

  ಅಪ್ಪು ಫ್ಯಾನ್ ಆಶಾ.ಸಿ, ಶಿವಣ್ಣ ಫ್ಯಾನ್ ಪ್ರಜ್ವಲ್ ಸುಧಾಕರ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಕಾರ್ತಿಕ್.ಎ, ಕುನಾಲ್ ಶರ್ಮಾ, ಪ್ರನೀಲ್ ಕುಮಾರ್ ಮತ್ತು ರಾಘವ್ ಜಾರ್ವಿಸ್ ಅವರು ಸಹ ನೃತ್ಯಗಾರರಾಗಿ ಕಾಣಿಸಿಕೊಂಡು ಭರ್ಜರಿಯಾಗಿ ಕುಣಿದಿದ್ದಾರೆ. ಪ್ರವೀಣ್ ಸೇತುರಾಮನ್ ಅವರು ಸಂಕಲನದ ಜೊತೆಗೆ ಕ್ಯಾಮೆರಾ ಕೈ ಚಳಕ ತೋರಿದ್ದಾರೆ. ಮೂಲತಃ ಮಂಗಳೂರಿನ ಪ್ರಜ್ವಲ್ ಸುಧಾಕರ್ ಶೆಟ್ಟಿ ಅವರು ಕೊರಿಯೋಗ್ರಫಿ ಜೊತೆಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೈಸೂರಿನ ಅಮಿಗೋಸ್ ತಂಡದ 'ನನ್ ಹೆಂಡ್ತಿ' ಡ್ಯಾನ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  English summary
  after, SDM Multimedia Studio of Dept. of Journalism, now infosys employees has created a record by producing video choreography for ‘Nan Hendthi’ song of the movie Anjaniputhra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X