For Quick Alerts
  ALLOW NOTIFICATIONS  
  For Daily Alerts

  'ಸಿನಿಮಾಗಾಗಿ ಯೋಗಿ, ಯೋಗಿಗಾಗಿ ಸಿನಿಮಾ'

  By ಮಾಸ್ತಿ
  |

  ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲದ ಮತ್ತು ಬೇರೆ ಏನನ್ನೂ ತಿಳಿದುಕೊಳ್ಳಲು ಹೋಗದ ವ್ಯಕ್ತಿ 'ಯೋಗಿ ಜಿ ರಾಜ್'. ನಟ, ಸಹಾಯಕ ನಿರ್ದೇಶಕ, ಸಹ ನಿರ್ದೇಶಕ, ಕಾಸ್ಟ್ಯೂಮ್ ಡಿಸೈನರ್ ಹೀಗೆ ಚಿತ್ರರಂಗದ ಒಂದೊಂದೇ ಮೆಟ್ಟಿಲನ್ನು ಹತ್ತಿ ನಿರ್ದೇಶಕರಾಗಿದ್ದಾರೆ.

  ಎರಡು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಣ್ಣ ಕಾಸ್ಟ್ಯೂಮ್ ಅಸಿಸ್ಟೆಂಟ್‌ನಿಂದ ಹಿಡಿದು ಇಂಡಸ್ಟ್ರೀಯ ದೊಡ್ಡ ನಿರ್ಮಾಪಕ ನಿರ್ದೇಶಕರವರೆಗೂ ಪ್ರತಿಯೊಬ್ಬರಿಗೂ 'ಯೋಗಿ' ಗೊತ್ತು.

  ನಟ ವಿಜಯ ರಾಘವೇಂದ್ರರ ಸಹಪಾಠಿ, ಸಹೋದರ ಮುರುಳಿಯವರ ಚಹಪಾಠಿ, ಶಿವಣ್ಣ, ಅಪ್ಪು ಸಾರ್, ಯಶ್, ದರ್ಶನ್, ಸುದೀಪ್, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್ ಹೀಗೆ ಅನೇಕ ಸ್ಟಾರ್ ಗಳಿಗೆ ಯೋಗಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. KGF ಸಿನಿಮಾದಲ್ಲಿಯೂ ಇವರ ಕೆಲಸ ಫಲಿಸಿದೆ.

  ಇವತ್ತಿಗೂ ಇಂಡಸ್ಟ್ರೀಯಲ್ಲಿ ಒಂದು ರೂಪಾಯಿ ಅಡ್ವಾನ್ಸ್ ನೀಡದೇ ಒಂದು ರೂಪಾಯಿ ಬಂಡವಾಳವನ್ನೂ ವ್ಯಯಿಸದೇ ದೊಡ್ಡ ಬಜೆಟ್ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಿ ತೆರೆಗೆ ತರುವ ಅಂತ ಗಟ್ಸ್ ಇರುವ ವ್ಯಕ್ತಿ ಅಂದ್ರೆ ಅದು ಯೋಗಿ. ಯಾಕಂದ್ರೆ ಅಷ್ಟು ಜನ ಕಲಾವಿದರ, ತಂತ್ರಜ್ಞರ, ಹಣವಂತರ, ಗೆಳೆಯರ ಸ್ನೇಹವಿದೆ ಮತ್ತು ಎಲ್ಲರ ಸಪೋರ್ಟ್ ಇದೆ.

  ಚರಿತ್ರೆ ಸೃಷ್ಟಿಸಿದ 'ಗೀತಾಂಜಲಿ'ಯ ದೃಶ್ಯಕಾವ್ಯ ತೆರೆದಿಟ್ಟ ಬರಹಗಾರ ಮಾಸ್ತಿ ಚರಿತ್ರೆ ಸೃಷ್ಟಿಸಿದ 'ಗೀತಾಂಜಲಿ'ಯ ದೃಶ್ಯಕಾವ್ಯ ತೆರೆದಿಟ್ಟ ಬರಹಗಾರ ಮಾಸ್ತಿ

  ಗಾಂಧಿನಗರದಲ್ಲಿ ಸಿನಿಮಾ ಕನಸು ಕಟ್ಕೊಂಡು ಯಾವ ಜಾಗದಲ್ಲಿ ಕೆಲಸ ಇಲ್ಲದೇ ಕಾಲಹರಣ ಮಾಡ್ತಿದ್ರೊ.... ಅದೇ ಜಾಗದಲ್ಲಿ ಇವತ್ತು ಸುಸಜ್ಜಿತವಾದ ಐಷಾರಾಮಿ ಆಫೀಸು ಮಾಡ್ಕೊಂಡಿದ್ದಾರೆ. ಅಲ್ಲಿ ಸಿನಿಮಾ ಚರ್ಚೆಗಳು, ವಿತರಣೆಯ ಕೆಲಸಗಳು, ಪ್ರಿ ಪ್ರೊಡಕ್ಷನ್ ಕೆಲಸಗಳು ಜರುಗುತ್ತಿವೆ. ಸಿನಿಮಾನ ನಂಬಿದ್ದ ಯೋಗಿಯನ್ನ ಸಿನಿಮಾ ಸಹ ನಂಬಿತು ಯಾಕಂದ್ರೆ ಯೋಗಿ ನಂಬಿಕಸ್ಥ.

  Bhuvan Ponnanna ಅವರ ಕೆಲಸ ನೋಡಿ ಭೇಷ್ ಎಂದ ಅಭಿಮಾನಿಗಳು | Filmibeat Kannada

  ಅಂದ್ಹಾಗೆ, ಯೋಗಿ ಜಿ ರಾಜ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶಿವರಾಜ್ ಕುಮಾರ್ ಜೊತೆ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಹಾಗೂ ಗಣೇಶ್ ಜೊತೆ 'ಖುಷಿಖುಷಿಯಾಗಿ' ಎಂಬ ಎರಡು ನಿರ್ದೇಶಿಸಿ ಯಶಸ್ಸು ಕಂಡಿದ್ದರು.

  English summary
  Kannada Writer Maasthi Upparahalli shared Interesting facts about director yogi b raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X