ದರ್ಶನ್ 'ಕೈಕಡಗ' ಬಗ್ಗೆ ಇದ್ದ ಊಹಾಪೋಹಗಳು ಸುಳ್ಳು.!

Recommended Video

Yajamana Movie : ದರ್ಶನ್ ಕೈಯಲ್ಲಿರುವ ಕಡಗದ ಬಗ್ಗೆ ಕುತೂಹಲಕಾರಿ ವಿಷಯ ಬಹಿರಂಗ | FILMIBEAT KANNADA

ಡಾ.ವಿಷ್ಣುವರ್ಧನ್ ಅವರ ಕೈಯಲ್ಲಿರುವ 'ಕಡಗ'ದ ಬಗ್ಗೆ ಗೊತ್ತಿಲ್ಲದ ಕನ್ನಡಿಗರು ಇರೋದು ಬಹಳ ಕಮ್ಮಿ. ಅಷ್ಟು ಜನಪ್ರಿಯ ಆ ಕಡಗ. ವಿಷ್ಣುದಾದ ಅಭಿಮಾನಿಗಳ ಪಾಲಿಗಂತೂ ಅದು ಸಂಸ್ಕೃತಿಯೇ ಆಗಿಬಿಟ್ಟಿದೆ ಬಿಡಿ. ಸಾಹಸ ಸಿಂಹ ಬಳಿಕ ಅಂತಹ ಕಡಗ ಕಂಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಯಲ್ಲಿ.

ಡಿ ಬಾಸ್ ಕೈಯಲ್ಲಿರುವ ಕಡಗದ ಬಗ್ಗೆ ಅನೇಕರಿಗೆ ಕೂತೂಹಲ, ಅನುಮಾನ. ಅದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾತುರ. ಅದು ಯಾರದ್ದು, ಯಾರು ಕೊಟ್ಟಿದ್ದು ಎಂಬ ಕುತೂಹಲ. ಅನೇಕರು ಅದು ವಿಷ್ಣುದಾದ ಅವರದ್ದೇ, ಅವರ ನಿಧನದ ಬಳಿಕ ದರ್ಶನ್ ಗೆ ಕೈಗೆ ಬಂದಿದೆ ಎಂದೇ ನಂಬಿದ್ದಾರೆ.

ಇನ್ನು ಕೆಲವರು ಬಹುಶಃ ಅದನ್ನ ದರ್ಶನ್ ಪ್ರೀತಿಯಿಂದ ಆರಾಧಿಸುವ ಅಂಬರೀಶ್ ಕೊಟ್ಟಿರಬಹುದು ಎಂದು ಅಂದುಕೊಂಡವರು ಇದ್ದಾರೆ. ಆದ್ರೆ, ಈ ಕಡಗದ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಇದೀಗ, ಯಜಮಾನ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮ ಕೈಯಲ್ಲಿರುವ ಕಡಗದ ಹಿಂದಿನ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ಏನದು? ಮುಂದೆ ಓದಿ.....

36 ವರ್ಷದಿಂದ ಕಡಗ ಹಾಕುವ ಅಭ್ಯಾಸವಿದೆ

36 ವರ್ಷದಿಂದ ಕಡಗ ಹಾಕುವ ಅಭ್ಯಾಸವಿದೆ

ದರ್ಶನ್ ಅವರಿಗೆ ಕಡಗ ಹಾಕುವುದು ನಿನ್ನೆ ಅಥವಾ ಮೊನ್ನೆಯಿಂದಲ್ಲ. ಸುಮಾರು 36 ವರ್ಷಗಳಿಂದ ಕೈಯಲ್ಲಿ ಕಡಗ ಹಾಕುತ್ತಿದ್ದಾರಂತೆ. ತಾವು ಮೈಸೂರಿನಲ್ಲಿ ನೆಲೆಸಿದ್ದಾಗ, ಶಾಲೆಗೆ ಹೋಗುವ ಸಂದರ್ಭದಿಂದಲೇ ಕೈಗೆ ಕಡಗ ಹಾಕ್ತಾರಂತೆ ದಾಸ.

ಪಂಜಾಬಿ ಕುಟುಂಬ ಕೊಟ್ಟಿದ್ದು

ಪಂಜಾಬಿ ಕುಟುಂಬ ಕೊಟ್ಟಿದ್ದು

ಮೈಸೂರಿನಲ್ಲಿ ದರ್ಶನ್ ಫ್ಯಾಮಿಲಿ ನೆಲೆಸಿದ್ದ ಮನೆಯ ಮಹಡಿಯಲ್ಲಿ ಪಂಜಾಬಿ ಕುಟುಂಬವೊಂದು ವಾಸವಾಗಿತ್ತು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಒಂದು ಸಲ ಅವರು ಗೋಲ್ಡನ್ ಟೆಂಪಲ್ ಗೆ ಹೋಗಿದ್ದ ವೇಳೆ ಸಣ್ಣದೊಂದು ತಂದು ನನಗೆ ಕೊಟ್ಟಿದ್ದರು. ಅಲ್ಲಿಂದ ನಾನು ಹಾಕ್ತಿದ್ದೀನಿ'' ಎಂದು ಇಂಟರೆಸ್ಟಿಂಗ್ ಕಥೆ ಹೇಳಿದರು.

'ಕಡಗ' ಅಂದ್ರೆ ದರ್ಶನ್ ಗೆ ಒಂಥರಾ ಪ್ರೀತಿ

'ಕಡಗ' ಅಂದ್ರೆ ದರ್ಶನ್ ಗೆ ಒಂಥರಾ ಪ್ರೀತಿ

ವಿಷ್ಣುವರ್ಧನ್ ಅವರಿಗೆ ಕಡಗ ಅಂದ್ರೆ ಅಭಿಮಾನ, ಪ್ರೀತಿ, ಅದೊಂದು ನಂಬಿಕೆ. ಅದೇ ರೀತಿ ದರ್ಶನ್ ಅವರಿಗೂ ಕಡಗ ಅಂದ್ರೆ ಪ್ರೀತಿ, ನಂಬಿಕೆ. ಕಾರಿನ ಅಪಘಾತವಾಗಿದ್ದ ವೇಳೆ ತಮ್ಮ ಕೈಗೆ ಬಲವಾದ ಗಾಯವಾಗಿತ್ತು. ಅಂತಹ ಸಮಯದಲ್ಲೂ ಕೈಯಲ್ಲಿದ್ದ ಕಡಗವನ್ನ ದರ್ಶನ್ ತೆಗೆಯಲಿಲ್ಲ.

ವಿಷ್ಣು ಅವರದ್ದಲ್ಲ, ಅಂಬಿಯದ್ದೂ ಅಲ್ಲ

ವಿಷ್ಣು ಅವರದ್ದಲ್ಲ, ಅಂಬಿಯದ್ದೂ ಅಲ್ಲ

ಇನ್ನು ದರ್ಶನ್ ಅವರ ಕೈಯಲ್ಲಿರುವ ಕಡಗದ ಬಗ್ಗೆ ಅನೇಕ ಊಹಾಪೊಹಗಳಿವೆ. ವಿಷ್ಣುವರ್ಧನ್ ಅವರ ಕಡಗ ದರ್ಶನ್ ಗೆ ಸಿಕ್ಕಿದೆ. ಅಂಬರೀಶ್ ಅವರ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾತುಗಳೆಲ್ಲವೂ ಸತ್ಯ ದೂರವಾಗಿದೆ ಎಂಬುದು ಈಗ ಬಹಿರಂಗವಾಗಿದೆ.

More from Filmibeat

English summary
Interesting fact about kannada actor, challenging star darshan's steel Kada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X