''ನನ್ನವಳೆ ನನ್ನವಳೆ..'' ಮತ್ತೆ ಕಾಡುತ್ತಿದೆ ಸೋನು ನಿಗಮ್ ಧ್ವನಿ
'ನನ್ನವಳೆ ನನ್ನವಳೆ ಪ್ರೀತಿಸು ಎಂದವಳೆ..' ಹಾಡು ಕೆಲವು ದಿನಗಳಿಂದ ಎಲ್ಲರ ಬಾಯಲ್ಲಿ ಹರಿದಾಡುತ್ತಿದೆ. ಯೂ ಟ್ಯೂಬ್ ನಲ್ಲಿ ಈ ಇಂಪಾದ ಹಾಡಿಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ.
'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದ ಮೊದಲ ಹಾಡು ಇದಾಗಿದೆ. ಡಿಸೆಂಬರ್ 20 ರಂದು ಬಿಡುಗಡೆಯಾದ ಈ ಹಾಡು ಸದ್ಯ 2 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಹಾಡು ತುಂಬ ಚೆನ್ನಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಹಾಡನ್ನು ಹೊಗಳಿದ್ದಾರೆ.
ಅನೂಪ್ ಸೀಳಿನ್ ಸಂಗೀತ, 'ಕಿರಿಕ್ ಪಾರ್ಟಿ' ಖ್ಯಾತಿಯ ಧನಂಜಯ್ ರಂಜನ್ ಸಾಹಿತ್ಯ ಹಾಗೂ ಸೋನು ನಿಗಮ್ ಧ್ವನಿ ಹಾಡಿಗೆ ಜೀವ ನೀಡಿದೆ. ಸಂಗೀತ, ಸಾಹಿತ್ಯ, ಗಾಯಕ ಮೂರೂ ತುಂಬ ಇಷ್ಟ ಆಗುತ್ತದೆ. ಸಂಗೀತದ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದೆ.

ಪ್ರಜ್ವಲ್ ದೇವರಾಜ್ ಇಲ್ಲಿ ಪೋಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಭಾವನ ಕ್ಯೂಟ್ ಆಗಿ ಹಾಡಿನಲ್ಲಿ ಕಾಣುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಧರ್ಮಣ್ಣ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಖತ್ ಬ್ಯುಸಿಯಾಗಿರುವ ಧರ್ಮಣ್ಣ, ಈ ಚಿತ್ರದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ.
ಹಾಡಿನ ಮೇಕಿಂಗ್ ತುಂಬ ಚೆನ್ನಾಗಿ ಮಾಡಿದ್ದಾರೆ. ಒಳ್ಳೆಯ ವಿಶ್ಯೂವಲ್ಸ್ ಹಾಡಿನಲ್ಲಿದೆ. 'ಮಫ್ತಿ' ಖ್ಯಾತಿಯ ನವೀನ್ ಕುಮಾರ್ ಸಿನಿಮಾಟೋಗ್ರಾಫಿ ಮಾಡಿದ್ದಾರೆ. ಹರೀಶ್ ಕೊಮ್ಮೆ ಸಂಕಲನ ಇದೆ.
ವಿಕ್ರಂತ್ ಚಿತ್ರ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಕಥೆ, ಚಿತ್ರಕತೆ ಹಾಗೂ ನಿರ್ದೇಶನ ಶ್ರೀನರಸಿಂಹ ಅವರದ್ದಾಗಿದೆ.


Click it and Unblock the Notifications











