'ಕೋಟಿಗೊಬ್ಬ' ನಿರ್ದೇಶಕ KS ರವಿಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು?
ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರು ಹಲವಾರು ಸೂಪರ್ ಹಿಟ್ ಸಿನಿಮಾ ಮಾಡಿದ್ದಾರೆ. ಹಾಗು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತ, ಅವರಿಗಾಗಿ ಅಂತ ಹಲವು ಸಿನಿಮಾ ಮಾಡಿದ್ದಾರೆ ಇತ್ಯಾದಿ..ಇತ್ಯಾದಿ....
ಜೊತೆಗೆ ಅವರು ಇದೇ ಮೊದಲ ಬಾರಿಗೆ ಕನ್ನಡ 'ಕೋಟಿಗೊಬ್ಬ 2' ಅಂತ ಬೇರೆ ಸಿನಿಮಾ ಮಾಡಿದ್ದಾರೆ. ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ನಾಳೆ (ಆಗಸ್ಟ್ 12) ಇಡೀ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಮೊದಲ ಬಾರಿಗೆ ಒಂದಾಗಿದ್ದಾರೆ.['ಕೋಟಿಗೊಬ್ಬ 2' ವಿಶೇಷತೆ ಏನು, ಸಿನಿಮಾ ಯಾಕೆ ನೋಡಬೇಕು.?]
ಇದೆಲ್ಲಾ ಓಕೆ...ಎಲ್ಲಾ ಹಳೇ ವಿಷಯ. ಹೊಸ ವಿಷ್ಯಾ ಏನಪ್ಪಾ ಅಂದ್ರೆ, ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರ ಬರೀ ಸಿನಿಮಾ ನಿರ್ದೇಶನದ ವಿಚಾರಗಳು ಮಾತ್ರವಲ್ಲದೇ, ಅವರ ಬಗ್ಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಬಹಿರಂಗವಾಗಿದೆ. ಅದೇನೆಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

ಅಗರ್ಭ ಶ್ರೀಮಂತ
ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರು ತಮಿಳು ಚಿತ್ರರಂಗದ ಎಲ್ಲಾ ನಿರ್ದೇಶಕರ ಪೈಕಿ ಅತ್ಯಂತ ಶ್ರೀಮಂತ ನಿರ್ದೇಶಕ.[ಸುದೀಪ್ ಫ್ಯಾನ್ಸ್ ಗೆ 'ಕೋಟಿಗೊಬ್ಬ-2' ಎಕ್ಸ್ ಕ್ಲೂಸಿವ್ ಶೋ.!]

ಗುಟ್ಟು ರಟ್ಟಾಯಿತು
ಅಂದಹಾಗೆ ಈ ವಿಚಾರವನ್ನು ಹೇಳಿದ್ದು, ಬೇರಾರು ಅಲ್ಲ, ರವಿಕುಮಾರ್ ಅವರ ಖಾಸ ದೋಸ್ತ್, ಸೂಪರ್ ಸ್ಟಾರ್ ರಜನಿಕಾಂತ್ ಅವರು. ರವಿಕುಮಾರ್ ಅವರ ಶ್ರೀಮಂತಿಕೆಯನ್ನು ಖುದ್ದು ರಜನಿ ಅವರು ರಟ್ಟು ಮಾಡಿದ್ದಾರೆ.

'ಮುತ್ತು' ಸಿನಿಮಾದ ಶೂಟಿಂಗ್ ಸಂದರ್ಭ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಮುತ್ತು' ಚಿತ್ರಕ್ಕೆ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶಕರಾಗಿದ್ದರು. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಚೆನ್ನೈನ ಓ.ಎಮ್.ಆರ್ ರಸ್ತೆಯಲ್ಲಿರುವ, 18 ಎಕರೆ ವಿಸ್ತೀರ್ಣದ ಫಾರ್ಮ್ ಹೌಸ್ ಗೆ ಚಿತ್ರತಂಡದವರನ್ನು ರಜನಿ ಊಟಕ್ಕಾಗಿ ಕರೆದೊಯ್ದರು.

ಆಶ್ಚರ್ಯಚಕಿತರಾದ 'ತಲೈವಾ'
ಊಟಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ, 'ವಣಕ್ಕಂ ಮೊದಲಾಳಿ' ಅಂತ ರವಿಕುಮಾರ್ ಅವರಿಗೆ ನಮಸ್ಕಾರ ಮಾಡಿದರು. ಆವಾಗ 'ತಲೈವಾ' ರಜನಿಗೆ ಆಶ್ಚರ್ಯ. ಕೆಲಸದವರಿಗೆ ಏನೋ ಗೊಂದಲ ಆಗಿದೆ ಅಂದುಕೊಂಡು, 'ಅವರು ಸಿನಿಮಾ ನಿರ್ದೇಶಕರು, ನಿವೇನೋ ಕನ್ ಫ್ಯೂಸ್ ಆಗಿದ್ದೀರಿ' ಎಂದಿದ್ದಾರೆ.

ಸಾಹುಕಾರರ ಮಗ ಕೆ.ಆರ್.ಎಸ್
ರಜನಿ ಅವರ ಮಾತು ಕೇಳಿದ ಕೂಲಿಯಾಳುಗಳು, ರವಿಕುಮಾರ್ ಅವರ ತಂದೆ ಕೆ.ಸುಬ್ರಮಣ್ಯಂ ಅಂತ ತುಂಬಾ ದೊಡ್ಡ ಸಾಹುಕಾರರು. ಅವರ ಜಮೀನಿಗೆ ನಾವೆಲ್ಲ ಕೆಲಸಕ್ಕೆ ಹೋಗ್ತೀವಿ ಎಂದರು.

ದಂಗಾದ ಸೂಪರ್ ಸ್ಟಾರ್ ರಜನಿ
ಕೂಲಿಯವರ ಮಾತು ಕೇಳಿ ರಜನಿ ಅವರು, ನಿಮ್ಮ ಜಮೀನು ಎಷ್ಟಿದೆ?, ಎಂದು ಸಹಜವಾಗಿ ರವಿಕುಮಾರ್ ಅವರನ್ನು ಕೇಳಿದ್ದಾರೆ. ಅದಕ್ಕೆ ಕೆ.ಎಸ್.ಅರ್, ಇಲ್ಲಿಂದ ಮುಂದಕ್ಕೆ ನಮ್ಮ ತಂದೆಯವರದು, ಸುಮಾರು 108 ಎಕರೆ ಜಮೀನಿದೆ ಎಂದರಂತೆ. ಈ ಮಾತು ಕೇಳಿ ದಂಗಾದ ರಜನಿಕಾಂತ್, 'ಆ' ಘಟನೆ ನಂತರ, ರವಿಕುಮಾರ್ ಅವರನ್ನು 'ಮೊದಲಿಯಾರ್' ಅಂತ ಕರೆಯಲು ಆರಂಭಿಸಿದರಂತೆ.

ವಿಡಿಯೋ ನೋಡಿ
ರಜನಿ ಅವರು ಏನು ಹೇಳಿದ್ದಾರೆ ಅನ್ನೋದನ್ನ ನೋಡಲು, ಬೇಕಿದ್ರೆ ನೀವೇ ವಿಡಿಯೋ ನೋಡಿ


Click it and Unblock the Notifications











