ಇನ್ಫೋಸಿಸ್ ಸುಧಾಮೂರ್ತಿ ನೋಡಿ, ಹೊಗಳಿದ ಹೊಸ ಕನ್ನಡ ಸಿನಿಮಾ

ಸಾಹಿತಿ, ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ ಸುಧಾಮೂರ್ತಿ, ಉದ್ಯಮದ ಜೊತೆಗೆ ಸಾಹಿತ್ಯ, ಕಲೆ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಕನ್ನಡ ಸಾಹಿತ್ಯ ಹಾಗೂ ಸಿನಿಮಾ, ನಾಟಕ ರಂಗಗಳ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸುಧಾ ಮೂರ್ತಿ ಒಳ್ಳೆಯ ಕಲೆಯನ್ನು ಶ್ಲಾಘಿಸುವ ಮನೋಧರ್ಮ ಹೊಂದಿರುವವರು. ಇದೀಗ ಕನ್ನಡದ ಹೊಸ ಸಿನಿಮಾ ಒಂದನ್ನು ವೀಕ್ಷಿಸಿರುವ ಸುಧಾಮೂರ್ತಿ ಸಿನಿಮಾ ಬಗ್ಗೆ ಕೆಲ ಒಳ್ಳೆ ಮಾತುಗಳನ್ನಾಡಿದ್ದಾರೆ.

ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ '100' ಸಿನಿಮಾವನ್ನು ಸುಧಾಮೂರ್ತಿ ವೀಕ್ಷಿಸಿದ್ದು, ''ಇದೊಂದು ಸಕಾಲಿಕ ಸಿನಿಮಾ'' ಎಂದಿದ್ದಾರೆ. ವಿಡಿಯೋ ಒಂದರಲ್ಲಿ ಸುಧಾ ಮೂರ್ತಿ ಅವರು '100' ಸಿನಿಮಾ ಬಗ್ಗೆ ಮಾತನಾಡಿದ್ದು, 'ಈ ಸಿನಿಮಾ ತಪ್ಪದೇ ನೋಡಬೇಕಾದ ಸಿನಿಮಾ' ಎಂದಿದ್ದಾರೆ.

'100' ಕನ್ನಡ ಸಿನಿಮಾ ನೋಡಿದ ಸುಧಾಮೂರ್ತಿ

'100' ಕನ್ನಡ ಸಿನಿಮಾ ನೋಡಿದ ಸುಧಾಮೂರ್ತಿ

''ನಾನು '100' ಹೆಸರಿನ ಕನ್ನಡ ಸಿನಿಮಾ ನೋಡಿದೆ. ಈ ಸಿನಿಮಾ ಬಹಳ ಚೆನ್ನಾಗಿದೆ. ಇತ್ತೀಚೆಗೆ ಯುವಜನ ಮೊಬೈಲ್ ಹಾಗೂ ಕಂಪ್ಯೂಟರ್‌ಗೆ ದಾಸರಾಗಿದ್ದಾರೆ. ಗೊತ್ತಿಲ್ಲದ ವ್ಯಕ್ತಿಗಳೊಟ್ಟಿಗೆ ಫೇಸ್‌ಬುಕ್‌ನಲ್ಲಿ ಗೆಳೆತನ ಮಾಡಿಕೊಳ್ಳುತ್ತಾರೆ. ಗೆಳೆತನ ತಪ್ಪಲ್ಲ, ಆದರೆ ಅಪರಿಚತ ವ್ಯಕ್ತಿಗಳೊಟ್ಟಿಗೆ ತಮ್ಮ ಅಂತರಂಗ ತೆರೆದಿಡುವುದು ತಪ್ಪು, ಆ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳು ಹೇಗೆ ಬಳಸಿಕೊಳ್ಳುತ್ತಾರೆ. ಅದರಿಂದ ಕುಟುಂಬ, ಸಮಾಜ ಏನು ಕಷ್ಟಗಳು ಅನುಭವಿಸಬೇಕಾಗುತ್ತದೆ ಎನ್ನುವುದರ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ'' ಎಂದಿದ್ದಾರೆ ಸುಧಾಮೂರ್ತಿ.

ಇತ್ತೀಚಿನ ದಿನಗಳಲ್ಲಿ ಬಂದ ಒಳ್ಳೆಯ ಸಿನಿಮಾ: ಸುಧಾಮೂರ್ತಿ

ಇತ್ತೀಚಿನ ದಿನಗಳಲ್ಲಿ ಬಂದ ಒಳ್ಳೆಯ ಸಿನಿಮಾ: ಸುಧಾಮೂರ್ತಿ

''ಈ ಸಿನಿಮಾ ನಿಜಕ್ಕೂ ಅತ್ಯುತ್ತಮ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಇಂಥಹಾ ಒಂದು ಅತ್ಯುತ್ತಮ ಸಿನಿಮಾ ಬಂದಿರುವುದು ಬಹಳ ಕಡಿಮೆ. ನಾನು ಸಿನಿಮಾ ನೋಡುವಾಗ ಬಹಳ ಖುಷಿಯಿಂದ ನೋಡಿದೆ. ಕುಟುಂಬದವರು ಒಟ್ಟಿಗೆ ಕುಳಿತುಕೊಂಡು ನೋಡಬಹುದಾದ ಸಿನಿಮಾ. ಜೊತೆಗೆ ಈ ಸಿನಿಮಾದಲ್ಲಿ ಕಲಿಕೆ ಇದೆ. ಸೈಬರ್‌ ಕ್ರೈಂನಿಂದ ನಾವು ಎಷ್ಟು ಜೋಪಾನವಾಗಿರಬೇಕು, ಆನ್‌ಲೈನ್‌ನಲ್ಲಿ ಯಾರನ್ನು ಎಷ್ಟು ನಂಬಬೇಕು, ಅಂತರಂಗವನ್ನು ನಾವು ಎಷ್ಟು ತೆರೆಯಬೇಕು, ಎಷ್ಟು ತೆರೆಯಬಾರದು ಇಂಥಹಾ ವಿಷಯಗಳನ್ನೆಲ್ಲ ಅಡಕಮಾಡಿಟ್ಟುಕೊಂಡಿರುವ ಸಂವೇದನಶೀಲ ಸಿನಿಮಾ ಇದಾಗಿದೆ'' ಎಂದಿದ್ದಾರೆ ಸುಧಾಮೂರ್ತಿ.

ಕುಟುಂಬ ಸಮೇತರಾಗಿ ಸಿನಿಮಾ ನೋಡಿ: ಸುಧಾಮೂರ್ತಿ ಮನವಿ

ಕುಟುಂಬ ಸಮೇತರಾಗಿ ಸಿನಿಮಾ ನೋಡಿ: ಸುಧಾಮೂರ್ತಿ ಮನವಿ

''ಇಂಥಹಾ ಒಳ್ಳೆಯ ಸಿನಿಮಾ ಮಾಡಿರುವ ರಮೇಶ್ ಅರವಿಂದ ಹಾಗೂ ನಿರ್ಮಾಪಕ ರಮೇಶ ರೆಡ್ಡಿ ಅವರನ್ನು ನಾನು ಅಭಿನಂಧಿಸುತ್ತೇನೆ. ಮೊದಲನೇಯ ಸಿನಿಮಾದಲ್ಲಿ ವಿಷ್ಣು ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದ ಎಲ್ಲ ನಟರು ತಮ್ಮ-ತಮ್ಮ ನಟನೆಯನ್ನು ಚೆನ್ನಾಗಿ ಮಾಡಿದ್ದಾರೆ. ಈ ಸಿನಿಮಾವನ್ನು ಎಲ್ಲರೂ ನೋಡಲೇ ಬೇಕು. ಕನ್ನಡದ ಅತಿ ಉತ್ತಮ ಸಿನಿಮಾಗಳಲ್ಲಿ ಇದು ಸಹ ಒಂದು. ದಯವಿಟ್ಟು ಈ ಸಿನಿಮಾ ನೋಡಿ, ಇದರಿಂದ ಪಾಠ ಕಲಿಯಿರಿ, ಕುಟುಂಬದವರೆಲ್ಲ ಈ ಸಿನಿಮಾ ನೋಡಿ ತಮ್ಮೊಳಗೆ ವಿಚಾರ ವಿನಿಮಯ ಮಾಡಿಕೊಳ್ಳಿ'' ಎಂದು ಮನವಿ ಮಾಡಿದ್ದಾರೆ ಸುಧಾಮೂರ್ತಿ.

ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ ಸಿನಿಮಾ

ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ ಸಿನಿಮಾ

'100' ಸಿನಿಮಾವನ್ನು ನಟ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಸಿನಿಮಾವು ಸೈಬರ್ ಕ್ರೈಂ ಕುರಿತ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ರಚಿತಾ ರಾಮ್, ಪೂರ್ಣ, ವಿಷ್ಣುಕರ್ಣ, ಪ್ರಕಾಶ್ ಬೆಳವಾಡಿ, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸಾಮ್ಯ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವು ನವೆಂಬರ್ 19 ರಂದು ಬಿಡುಗಡೆ ಆಗಿದ್ದು, ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

More from Filmibeat

English summary
Infosys Sudha Murthy praised 100 Kannada movie. She said this is a must watch Kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X