For Quick Alerts
  ALLOW NOTIFICATIONS  
  For Daily Alerts

  '777 ಚಾರ್ಲಿ' ಸಿನಿಮಾ ಎಫೆಕ್ಟ್: ಬೀದಿ ನಾಯಿಗಳಿಗೂ ಬಂತು ಪುನರ್ವಸತಿ ಕೇಂದ್ರ

  By ಮೈಸೂರು ಪ್ರತಿನಿಧಿ
  |

  ನಾಯಿ ಹಾಗೂ ಮನುಷ್ಯನ ನಡುವಿನ ಭಾವುಕ ಸಂಬಂಧದ ಕುರಿತಾದ ಕಥಾಹಂದರವುಳ್ಳ '777 ಚಾರ್ಲಿ' ಸಿನಿಮಾ ಸಿನಿ ಪ್ರೇಕ್ಷಕರನ್ನು ಮೋಡಿ ಮಾಡಿದ ಬೆನ್ನಲ್ಲೇ ಇದೇ ಸಿನಿಮಾದಿಂದ ಸ್ಪೂರ್ತಿ ಪಡೆದು ಮೈಸೂರಿನಲ್ಲಿ ಬೀದಿ ಬದಿಯ ನಾಯಿಗಳಿಗೆ ಆರೈಕೆ ಮಾಡುವ ಉದ್ದೇಶದಿಂದ ಪುನರ್ವಸತಿ ಕೇಂದ್ರವೊಂದು ತಲೆ ಎತ್ತುತ್ತಿದೆ.

  ಚಾರ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಶ್ವಾನಗಳ ಬಗ್ಗೆ ಹೆಚ್ಚಿನ ಕಾಳಜಿ ಕಾಣುತ್ತಿದೆ. ಈ ಸಿನಿಮಾದಿಂದ ಸಾಕು ಪ್ರಾಣಿಗಳನ್ನು ಸಾಕುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಜೊತೆಗೆ ಚಾರ್ಲಿ ಸಿನಿಮಾದಲ್ಲಿ ಅಭಿನಯಿಸಿದ್ದ ಶ್ವಾನಕ್ಕಂತೂ ಪರಭಾಷೆಗಳಿಂದಲೂ ಬೇಡಿಕೆ ಬರುತ್ತಲೇ ಇದೆ.

  ಥೈಲ್ಯಾಂಡ್‌ನಲ್ಲಿ ರಕ್ಷಿತ್ ಶೆಟ್ಟಿ & '777 ಚಾರ್ಲಿ' ಟೀಂ!ಥೈಲ್ಯಾಂಡ್‌ನಲ್ಲಿ ರಕ್ಷಿತ್ ಶೆಟ್ಟಿ & '777 ಚಾರ್ಲಿ' ಟೀಂ!

  ಎಲ್ಲರಿಗೂ ಒಂದೊಳ್ಳೆ ಕಾಲ ಬರುತ್ತದೆ ಅಂತಾರಲ್ಲ... ಹಾಗೇ ಈಗ ಸಾಕುನಾಯಿಗಳಿಗೂ ಒಳ್ಳೆ ಕಾಲ ಬಂದಿದೆ. ಚಾರ್ಲಿ ಸಿನಿಮಾದ ಪ್ರಭಾವದಿಂದ ಮೈಸೂರಿನಲ್ಲಿ ಪ್ರೀತಿ ಹಂಚುವ ಸಾಕು ನಾಯಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಲ್ಯಾಬ್ರಡರ್‌ ಗೆ 15ರಿಂದ 20ಸಾವಿರ ರೂ., ಶಿಡ್ಸ್ 25 ಸಾವಿರ, ಗೋಲ್ಡನ್ ರಿಟ್ರಿವರ್ 20 ಸಾವಿರ, ಪಗ್ 25 ಸಾವಿರ, ಗೇಟ್ ಡೆನ್ 30ರಿಂದ 1.5 ಲಕ್ಷ, ಸೇಂಟ್ ಬಾಂಡ್ಸ್ 40ರಿಂದ 2 ಲಕ್ಷ ಕೋಕೊಸ್ ಪ್ಯಾನಿಯಲ್ 20 ಸಾವಿರ, ಪಮೋರಿಯನ್ 7 ಸಾವಿರ, ಮಾಲೀಸ್ 40 ಸಾವಿರ, ಹಸ್ಕಿ 30 ರಿಂದ 60 ಸಾವಿರ ರೂಪಾಯಿಯು ಡಿಮ್ಯಾಂಡ್ ಬಂದಿದೆ.

  ಎರಡು ಕೋಟಿ ವೆಚ್ಚದಲ್ಲಿ ಶ್ವಾನ ಆರೈಕೆ ಕೇಂದ್ರ

  ಎರಡು ಕೋಟಿ ವೆಚ್ಚದಲ್ಲಿ ಶ್ವಾನ ಆರೈಕೆ ಕೇಂದ್ರ

  ಮನುಷ್ಯರಂತೆ ಪ್ರಾಣಿಗಳಿಗೂ ಈ ಜಗತ್ತಿನಲ್ಲಿ ಬದುಕುವ ಎಲ್ಲಾ ರೀತಿಯ ಹಕ್ಕು ಇದೆ. ಜೊತೆಗೆ ಪ್ರಾಣಿಗಳ ನಿರ್ಲಿಪ್ತವಾಗಿ ಬದುಕುವ ವಾತಾವರಣವನ್ನು ನಾಗರಿಕ ಸಮಾಜ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್, 2 ಕೋಟಿ ವೆಚ್ಚದಲ್ಲಿ ಶ್ವಾನಗಳಿಗೆಂದೆ ಆರೈಕೆ‌ ಕೇಂದ್ರ ನಿರ್ಮಾಣ‌ ಮಾಡುತ್ತಿದ್ದಾರೆ.

  ತಿಂಗಳಾಂತ್ಯದಲ್ಲಿ ಚಾಲನೆ

  ತಿಂಗಳಾಂತ್ಯದಲ್ಲಿ ಚಾಲನೆ

  ಮನೆಯಲ್ಲಿ ಸಾಕುವ ನಾಯಿಗಳಿಗೇನೋ ಮಾಲೀಕರು ಜಫಪಾನ ಮಾಡುತ್ತಾರೆ. ಆದರೆ, ಬೀದಿನಾಯಿಗಳ ರಕ್ಷಣೆಗೆ ಯಾರೂ ಇರುವುದಿಲ್ಲ. ಇವುಗಳೂ ಅನಾರೋಗ್ಯದಿಂದ ಸಾಯಬಾರದು. ಅವುಗಳಿಗೂ ಆಶ್ರಯ, ಆರೈಕೆ ಸಿಗಬೇಕೆಂಬ ಉದ್ದೇಶದಿಂದ ಮೈಸೂರಿನ ಎಚ್‌.ಡಿ. ಕೋಟೆ ರಸ್ತೆಯ ರಾಯನಕೆರೆ ಬಳಿ ಎರಡೂವರೆ ಎಕರೆ ಜಾಗದಲ್ಲಿ ಪುನವರ್ಸತಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಕ್ರಿಯೆ ಮುಗಿದಿದ್ದು, ರಾಮದಾಸ್ ಅವರು ತಮ್ಮ ಶಾಸಕರ ನಿಧಿ ಯಿಂದ ಅದಕ್ಕಾಗಿ ಎರಡು ಕೋಟಿ ರೂ. ಮೀಸಲಿಟ್ಟಿದ್ದಾರೆ.

  ಅಂತ್ಯಸಂಸ್ಕಾರಕ್ಕೂ ಜಾಗ

  ಅಂತ್ಯಸಂಸ್ಕಾರಕ್ಕೂ ಜಾಗ

  'ಒಂದು ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸ್ಥಾನ ಮೃತಪಟ್ಟರೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಅದಕ್ಕೆ ಬೇಕಾದ ವಿದ್ಯುತ್ ಚಾಲಿತ ಸುಡುವ ಯಂತ್ರಕ್ಕೆ ಶಾಸಕರು ಆರ್ಡರ್ ಕೊಟ್ಟಿದ್ದಾರೆ. ಇದರೊಂದಿಗೆ ಮೈಸೂರಿನಲ್ಲಿರುವ ಶಾನ ಪ್ರಿಯರು ಹಾಗೂ ವಿವಿಧ ಸಂಘ-ಸಂಸ್ಥೆಗಳನ್ನು ಒಟ್ಟುಗೂಡಿಸಿಕೊಂಡು 'ಡಾಗ್ ಅಸೋಸಿಯೇಷನ್‌' ಮಾಡಲಾಗುವುದು. ಖರ್ಚು-ವೆಚ್ಚವನ್ನು ನಾವು ಕೊಡುತ್ತೇವೆ. ಈ ಅಸೋಸಿಯೇಷನ್ ಕೇಂದ್ರದ ನಿರ್ವಹಣೆ ಮಾಡುತ್ತದೆ,'' ಎನ್ನುತ್ತಾರೆ ಶಾಸಕ ಎಸ್‌.ಎ. ರಾಮದಾಸ್.

  Recommended Video

  Kranti Release Date | ಕ್ರಾಂತಿ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಅಪ್ಡೇಟ್ | Darshan Thoogudeepa *Sandalwood
  ಚಿಕಿತ್ಸೆ ಹೇಗೆ?

  ಚಿಕಿತ್ಸೆ ಹೇಗೆ?

  ಹೋಟೆಲ್, ರಸ್ತೆ ಹಾಗೂ ಪಾರ್ಕ್ ಬಳಿ ಅಸ್ವಸ್ಥಗೊಂಡು ಬಿದ್ದಿರುವ, ತುತ್ತಾಗಿರುವ ಅನಾರೋಗ್ಯಕ್ಕೆ ಶ್ವಾನಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಕೊಟ್ಟರೆ ಸಾಕು ಅವುಗಳನ್ನು ಈ ಪುನವರ್ಸತಿ ಕೇಂದ್ರಕ್ಕೆ ಕರೆ ತಂದು ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತದೆ. ಕಾಯಿಲೆಯಿಂದ ಸ್ಥಾನ ಗುಣಮುಖವಾದ ಮೇಲೆ ಮತ್ತ ರಸ್ತೆಗೆ ಬಿಡಲಾಗುತ್ತದೆ. ದೀರ್ಘಕಾಲ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹ ಶ್ವಾನವನ್ನು ಕೇಂದ್ರದಲ್ಲೇ ಇಟ್ಟು ಚಿಕಿತ್ಸೆ ನೀಡಲಾಗುತ್ತದೆ.

  English summary
  Inspired by 777 Charlie movie Dog case center in Mysore. MLA Ramdas said 2 crore rs spending on dog care center.
  Thursday, August 4, 2022, 9:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X