ಜೈಲಿನಲ್ಲೇ ಕಿತ್ತಾಡಿಕೊಂಡ್ರಾ ದರ್ಶನ್ ಹಾಗೂ ಪ್ರದೋಶ್? ಡಿ ಗ್ಯಾಂಗ್‌ನಲ್ಲಿ ಭುಗಿಲೆದ್ದಿತೇ ಅಸಮಧಾನ?

By ಫಿಲ್ಮಿಬೀಟ್ ಡೆಸ್ಕ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಪರಾಧಿ ಅಲ್ಲ ಅಂತ ನ್ಯಾಯಾಲಯ ಹೇಳುವವರೆಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿ ಬರಬಹುದು.

ದರ್ಶನ್ ಜೊತೆ ಪವಿತ್ರಾ ಗೌಡ ಸೇರಿದಂತೆ ಅವರ ಗ್ಯಾಂಗ್ ಕೂಡ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ದರ್ಶನ್ ಮೂರು ಬಾರಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ನಿನ್ನೆ (ಜುಲೈ 18) ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಹೀಗಾಗಿ ಸದ್ಯಕ್ಕೆ ದರ್ಶನ್‌ಗೆ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ ಅನ್ನೋದು ಮನವರಿಕೆಯಾಗಿದೆ.

Inside story Darshan had a verbal fight with Pradosh in Parappana Agrahara Jail

ಸದ್ಯಕ್ಕಿಗ ಮಾಧ್ಯಮಗಳಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹಾಗೂ ಅವರ ಗ್ಯಾಂಗ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಆಪ್ತ ಪ್ರದೋಶ್ ಜೊತೆ ಕಿತ್ತಾಡಿಕೊಂಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಸಲಿಗೆ ದರ್ಶನ್ ಹಾಗೂ ಗ್ಯಾಂಗ್ ನಡುವೆ ಭಿನ್ನಾಭಿಪ್ರಾಯ ಮೂಡಿದೆಯಾ? ದರ್ಶನ್-ಪ್ರದೋಶ್ ಕಿತ್ತಾಟಕ್ಕೆ ಕಾರಣವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ದರ್ಶನ್‌ಗೆ ಜೈಲು ವಾಸ ಸಾಕಾಗಿರುವ ಹಾಗೆ ಕಾಣಿಸುತ್ತಿದೆ. ಇತ್ತೀಚೆಗಷ್ಟೇ ದರ್ಶನ್ ಪರ ವಕೀಲರು ಮನೆಯೂಟ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಹಾಸಿಗೆ ಹಾಗೂ ಓದಲು ಪುಸ್ತಕಬೇಕು ಎಂದು ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಕೆಲವು ದಿನಗಳಿಂದ ದರ್ಶನ್ ತಮ್ಮ ಗ್ಯಾಂಗ್‌ನೊಂದಿಗೇ ಮಾತಾಡುತ್ತಿಲ್ಲ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೀಗ ತಮ್ಮ ಗ್ಯಾಂಗ್ ಜೊತೆನೇ ಜೈಲಿನಲ್ಲಿ ಕಿತ್ತಾಡಿಕೊಂಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ.

ಜೈಲಿಗೆ ಹೋದ ಬಳಿಕ ದರ್ಶನ್ ಮತ್ತು ಅವರ ಗ್ಯಾಂಗ್ ಮಧ್ಯೆ ಅಸಮಾಧಾನ ಹೆಚ್ಚಾಗಿದೆ ಎನ್ನಲಾಗಿದೆ. ಅದೂ ಪ್ರದೋಶ್ ವಿರುದ್ಧ ದರ್ಶನ್ ಕಿಡಿಕಾರಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಪ್ರದೋಶ್‌ಗೆ ದರ್ಶನ್ "ನಿನ್ನಿಂದಲೇ ಇಷ್ಟೆಲ್ಲ ಆಗಿದೆ. ನನಗೆ ಬಿಟ್ಟಿದ್ದರೆ ನಾನೇ ಎಲ್ಲವನ್ನೂ ನೋಡಿಕೊಳ್ಳುತ್ತಿದೆ. ನಿನ್ನ ನಂಬಿದ್ದಕ್ಕೆ ನಾನು ಜೈಲಿಗೆ ಬರುವ ಸ್ಥಿತಿ ಬಂತು" ಎಂದು ನಟ ದರ್ಶನ್ ಮತ್ತೊಬ್ಬರ ಆರೋಪಿ ಪ್ರದೋಶ್ ವಿರುದ್ಧ ಆರೋಪ ಹೊರಿಸಿದ್ದರು ಎನ್ನಲಾಗಿದೆ.

Inside story Darshan had a verbal fight with Pradosh in Parappana Agrahara Jail

ಪ್ರದೋಶ್ ವಿರುದ್ಧ ದರ್ಶನ್ ನಡೆದುಕೊಂಡಿದ್ದನ್ನು ನೋಡಿ ಆರೋಪಿಗಳು ಶಾಕ್ ಆಗಿದ್ದಾರಂತೆ. ಅವರೆಲ್ಲರೂ ಒಟ್ಟಾಗಿ ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ. ​​ ಆರೋಪಿ ಪ್ರದೋಶ್ ವಿರುದ್ಧ ದರ್ಶನ್ ಕಿತ್ತಾಡಿದ ಬಳಿಕ ಉಳಿದ ಆರೋಪಿಗಳು ಒಟ್ಟಾಗುತ್ತಿದ್ದಾರೆ ಎನ್ನಲಾಗಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ A14 ಆರೋಪಿಯಾಗಿದ್ದಾರೆ. ದರ್ಶನ್ ಜೊತೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೃಂದಾವನ ಹಾಗೂ ಬುಲ್ ಬುಲ್ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲಿಂದ ದರ್ಶನ್ ಜೊತೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅಧಿಕೃತವಾಗಿ ಯಾರೂ ಹೇಳಿಕೆಯನ್ನು ನೀಡಿಲ್ಲ.

More from Filmibeat

English summary
Inside story; Darshan had a fight with Pradosh in Jail:
Read more about: darshan jail ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X