ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್, ನಿನ್ನೆ ಸುದ್ದಿಗೋಷ್ಠಿ ನಡೆಸಿ ಹಲವು ವಿಷ್ಯಗಳನ್ನ ಮಾತನಾಡಿದರು. ಆದ್ರೆ, ಸರ್ಜಾ ಮೇಲೆ ದೂರಿರುವ ಯಾವ ವಿಷ್ಯಕ್ಕೂ ದಾಖಲೆ ಮತ್ತು ಸಾಕ್ಷಿಗಳನ್ನ ನೀಡಿಲ್ಲ.

ಇದು ಸಹಜವಾಗಿ ಶ್ರುತಿ ಹರಿಹರನ್ ಮೇಲೆ ಅನುಮಾನ ಮೂಡಿಸುತ್ತಿದೆ. ಇದೊಂದು ಘಟನೆ ಮಾತ್ರವಲ್ಲ, ಶ್ರುತಿ ಅವರ ಈ MeToo ಅಭಿಯಾನವನ್ನ ಸ್ವಲ್ಪ ಆಳವಾಗಿ ಗಮನಿಸಿದ್ರೆ ಮತ್ತಷ್ಟು ಇಂಟ್ರೆಸ್ಟಿಂಗ್ ಅಂಶಗಳು ಗಮನ ಸೆಳೆಯುತ್ತಿದೆ.

ಒಂದೂವರೆ ವರ್ಷದ ಹಿಂದೆ ನಡೆದಿದ್ದ ಈ ಘಟನೆಯನ್ನ ಈಗ ಹೇಳಿರುವುದು ತೀವ್ರ ಖಂಡನೆಗೆ ಗುರಿಯಾಗಿದೆ. ಇದನ್ನೆಲ್ಲಾ ಗಮನಿಸಿದ ಜನರು ಲೂಸಿಯಾ ಹುಡುಗಿಯ ಆಪಾದನೆ ಮೇಲೆ ನೆಗಿಟೀವ್ ಆಗಿ ನೋಡವಂತಾಗಿದೆ. ಅಷ್ಟಕ್ಕೂ, ಶ್ರುತಿ ಉತ್ತರಿಸಬೇಕಾಗಿರುವ ಹಾಗೂ ಈ ಪ್ರಕರಣ ಬಗ್ಗೆ ಅನುಮಾನ ಬರಲು ಕಾರಣವಾಗಿರುವ ಆ ಅಂಶಗಳು ಯಾವುದು.? ಮುಂದೆ ಓದಿ.....

ಇದುವರೆಗೂ ಯಾವುದೇ ಸಾಕ್ಷಿ ಯಾಕೆ ನೀಡಿಲ್ಲ

ಇದುವರೆಗೂ ಯಾವುದೇ ಸಾಕ್ಷಿ ಯಾಕೆ ನೀಡಿಲ್ಲ

ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಕೂಡ ಇದೆ ಎಂದಿದ್ದಾರೆ. ಆದ್ರೆ, ಇದುವರೆಗೂ ಯಾವುದೇ ಸಾಕ್ಷಿ-ಆಧಾರ ಬಹಿರಂಗಪಡಿಸಿಲ್ಲ. ಸಾಕ್ಷಿ ಅಥವಾ ಆಧಾರವಿಲ್ಲದೇ ಯಾರೂ ಯಾವುದನ್ನು ನಂಬುವುದಿಲ್ಲ. ಇಂತಹ ಗಂಭೀರವಾದ ಆರೋಪ ಮಾಡಬೇಕಾದರೇ ಸಾಕ್ಷಿಯ ಅಗತ್ಯವಿದೆ. ಫೋನ್ ಸಂಭಾಷಣೆ, ಮೆಸೆಜ್ ಚಾಟ್, ವಾಟ್ಸಾಪ್ ಚಾಟ್ ಅಥವಾ ವಿಡಿಯೋ ರೆಕಾರ್ಡ್ ಇಲ್ಲವಾ ಎಂಬ ಪ್ರಶ್ನೆ ಮಾಡುತ್ತಿದ್ದಾರೆ.

ಆಗ ನಡೆದಿದ್ದು ಈಗ್ಯಾಕೆ ಹೇಳ್ತಿದ್ದಾರೆ.?

ಆಗ ನಡೆದಿದ್ದು ಈಗ್ಯಾಕೆ ಹೇಳ್ತಿದ್ದಾರೆ.?

ಈ ಘಟನೆ ನಡೆದ ಒಂದೂವರೆ ವರ್ಷ ಆಗಿದೆ. ಈಗ ಯಾಕೆ ಹೇಳ್ತಿದ್ದಾರೆ, ಆಗಲೇ ಯಾಕೆ ಹೇಳಿಲ್ಲ ಎಂಬ ಪ್ರಶ್ನೆ ಎಲ್ಲಾ ಕಡೆಯಿಂದಲೂ ಎದುರಾಗ್ತಿದೆ. ಆಗಲೇ ಬಹಿರಂಗವಾಗಿ ಹೇಳಬಹುದಿತ್ತು ಅಲ್ವಾ, ಮಾಧ್ಯಮಗಳು ಇತ್ತು ಹೇಳಬಹುದು, ನಿರ್ದೇಶಕರಿಗೆ ಹೇಳಿ ಆ ಘಟನೆಯನ್ನ ಬಯಲು ಮಾಡಬಹುದು. ಆದ್ರೆ, ಇಷ್ಟು ಸಮಯ ತೆಗೆದುಕೊಂಡು ಹೇಳಲು ಕಾರಣವೇನು.? ಎಂಬ ಅನುಮಾನ ಕಾಡ್ತಿದೆ. ಆದ್ರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರುತಿ ಈಗ ಮೀಟೂ ಅಭಿಯಾನದಿಂದ ಧೈರ್ಯ ಬಂದಿದೆ ಎಂದಿದ್ದಾರೆ.

ಈ ಘಟನೆ ಆದ್ಮೇಲೂ ಪಾಸಿಟೀವ್ ಟಾಕ್ ಯಾಕೆ.?

ಈ ಘಟನೆ ಆದ್ಮೇಲೂ ಪಾಸಿಟೀವ್ ಟಾಕ್ ಯಾಕೆ.?

'ವಿಸ್ಮಯ' ಚಿತ್ರೀಕರಣದ ವೇಳೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಆದ್ರೆ, ಈ ಸಿನಿಮಾ ಬಿಡುಗಡೆ ವೇಳೆಯೂ ಮತ್ತು ಪ್ರೆಸ್ ಮೀಟ್ ಗಳಲ್ಲಿ ಅರ್ಜುನ್ ಸರ್ಜಾ ಬಗ್ಗೆ ಪಾಸೀಟವ್ ಆಗಿ ಮಾತನಾಡಿದ್ದಾರೆ. 'ನಾನು ಅವರ ಅಭಿಮಾನಿ, ಇನ್ನೊಂದು ಸಿನಿಮಾ ಮಾಡ್ಬೇಕು' ಎಂಬ ಮಾತುಗಳನ್ನ ಹಾಗೂ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದರು. ಇದು ಸಹಜವಾಗಿ ಅನುಮಾನ ಮೂಡಿಸುತ್ತಿದೆ.

ಎಲ್ಲಿಯೂ ದೂರು ನೀಡಿಲ್ಲ ಯಾಕೆ.?

ಎಲ್ಲಿಯೂ ದೂರು ನೀಡಿಲ್ಲ ಯಾಕೆ.?

ಶ್ರುತಿ ಹರಿಹರನ್ ಅವರು ಮಾಡಿರುವುದು ಆರೋಪ ಮಾತ್ರ. ಆದ್ರೆ, ಎಲ್ಲಿಯೂ ದೂರು ದಾಖಲಾಗಿಲ್ಲ. ಫಿಲ್ಮಂ ಚೇಂಬರ್ ಗೆ ಆಗಲಿ ಅಥವಾ ಪೊಲೀಸ್ ಠಾಣೆಯಲ್ಲೂ ಎಲ್ಲೂ ದೂರು ದಾಖಲಾಗಿಲ್ಲ. ಇದು ಚಲನಚಿತ್ರರಂಗಕ್ಕೆ ಸಂಬಂಧಪಟ್ಟಿರುವುದರಿಂದ ವಾಣಿಜ್ಯ ಮಂಡಳಿ ಅಥವಾ ಕಲಾವಿದರ ಸಂಘಕ್ಕೆ ದೂರು ನೀಡಬಹುದಾಗಿತ್ತು. ಬಟ್ ಇದುವರೆಗೂ ಆಗಿಲ್ಲ ಎನ್ನುವುದು ಕುತೂಹಲ. ಸದ್ಯ, ತಮ್ಮ ಕಾನೂನು ತಜ್ಞರ ಜೊತೆ ಈ ವಿಷ್ಯದ ಬಗ್ಗೆ ಚರ್ಚೆ ಮಾಡ್ತಿದ್ದಾರೆ.

ಅರ್ಜುನ್ ಸರ್ಜಾ ಮಾತ್ರ ಯಾಕೆ.?

ಅರ್ಜುನ್ ಸರ್ಜಾ ಮಾತ್ರ ಯಾಕೆ.?

ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ಬಾರಿ ಶ್ರುತಿ ಮಾತನಾಡಿದ್ದಾರೆ. ಆದರೆ ಒಬ್ಬರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಅನೇಕ ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಅಂದಿದ್ದರು. ಆದ್ರೀಗ, ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಿರುವುದೇಕೆ ಯಾಕೆ.?

'ವಿಸ್ಮಯ'ದ ನಂತರವೇ ಕಾಸ್ಟಿಂಗ್ ಕೌಚ್ ಸದ್ದು ಮಾಡಿತ್ತು

'ವಿಸ್ಮಯ'ದ ನಂತರವೇ ಕಾಸ್ಟಿಂಗ್ ಕೌಚ್ ಸದ್ದು ಮಾಡಿತ್ತು

ಅಂದ್ಹಾಗೆ, ಶ್ರುತಿ ಹರಿಹರನ್ ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ವಿಸ್ಮಯ ಸಿನಿಮಾ ಮುಗಿದಿತ್ತು. ಬಟ್, ಈ ಘಟನೆಯನ್ನ ಅಲ್ಲಿ ಯಾಕೆ ಹೇಳಲಿಲ್ಲ. ಒಂದೊಳ್ಳೆ ವೇದಿಕೆ ಸಿಕ್ಕಿತ್ತು. ಆಗಲೇ ಹೇಳಬಹುದಿತ್ತು ಅಲ್ವಾ. ಈ ಎಲ್ಲಾ ವಿಷ್ಯಗಳನ್ನ ಮುಂದಿಟ್ಟ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

More from Filmibeat

English summary
Interest facts about arjun sarja and shruthi hariharan controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X