twitter
    For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ ಸರ್ಜಾ ಖಾತೆಗೆ 'ಚಿರಸ್ಮರಣೀಯ' ಗೌರವ ನೀಡಿದ ಇನ್‌ಸ್ಟಾಗ್ರಾಂ

    |

    ಕಳೆದ ತಿಂಗಳ ಇದೇ ದಿನ (ಜೂನ್ 7) ಇಡೀ ಕರ್ನಾಟಕ ದುಃಖದ ಮಡುವಿನಲ್ಲಿತ್ತು. ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಕಹಿ ಸುದ್ದಿ ಎಲ್ಲರನ್ನೂ ದಿಗ್ಭ್ರಾಂತಿಗೊಳಿಸಿತ್ತು. ಬೇರೆ ಭಾಷೆಯ ಚಿತ್ರರಂಗದ ತಾರೆಯರೂ ಚಿರು ಸಾವಿಗೆ ಮಿಡಿದಿದ್ದರು. ಇನ್ನೂ ಆ ನೋವು ಜನರನ್ನು ಕಾಡುತ್ತಿದೆ. ಸಾಲು ಸಾಲು ಸರಣಿ ಸಾವಿನ ನಡುವೆ ಚಿರು ಅಗಲಿಕೆಯ ಘಟನೆಯನ್ನು ಅಷ್ಟು ಸುಲಭವಾಗಿ ಮರೆಯಲಾಗದು.

    Recommended Video

    ಅಂಬರೀಷ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ | Sumalatha Ambareesh | Filmibeat Kannada

    ಚಿರಂಜೀವಿ ಸರ್ಜಾ ಅಗಲಿ ಇಂದಿಗೆ (ಜುಲೈ 7) ಒಂದು ತಿಂಗಳು. ಚಿರು ಅಗಲಿದ ಹನ್ನೊಂದು ದಿನಗಳ ಬಳಿಕ ಅವರ ಪತ್ನಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೃದಯ ಕಲಕುವ ಬರಹಗಳನ್ನು ಹಂಚಿಕೊಂಡಿದ್ದರು. ಅದನ್ನು ಚಿರಂಜೀವಿ ಸರ್ಜಾ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಹಂಚಿಕೊಂಡಿದ್ದರು. ಚಿರಂಜೀವಿ ಸರ್ಜಾ ನೆನಪಿಗಾಗಿ ಅವರ ಖಾತೆಯನ್ನು ಜೀವಂತವಾಗಿರಿಸಿದ್ದರು. ಈಗ ಇನ್‌ಸ್ಟಾಗ್ರಾಂ ಚಿರಂಜೀವಿ ಅವರ ಖಾತೆಯನ್ನು 'ಸ್ಮರಣೀಯ'ಗೊಳಿಸಿದೆ. ಮುಂದೆ ಓದಿ...

    ರಿಮೆಂಬರಿಂಗ್ ಫೀಚರ್

    ರಿಮೆಂಬರಿಂಗ್ ಫೀಚರ್

    ಚಿರಂಜೀವಿ ಸರ್ಜಾ ಅಗಲಿ ಸರಿಯಾಗಿ ಒಂದು ತಿಂಗಳ ಬಳಿಕ ಇನ್‌ಸ್ಟಾಗ್ರಾಂ, ಅವರ ಖಾತೆಗೆ 'ರಿಮೆಂಬರಿಂಗ್' ಫೀಚರ್ ಅಳವಡಿಸಿದೆ. ಮೃತಪಟ್ಟ ತಾರೆಯ ಖಾತೆಯನ್ನು ಚಿರಸ್ಮರಣೀಯವಾಗಿಸುವುದು ಈ ಫೀಚರ್‌ನ ಉದ್ದೇಶ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಕೂಡ ಸ್ಮರಣೀಯಗೊಳಿಸಲಾಗಿದೆ.

    'ನಾನು ನಗಲು ಚಿರು ಕಾರಣ...': ಮೇಘನಾ ರಾಜ್ ಬರೆದ ಹೃದಯಸ್ಪರ್ಶಿ ಬರಹ'ನಾನು ನಗಲು ಚಿರು ಕಾರಣ...': ಮೇಘನಾ ರಾಜ್ ಬರೆದ ಹೃದಯಸ್ಪರ್ಶಿ ಬರಹ

    ಇನ್‌ಸ್ಟಾಗ್ರಾಂ ಗೌರವ

    ಇನ್‌ಸ್ಟಾಗ್ರಾಂ ಗೌರವ

    ಚಿರಂಜೀವಿ ಸರ್ಜಾ ಅವರ ಹೆಸರಿನ ಕೆಳಗೆ 'ರಿಮೆಂಬರಿಂಗ್' ಎಂಬ ಪದವನ್ನು ಅಳವಡಿಸಲಾಗಿದೆ. ಅವರ ಖಾತೆ ಇನ್ನು ಮುಂದೆ ಚಿರಸ್ಮರಣೆಯಾಗಿ ಉಳಿಯಲಿದೆ ಎನ್ನುವುದು ಇದರ ಅರ್ಥ. ಇದು ನಿಧನರಾದ ವ್ಯಕ್ತಿಗೆ ಇನ್‌ಸ್ಟಾಗ್ರಾಂ ಸಂಸ್ಥೆ ಸಲ್ಲಿಸುವ ಗೌರವವಾಗಿದೆ.

    ಲಾಗಿನ್ ಆಗಲು ಸಾಧ್ಯವಿಲ್ಲ

    ಲಾಗಿನ್ ಆಗಲು ಸಾಧ್ಯವಿಲ್ಲ

    ವಾಸ್ತವವಾಗಿ 'ರಿಮೆಂಬರಿಂಗ್' ಫೀಚರ್ಅನ್ನು ಅಳವಡಿಸಿದ ಬಳಿಕ ಬೇರೆ ಯಾರೂ ಆ ಖಾತೆಗೆ ಲಾಗಿನ್ ಆಗಲು ಸಾಧ್ಯವಿಲ್ಲ. ಹಾಗೆಯೇ ಅದರಲ್ಲಿ ಪೋಸ್ಟ್‌ಗಳನ್ನು ಅಳಿಸಲು ಅಥವಾ ಹೊಸ ಪೋಸ್ಟ್ ಹಾಕಲು ಅವಕಾಶವಿಲ್ಲ. ಆದರೆ ಆ ಖಾತೆ ಶಾಶ್ವತವಾಗಿ ಉಳಿಯಲಿದೆ. ಹಳೆಯ ಪೋಸ್ಟ್‌ಗಳು ಫಾಲೋವರ್‌ಗಳಿಗೆ ವೀಕ್ಷಣೆಗೆ ಲಭ್ಯ. ಹೊಸ ಬಳಕೆದಾರರೂ ಖಾತೆಯನ್ನು ಫಾಲೋ ಮಾಡಬಹುದು.

    ಚಿರಂಜೀವಿ ಸರ್ಜಾ ಅಗಲಿ ಒಂದು ತಿಂಗಳು: ನಗುಮೊಗದ ಚಿರುವನ್ನು ಆಪ್ತರು ಸ್ಮರಿಸಿದ್ದು ಹೀಗೆ...ಚಿರಂಜೀವಿ ಸರ್ಜಾ ಅಗಲಿ ಒಂದು ತಿಂಗಳು: ನಗುಮೊಗದ ಚಿರುವನ್ನು ಆಪ್ತರು ಸ್ಮರಿಸಿದ್ದು ಹೀಗೆ...

    ನಗುವಿನೊಂದಿಗೆ ಚಿರು ಸ್ಮರಣೆ

    ನಗುವಿನೊಂದಿಗೆ ಚಿರು ಸ್ಮರಣೆ

    ಚಿರಂಜೀವಿ ಅಗಲಿ ಒಂದು ತಿಂಗಳು ಕಳೆದ ಸಂದರ್ಭದಲ್ಲಿ ಅವರ ಆತ್ಮೀಯ ಸ್ನೇಹಿತ, ನಿರ್ದೇಶಕ ಪನ್ನಗಾಭರಣ ಮನೆಯಲ್ಲಿ ಆಪ್ತರು ಸೇರಿದ್ದರು. ತಮ್ಮ ಮನೆಯ ಒಂದು ಭಾಗವನ್ನು ಪನ್ನಗಾಭರಣ, ಚಿರಂಜೀವಿ ಸರ್ಜಾ ಅವರಿಗಾಗಿ ಮೀಸಲಿಟ್ಟಿದ್ದಾರೆ. ಅಲ್ಲಿ ಅವರ ಫೋಟೊ ಪ್ರತಿಷ್ಠಾಪಿಸಿದ್ದಾರೆ. ನಗುತ್ತಿರುವ ಚಿರು ಫೋಟೊ ಮುಂದೆ ಎಲ್ಲರೂ ಜತೆಯಾಗಿ ಕುಳಿತು ನಗುತ್ತಾ ಫೋಟೊಗಳನ್ನು ತೆಗೆಸಿಕೊಳ್ಳುವ ಮೂಲಕ ಚಿರುಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಚಿರು ಬದುಕಿನ ನೀತಿಯಂತೆ ಅವರನ್ನು ನೆನಪಿಸಿಕೊಂಡು ನಗುತ್ತಲಿರುತ್ತೇವೆ ಎಂಬ ಸಂದೇಶ ನೀಡಿದ್ದಾರೆ.

    ಅಣ್ಣನನ್ನು ಕಳೆದುಕೊಂಡು ಖಿನ್ನತೆಗೆ ಜಾರಿದರೇ ಧ್ರುವ ಸರ್ಜಾ?ಅಣ್ಣನನ್ನು ಕಳೆದುಕೊಂಡು ಖಿನ್ನತೆಗೆ ಜಾರಿದರೇ ಧ್ರುವ ಸರ್ಜಾ?

    English summary
    Demised actor Chiranjeevi Sarja's Instagram page has been memorialized as it was added by Remembering feature.
    Wednesday, July 8, 2020, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X