ವೈರಲ್ ಆದ ಮಂಗಳೂರಿನ ಆಟೋ ಡ್ರೈವರ್ 'ಇಂಕೇಮ್ ಕಾವಾಲೆ' ಕನ್ನಡ ವರ್ಶನ್ ಹಾಡು

By ಮಂಗಳೂರು ಪ್ರತಿನಿಧಿ

ಕನ್ನಡದ 'ಕಿರಿಕ್ ಪಾರ್ಟಿ' ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ತೆಲುಗಿನ 'ಗೀತಾ ಗೋವಿಂದಂ' ಸಿನಿಮಾ ದೇಶದಾದ್ಯಂತ ಮನೆ ಮಾತಾಗಿದೆ. ಚಿತ್ರದಲ್ಲಿ ಅತೀ ಹೆಚ್ಚು ಪ್ರಚಾರ ಪಡೆದ "ಇಂಕೇಮ್ ಇಂಕೇಮ್ ಇಂಕೇಮ್ ಕಾವಾಲೆ..." ಹಾಡು ಎಲ್ಲರ ಫೇವರೇಟ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ಹಾಡು ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಗಿದೆ. ಈ ನಡುವೆ ಇನ್ನೊಂದು ವಿಷಯ ಅಂದ್ರೆ 'ಗೀತಾ ಗೋವಿಂದಂ' ಸಿನಿಮಾದ ಹಿಟ್ ಸಾಂಗ್ "ಇಂಕೇಮ್ ಇಂಕೇಮ್ ಕಾವಾಲೆ..." ಕನ್ನಡದ ವರ್ಶನ್ ಹಾಡು ಸೂಪರ್ ಹಿಟ್ ಆಗುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ.

''ಇಂಕೇಮ್ ಇಂಕೇಮ್ ಕಾವಾಲೇ..'' ಕನ್ನಡದ ವರ್ಷನ್ ಹಾಡು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಹಾಡನ್ನು ಕನ್ನಡಕ್ಕೆ ತಂದಿರುವುದು ಮಂಗಳೂರಿನ ಒಬ್ಬ ಸಾಮಾನ್ಯ ಆಟೋ ಡ್ರೈವರ್‌ ಎಂಬುದು ಗಮನಿಸಬೇಕಾದ ಸಂಗತಿ.

Inkem Kavale Kannada version goes viral in Social media

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಸಂದೇಶ್ ನೀರುಮಾರ್ಗ ಎಂಬ ಮಂಗಳೂರಿನ ವಾಮಂಜೂರು ನಿವಾಸಿ ಈ ಹಾಡನ್ನು ಹಾಡಿದ್ದು, ಈಗ ಇದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಯೂಟ್ಯೂಬ್ ನಲ್ಲಿ ಈ ಹಾಡನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ.

ಸಂದೇಶ್ ಗೆ ಸಂಗೀತದ ಹಿನ್ನೆಲೆ ಇಲ್ಲ. ಚಿಕ್ಕಂದಿನಿಂದಲೂ ಭಜನೆಯಲ್ಲಿ ತೊಡಗಿಕೊಂಡು ತಂಡ ಕಟ್ಟಿರುವ ಸಂದೇಶ್, ಸಂಗೀತ ಕಲಿತವರಲ್ಲ. ಆಟೋ ಓಡಿಸಿಕೊಂಡು ಹಾಡುಗಳನ್ನು ಹಾಡುತ್ತಾ ಜೀವನ ಸಾಗಿಸುತ್ತಿರುವ ಸಂದೇಶ್ ಗೆ ಚಿಕ್ಕದೊಂದು ಅಪಘಾತವಾಗಿ ಮನೆಯಲ್ಲೇ ಇದ್ದರು. ಈ ವೇಳೆ ತೆಲುಗಿನ ಹಾಡನ್ನು ಕೇಳುತ್ತಲೇ ಕನ್ನಡದಲ್ಲೇ ಲಿರಿಕ್ಸ್ ಬರೆದಿದ್ದಾರೆ.

ಸ್ನೇಹಿತರ ಸಹಾಯದಿಂದ ಗೆಳೆಯನ ಸ್ಟುಡಿಯೋದಲ್ಲಿ ಹಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಪ್ ಲೋಡ್ ಆದ ಕ್ಷಣದಲ್ಲೇ ಲಕ್ಷಾಂತರ ಮಂದಿ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಶಾರ್ಟ್ ಫಿಲ್ಮ್ ಗಳಿಗೆ ಧ್ವನಿ ನೀಡಿರುವ ಸಂದೇಶ್ ಚಿಕ್ಕಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. ಸಂದೇಶ ಅವರ ಆಸೆಯಂತೆ ಕನ್ನಡ ಸಿನಿಮಾಗಳಲ್ಲಿಯೂ ಅವರಿಗೆ ಹಾಡಲು ಚಾನ್ಸ್ ಸಿಗಲಿ ಎನ್ನುತ್ತಾರೆ ಸ್ನೇಹಿತರು.

More from Filmibeat

English summary
Super Hit song 'Inkem Kavale..' from Telugu Movie 'Geetha Govindam' Kannada Version sung by Auto Driver Sandesh from Mangaluru has become viral on Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X