twitter
    For Quick Alerts
    ALLOW NOTIFICATIONS  
    For Daily Alerts

    ಶಿಷ್ಯನ ಸಾವಿನ ಸಮಯದಲ್ಲಿ ಶಂಕರ್ ತೆಗೆದುಕೊಂಡ ನಿರ್ಧಾರ ಕೇಳಿ!

    By Naveen
    |

    Recommended Video

    ಗೆಳಯನ ಸಾವಿಗೆ ಶಂಕರ್ ಸ್ಪಂದಿಸಿದ ರೀತಿಯೇ ವಿಭಿನ್ನ..! | Filmibeat kannada

    ನಟ ಶಂಕರ್ ನಾಗ್ ತಮ್ಮ ಯೋಚನೆಗಳ ಮೂಲಕ ಎಲ್ಲರಿಗಿಂತ ವಿಭಿನ್ನ ಎನಿಸಿಕೊಂಡ ವ್ಯಕ್ತಿ. ದೂರದೃಷ್ಟಿ ಇದ್ದ ಮನುಷ್ಯ. ಸಿನಿಮಾ ಮಾತ್ರವಲ್ಲ ಅದರಿಂದ ಆಚೆಗೆ ತಮ್ಮ ಜೊತೆಗೆ ಇದ್ದವರ ಬಗ್ಗೆಯೇ ಅವರು ಸದಾ ಯೋಚನೆ ಮಾಡುತ್ತಿದ್ದರು.

    ಶಂಕರ್ ನಾಗ್ ಅವರ ಬಗ್ಗೆ ಎಷ್ಟು ತಿಳಿದುಕೊಂಡರು ಕಡಿಮೆಯೇ. ಆ ರೀತಿ ಶಂಕರ್ ಬದುಕಿನ ಒಂದು ಘಟನೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ಈ ಹಿಂದೆ ತಮ್ಮ ಒಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದರು. ಆ ಒಂದು ಘಟನೆ ಸಾಕು ಶಂಕರ್ ಹೇಗೆ ನಮ್ಮೆಲ್ಲರಿಗಿಂತ ಬಿನ್ನವಾಗಿ ಯೋಚನೆ ಮಾಡುತ್ತಾರೆ ಎಂದು ಹೇಳಲು.

    ಶಂಕರ್ ನಾಗ್ ಮತ್ತು ಉಪೇಂದ್ರ ಒಂದೇ ಕಾರಿನಲ್ಲಿ ಹೋಗುವಾಗ... ಶಂಕರ್ ನಾಗ್ ಮತ್ತು ಉಪೇಂದ್ರ ಒಂದೇ ಕಾರಿನಲ್ಲಿ ಹೋಗುವಾಗ...

    ಶಂಕರ್ ನಾಗ್ ಆಪ್ತರಲ್ಲಿ ಒಬ್ಬರು ನಂಜುಂಡಪ್ಪ. ಅವರನ್ನು ಕಂಡರೆ ಶಂಕರ್ ನಾಗ್ ಗೆ ಬಹಳ ಇಷ್ಟ. ಇದೇ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ಶಂಕರ್ ನಾಗ್ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಅವರ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಮುಂದೆ ಓದಿ...

    ಶಂಕರ್ ಬಳಗದ ನಿರ್ದೇಶಕ ನಂಜುಂಡಪ್ಪ

    ಶಂಕರ್ ಬಳಗದ ನಿರ್ದೇಶಕ ನಂಜುಂಡಪ್ಪ

    ಶಂಕರ್ ನಾಗ್ ಆಪ್ತರ ಬಹಳಗದಲ್ಲಿ ಇದ್ದವರಲ್ಲಿ ನಂಜುಂಡಪ್ಪ ಕೂಡ ಒಬ್ಬರು. ನಂಜುಂಡಪ್ಪ ಒಬ್ಬ ನಿರ್ದೇಶಕ ಕೂಡ ಆಗಿದ್ದರು. ವಿಚಿತ್ರ ಅಂದರೆ ಶಂಕರ್ ನಾಗ್ ಮತ್ತು ನಂಜುಂಡಪ್ಪ ಇಬ್ಬರು ಬೇರೆ ಬೇರೆ ರೀತಿಯ ಕಾರ್ಯವೈಖರಿ ಹೊಂದಿದ್ದರು. ಶಂಕರ್ ನಾಗ್ ಸಿಕ್ಕಾಪಟ್ಟೆ ವೇಗದಲ್ಲಿ ಕೆಲಸ ಮಾಡುತ್ತಿದ್ದರೆ, ನಂಜುಂಡಪ್ಪ ಅಷ್ಟೇ ನಿಧಾನದ ಮನುಷ್ಯ.

    ಸಾವಿನ ಸಮಯದ ಘಟನೆ

    ಸಾವಿನ ಸಮಯದ ಘಟನೆ

    ವಿಧಿಯ ಆಟದಿಂದ ಇದ್ದಕ್ಕಿದ್ದ ಹಾಗೆ ನಂಜುಂಡಪ್ಪ ತೀರಿ ಹೋಗುತ್ತಾರೆ. ಈ ವೇಳೆ ಅವರನ್ನು ನೋಡಲು ಹಂಸಲೇಖ ಹಾಗೂ ಶಂಕರ್ ನಾಗ್ ಇಬ್ಬರು ಹೋಗುತ್ತಾರೆ. ಹಂಸಲೇಖ ಮನಸ್ಸಿನಲ್ಲಿ ''ನಂಜುಂಡಪ್ಪ ಬಗ್ಗೆ ಶಂಕರ್ ನಾಗ್ ನೊಂದುಕೊಂಡಿರುತ್ತಾರೆ. ಅವರ ಬಗ್ಗೆ ನೋವಿನ ಮಾತುಗಳನ್ನು ಆಡುತ್ತಾರೆ'' ಎಂದುಕೊಂಡಿದ್ದರಂತೆ. ಆದರೆ, ಆ ಸಮಯಕ್ಕೆ ಶಂಕರ್ ನಾಗ್ ಯೋಚಿಸಿದ ಶೈಲಿ ಹಂಸಲೇಖ ಅವರಿಗೆ ಆಶ್ಚರ್ಯ ಹುಟ್ಟುವಂತೆ ಮಾಡಿತ್ತು.

    ಆತನ ಸಿನಿಮಾ ನಿಲ್ಲಬಾರದು ಎಂದ ಶಂಕರ್

    ಆತನ ಸಿನಿಮಾ ನಿಲ್ಲಬಾರದು ಎಂದ ಶಂಕರ್

    ನಿಧನರಾದ ಶಿಷ್ಯನ ಬಗ್ಗೆ ಕಣ್ಣೀರು ಹಾಕಿ ಸುಮ್ಮನೆ ಕೂರದೆ ಶಂಕರ್ ಅವರ ಸಿನಿಮಾಗೆ ಸಹಾಯ ಮಾಡಿದರು. ಸಾವಿನ ಸಮಯದಲ್ಲಿ ಆತ ಮಾಡುತ್ತಿದ್ದ ಸಿನಿಮಾ ನಿಲ್ಲಬಾರದು. ಆತನಿಂದ ನಿರ್ಮಾಪಕರಿಗೆ ಹಾಗೂ ಕಲಾವಿದರಿಗೆ ತೊಂದರೆ ಆಗಬಾರದು ಎಂದು ಸಿನಿಮಾ ಮುಂದುವರೆಸಿದರು. ಕುಟುಂಬಕ್ಕೆ ಸಹಾಯ ಮಾಡಿದರು. ಈ ಹಿಂದೆ ಅವರ ನಿರ್ದೇಶನದಲ್ಲಿ ಸಹ ಶಂಕರ್ ನಾಗ್ ನಟಿಸಿದ್ದರು.

    ಊಟ ನಿದ್ದೆ ಬಗ್ಗೆ ಗಮನ ಕೊಟ್ಟ ಶಂಕರ್

    ಊಟ ನಿದ್ದೆ ಬಗ್ಗೆ ಗಮನ ಕೊಟ್ಟ ಶಂಕರ್

    ಆ ಸಾವಿನ ನಂತರ ಶಂಕರ್ ನಾಗ್ ತಮ್ಮ ದಿನನಿತ್ಯದ ಬದುಕಿನ ಶೈಲಿ ಬಗ್ಗೆ ಗಮನ ಹರಿಸಿದರಂತೆ. ಊಟ, ನಿದ್ದೆ, ಧ್ಯಾನದ ಬಗ್ಗೆ ಹೆಚ್ಚು ಕಳಜಿ ವಹಿಸಿದರಂತೆ. ಈ ಘಟನೆ ಅವರಿಗೆ ಸಾಧನೆಯ ಜೊತೆಗೆ ನಮ್ಮ ಆರೋಗ್ಯ ಕೂಡ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟಿತ್ತು.

    English summary
    Interesting fact about kannada actor Shankar Nag.
    Friday, September 7, 2018, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X