For Quick Alerts
  ALLOW NOTIFICATIONS  
  For Daily Alerts

  ನೈಟ್ ಕರ್ಫ್ಯೂ: ಚಿತ್ರರಂಗದ ಗಾಯದ ಮೇಲೆ ಉಪ್ಪು

  |

  ಕೊರೊನಾ ಎರಡನೇ ಅಲೆ ಚಿತ್ರರಂಗಕ್ಕೆ ಸಂಕಷ್ಟಗಳ ಮೇಲೆ ಸಂಕಷ್ಟ ತರುತ್ತಿದೆ. 50% 'ಆಕ್ಯುಪೆನ್ಸಿ' ಯನ್ನು ಚಿತ್ರಮಂದಿರಗಳ ಮೇಲೆ ಹೇರಿದ್ದು ದೊಡ್ಡ ಹೊಡೆತವಾದರೆ ಈಗ ಜಾರಿ ಮಾಡಲಾಗಿರುವ ರಾತ್ರಿ ಕರ್ಫ್ಯೂ ಚಿತ್ರರಂಗದ ಗಾಯದ ಮೇಲೆ ಬರೆ ಎಳೆದಿದೆ.

  ಕೊರೊನಾ ನೈಟ್ ಕರ್ಫ್ಯೂ ಜಾರಿಯಿಂದ ಚಿತ್ರರಂಗಕ್ಕೆ ಗಾಯದ ಮೇಲೆ ಬರೆ | Filmibeat Kannada

  ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಾತ್ರಿ 10 ಗಂಟೆ ಮೇಲೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ಕರ್ಫ್ಯೂ ವಿಧಿಸಲಾಗಿರುವ ಜಿಲ್ಲೆಗಳ ಕೆಲವು ಚಿತ್ರಮಂದಿರಗಳಲ್ಲಿ ದಿನದ ಕೊನೆಯ ಶೋ ಅನ್ನು ರದ್ದು ಮಾಡಲಾಗಿದೆ.

  ವಿಡಿಯೋ: ಪವನ್ ಕಲ್ಯಾಣ್ ಅಭಿಮಾನಿಗಳಿಂದ ದಾಂಧಲೆವಿಡಿಯೋ: ಪವನ್ ಕಲ್ಯಾಣ್ ಅಭಿಮಾನಿಗಳಿಂದ ದಾಂಧಲೆ

  'ರಾತ್ರಿ ಕರ್ಫ್ಯೂ ಇರುವ ಕಾರಣ ಐನಾಕ್ಸ್‌ನ ರಾತ್ರಿ ಶೋ ಗಳನ್ನು ರದ್ದು ಮಾಡಲಾಗಿದೆ' ಎಂದು ಐನಾಕ್ಸ್ ದಕ್ಷಿಣ ಭಾರತ ವ್ಯವಸ್ಥಾಪಕ ಹೇಳಿದ್ದಾರೆ. ಐನಾಕ್ಸ್‌ನಲ್ಲಿ ರಾತ್ರಿ 9 ಗಂಟೆ ಮೇಲಿನ ಎಲ್ಲ ಶೋಗಳನ್ನು ರದ್ದು ಮಾಡಲಾಗಿದೆ. ಏಪ್ರಿಲ್ 20ರ ವರೆಗೆ ಐನಾಕ್ಸ್‌ನಲ್ಲಿ ರಾತ್ರಿ ಶೋಗಳು ಇರುವುದಿಲ್ಲ.

  ಐನಾಕ್ಸ್ ಮಾತ್ರವೇ ಅಲ್ಲದೆ ಬೇರೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಸಹ ರಾತ್ರಿ ಶೋಗಳನ್ನು ರದ್ದು ಮಾಡಲಾಗಿದೆ. ನಗರ ಪ್ರದೇಶದ ಕೆಲವು ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿಯೂ ಸಹ ತಡ ರಾತ್ರಿ ಶೋ ಗಳನ್ನು ರದ್ದು ಮಾಡಲಾಗಿದೆ.

  ಈಗಾಗಲೇ ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಈಗ ದಿನದ ಒಂದು ಶೋ ರದ್ದಾದಲ್ಲಿ ಸಿನಿಮಾ ನಿರ್ಮಾಪಕರಿಗೆ ದೊಡ್ಡ ನಷ್ಟವೇ ಆಗಲಿದೆ.

  ತಮಿಳುನಾಡು ಚಿತ್ರಮಂದಿರಗಳ ಮೇಲೆ ನಿರ್ಬಂಧ: ಧನುಷ್, ವಿಜಯ್ ಸೇತುಪತಿ ಸಿನಿಮಾಗಳಿಗೆ ಸಂಕಷ್ಟತಮಿಳುನಾಡು ಚಿತ್ರಮಂದಿರಗಳ ಮೇಲೆ ನಿರ್ಬಂಧ: ಧನುಷ್, ವಿಜಯ್ ಸೇತುಪತಿ ಸಿನಿಮಾಗಳಿಗೆ ಸಂಕಷ್ಟ

  ಮಹಾರಾಷ್ಟ್ರ ರಾಜ್ಯದಲ್ಲಿ ಚಿತ್ರಮಂದಿರಗಳನ್ನು ಪೂರ್ಣವಾಗಿ ಬಂದ್ ಮಾಡಲಾಗಿದೆ. ಕರ್ನಾಟಕ, ತಮಿಳುನಾಡು, ಇನ್ನೂ ಕೆಲವು ರಾಜ್ಯಗಳಲ್ಲಿ 50% ಆಸನ ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಇನ್ನೂ ನಿರ್ಬಂಧ ಹೇರಿಲ್ಲವಾದರೂ ನಿರ್ಬಂಧ ಹೇರುವ ಬಗ್ಗೆ ಚರ್ಚೆ ಜಾರಿಯಲ್ಲಿದೆ.

  English summary
  Inox and some other multiplex cancel their night shows due to night curfew.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X