twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರಲ್ಲಿ ಮನೆಮನೆಗೆ ಹಾಲು ಮಾರ್ತಿದ್ರು ದರ್ಶನ್

    By ಜೀವನರಸಿಕ
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂವತ್ತೇಳನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಯಶಸ್ಸಿನ ರೇಸ್ ನಲ್ಲಿ ನಂಬರ್ ಒನ್ ಆಗಿ ಮುನ್ನುಗ್ತಾ ಇರೋ ಚಾಲೆಂಜಿಂಗ್ ಸ್ಟಾರ್ ಗೆ ಈಗ ಚಾಲೆಂಜ್ ಮಾಡೋರೇ ಇಲ್ಲ. ಇವತ್ತು ಲಕ್ಷಾಂತರ, ಕೋಟ್ಯಂತರ ಅಭಿಮಾನಿಗಳನ್ನ ಹೊಂದಿರೋ ದರ್ಶನ್ ಅಭಿಮಾನಿಗಳ ಮೆಚ್ಚಿನ ನಟ. ದರ್ಶನ್ ಅಂದ್ರೆ ಅಭಿಮಾನಿಗಳು ಹುಚ್ಚೆದ್ದು ಕುಣೀತಾರೆ.

    ಯಶಸ್ಸಿನ ಹಾದಿಯಲ್ಲಿ ಮುನ್ನುಗ್ತಾ ಇರೋ ಚಾಲೆಂಜಿಂಗ್ ಸ್ಟಾರ್ ಮುಂದೆ ಇವತ್ತು ಚಾಲೆಂಜ್ ಗಳಿಲ್ಲ. ಆದರೆ ಆವತ್ತು ಜೀವನದ ತುಂಬಾ ಸಮಸ್ಯೆಗಳಿದ್ವು. ಆ ಸಮಸ್ಯೆಗಳನ್ನ ಸವಾಲಾಗಿ ತೆಗೆದುಕೊಂಡು ಗೆದ್ದ ಹೀರೋ ದರ್ಶನ್. ಗೆಳೆಯರು ದರ್ಶನ್ ಅಂತಿರಲಿಲ್ಲ. 'ಡಿ' ಅಂತ ಕರೀತಾ ಇದ್ರು. ಆಗ ಇದ್ದ 'ಡಿ' ಈಗ 'ಡಿ ಬಾಸ್' ಆಗಿದ್ದಾರೆ. [ದರ್ಶನ್ ಹುಟ್ಟುಹಬ್ಬ ಚಿತ್ರಗಳು]

    ಚಾಲೆಂಜಿಂಗಾಗಿ ಹೀಗೆ ಬದುಕಿದ ಮೈಸೂರ್ ಹೈದನ ನೀವು ಕೇಳಿರದ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನ ಅವರು ಇತ್ತೀಚೆಗೆ ಪಬ್ಲಿಕ್ ಟಿವಿಯ ಸಂದರ್ಶನದಲ್ಲಿ ಹೇಳಿದ್ದಾರೆ. ಅಂತಹಾ ಕೆಲವು ವಿಷಯಗಳು ಸ್ಲೈಡ್ ನಲ್ಲಿವೆ ನೋಡಿ. 37ನೇ ವಸಂತಕ್ಕೆ ಕಾಲಿರಿಸಿದ ಚಾಲೆಂಜಿಂಗ್ ಸ್ಟಾರ್ ಸಿನಿಮಾಗಳು ಯಶಸ್ವಿಯಾಗಲಿ ಅನ್ನೋದು ಹಾರೈಕೆ ನಮ್ಮದು. [ದರ್ಶನ್ ಸಂಭಾವನೆ 8 ಕೋಟಿ ಅನ್ನೋದು ನಿಜಾನಾ?]

    ಮೈಸೂರಲ್ಲಿ ಮನೆ ಮನೆಗೆ ಹಾಲು ಮಾರ್ತಿದ್ರು

    ಮೈಸೂರಲ್ಲಿ ಮನೆ ಮನೆಗೆ ಹಾಲು ಮಾರ್ತಿದ್ರು

    ಈ ವಿಚಾರ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ದರ್ಶನ್ ಮೈಸೂರಲ್ಲಿ ಮನೆ ಮನೆಗೆ ಹಾಲು ಮಾರ್ತಿದ್ರು. ಹಸುಗಳನ್ನ ಸಾಕಿ, ಸ್ವತಃ ತಾವೇ ಹಾಲು ಕರೀತಿದ್ರು.

    ಈಗ ಹಾಲು ಕರೆಯೋ ಸ್ಪರ್ಧೆ ನಡೆಸ್ತಾರೆ

    ಈಗ ಹಾಲು ಕರೆಯೋ ಸ್ಪರ್ಧೆ ನಡೆಸ್ತಾರೆ

    ಆವತ್ತು ಮೈಸೂರಲ್ಲಿ ಹಾಲು ಕರೀತಿದ್ದ ದರ್ಶನ್ ಇವತ್ತು ಅದೇ ಮೈಸೂರಲ್ಲಿ ಯಾವ ಹಸು ಹೆಚ್ಚು ಹಾಲು ಕರೆಯುತ್ತೆ ಅಂತ ಸ್ಪರ್ಧೆ ಮಾಡ್ತಾರೆ. ಹಾಲು ಕರೆಯುವ ಸ್ಪರ್ಧೆಯಲ್ಲಿ ಗೆದ್ದವರಿಗೆ ಲಕ್ಷಗಟ್ಟಲೆ ಬಹುಮಾನ ಕೊಡ್ತಾರೆ.

    ತಾಯಿ ಮೀನಾ ಅವಕಾಶಕ್ಕಾಗಿ ಅಲೆದಿದ್ರು

    ತಾಯಿ ಮೀನಾ ಅವಕಾಶಕ್ಕಾಗಿ ಅಲೆದಿದ್ರು

    ದರ್ಶನ್ ರಿಗೆ ಸಿನಿಮಾಗೆ ಅವಕಾಶ ಸಿಕ್ಕಿದ್ದು 'ಮೆಜೆಸ್ಟಿಕ್' ಸಿನಿಮಾ ಮೂಲಕ. ಇದಕ್ಕೂ ಮೊದಲು ದರ್ಶನ್ ತಾಯಿ ಅದೆಷ್ಟೋ ನಿರ್ದೇಶಕರ ಮನೆ ಬಾಗಿಲಿಗೆ ಅಲೆದಿದ್ರು.

    ದರ್ಶನ್, ದಿನಕರ್ ಸಿನಿಮಾಗೆ ಬರೋದು ಇಷ್ಟವಿರಲಿಲ್ಲ

    ದರ್ಶನ್, ದಿನಕರ್ ಸಿನಿಮಾಗೆ ಬರೋದು ಇಷ್ಟವಿರಲಿಲ್ಲ

    ತಂದೆ ತೂಗುದೀಪ ಶ್ರೀನಿವಾಸ್ ರಿಗೆ ದರ್ಶನ್ ಮತ್ತು ದಿನಕರ್ ಸಿನಿಮಾಗೆ ಬಂದು ತನ್ನ ಹಾಗೇ ಕಷ್ಟಪಡೋದು ಇಷ್ಟವಿರಲಿಲ್ಲ. ಆದರೆ ಇಬ್ಬರೂ ಈಗ ಸಿನಿಮಾದಲ್ಲಿ ಶೈನಿಂಗ್.

    ಸಾಕು ಪ್ರಾಣಿಗಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ

    ಸಾಕು ಪ್ರಾಣಿಗಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ

    ಚಾಲೆಂಜಿಂಗ್ ಸ್ಟಾರ್ ಗೆ ಸಾಕುಪ್ರಾಣಿಗಳು ಅಂದ್ರೆ ತುಂಬಾನೇ ಇಷ್ಟ. ಅವರ ಫಾರ್ಮ್ ಹೌಸ್ ನಲ್ಲಿ ಹತ್ತು ಹಲವು ರೀತಿಯ ಪ್ರಾಣಿಗಳಿವೆ.

    ಅದುಮಿಟ್ಟುಕೊಂಡ ನೋವನ್ನ ಪ್ರಾಣಿಗಳ ಜೊತೆ ಹಂಚ್ಕೋತಾರೆ

    ಅದುಮಿಟ್ಟುಕೊಂಡ ನೋವನ್ನ ಪ್ರಾಣಿಗಳ ಜೊತೆ ಹಂಚ್ಕೋತಾರೆ

    ಮನುಷ್ಯರಾದ್ರೆ ಇವತ್ತು ಚೆನ್ನಾಗಿರ್ತಾರೆ, ನಾಳೆ ಇನ್ನೊಂದು ತರಹ ಇರ್ತಾರೆ. ಆದ್ರೆ ಪ್ರಾಣಿಗಳು ಯಾರ ಹತ್ತಿರಾನೂ ಹೇಳಲ್ಲ. ಅದಕ್ಕೇ ಯಾರ ಹತ್ರಾನೂ ಹೇಳೋಕಾಗ್ದೇ ಒಳಗೇ ಅದುಮಿಟ್ಟುಕೊಂಡಿರೋ ನೋವನ್ನ ಪ್ರಾಣಿಗಳ ಜೊತೆ ಹಂಚ್ಕೋತಾರಂತೆ ಚಾಲೆಂಜಿಂಗ್ ಸ್ಟಾರ್.

    ಕಾರ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್

    ಕಾರ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್

    ಕಾರ್ ಗಳು, ಕಾರ್ ರೈಡಿಂಗ್ ಅಂದ್ರೆ ದರ್ಶನ್ ಗೆ ಭಾರಿ ಕ್ರೇಜ್. ಬೇರೆ ಬೇರೆ ಕಾರುಗಳಲ್ಲಿ ಜಾಲಿ ರೈಡ್ ಹೋಗೋದು ಇಷ್ಟ.

    2016ರವರೆಗೂ ದರ್ಶನ್ ಬ್ಯುಸಿ

    2016ರವರೆಗೂ ದರ್ಶನ್ ಬ್ಯುಸಿ

    44-45ನೇ ಸಿನಿಮಾ ಮಾಡ್ತಿರೋ ಚಾಲೆಂಜಿಂಗ್ ಸ್ಟಾರ್ 50ನೇ ಸಿನಿಮಾವರೆಗೂ ಬಿಜಿ. ಸದ್ಯ ಐರಾವತ ಅಬ್ಬರ ಏಪ್ರಿಲ್ ನಲ್ಲಿ ಶುರುವಾಗಲಿದೆ.

    English summary
    Here's some interesting facts about Kannada actor Challenging Star Darshan (37). Darshan was selling milk in beginning days when he was in Mysore. Darshan's other passion is cars, he took brand new "H3 Hummer 'car in july 2008, imported from Dubai, and it joins an "Audi A6 "in the portico.
    Monday, February 17, 2014, 17:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X