'ಮುಂಗಾರು ಮಳೆ', 'ಮೊಗ್ಗಿನ ಮನಸ್ಸು' ಮತ್ತು ಹೆಣ್ಣು ಮಕ್ಕಳು

ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಂದೆ ತಾಯಿ ಆಗಿದ್ದಾರೆ. ಕಳೆದ ವಾರ ರಾಧಿಕಾ ಪಂಡಿತ್ ಹೆಣ್ಣು ಮಗುವಿನ ಜನ್ಮ ನೀಡಿದ್ದು, ಯಶ್ ಕುಟುಂಬದಲ್ಲಿ ಸಂತಸ ಮೂಡಿದೆ.

'ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ ಯಶ್ ಹಾಗೂ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದಿದ್ದರು. 'ಮೊಗ್ಗಿನ ಮನಸ್ಸು' ಸಿನಿಮಾವನ್ನ ಇ ಕೆ ಎಂಟರ್ ಪ್ರೈಸಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಇದೇ, ಸಂಸ್ಥೆ ಆ ಚಿತ್ರಕ್ಕೆ ಮುಂಚೆ 'ಮುಂಗಾರು ಮಳೆ' ಸಿನಿಮಾಗೂ ಬಂಡವಾಳ ಹಾಕಿತ್ತು.

ಅಯ್ಯೋ, ಏನಿದು ಈ ಹಳೆ ಕಥೆ ಈಗ ಹೇಳ್ತಿದ್ದೀರೆ ಅಂತ ನೀವು ಭಾವಿಸಬಹುದು ಆದರೆ, 'ಮೊಗ್ಗಿನ ಮನಸ್ಸು' ಮತ್ತು 'ಮುಂಗಾರು ಮಳೆ' ಸಿನಿಮಾಗೆ ಒಂದು ಲಿಂಕ್ ಇದೆ. ಯಶ್ ಹಾಗೂ ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿದೆ. ಆದರೆ, ಅವರಿಗೆ ಮಾತ್ರವಲ್ಲ ಈ ಎರಡು ಸಿನಿಮಾದಲ್ಲಿ ನಟಿಸಿದ್ದ ಕಲಾವಿದ ಹಾಗೂ ತಂತ್ರಜ್ಞರಲ್ಲಿ ಅನೇಕರಿಗೆ ಹೆಣ್ಣು ಮಗುವೇ ಆಗಿರುವುದು ಎಂಬುದು ವಿಶೇಷ. ಮುಂದೆ ಓದಿ...

ಶಶಾಂಕ್ ಹಂಚಿಕೊಂಡ ಸಂಗತಿ

ನಿರ್ದೇಶಕ ಶಶಾಂಕ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಒಂದು ವಿಶೇಷ ಸಂಗತಿ ಹಂಚಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ದಂಪತಿಗೆ ಶುಭಕೋರಿರುವ ಅವರು ''ಮುಂಗಾರು ಮಳೆ-ಮೊಗ್ಗಿನ ಮನಸ್ಸು ಚಿತ್ರಗಳನ್ನು ನಿರ್ಮಿಸಿದ್ದು ಒಂದೇ ಸಂಸ್ಥೆ. ಈ ಚಿತ್ರಗಳಿಗೆ ದುಡಿದ ಕಲಾವಿದರು, ತಂತ್ರಜ್ಞರು ಯಶಸ್ಸಿನ ಶಿಖರವನ್ನೇರಿದರು ಮತ್ತು ತದನಂತರ ಅವರೆಲ್ಲರಿಗೂ ಹುಟ್ಟಿದ ಮಗು ಹೆಣ್ಣು!'' ಎಂದು ಟ್ವೀಟ್ ಮಾಡಿದ್ದಾರೆ.

ಯಶ್ - ರಾಧಿಕಾಗೆ ಹೆಣ್ಣು ಮಗು

ಯಶ್ - ರಾಧಿಕಾಗೆ ಹೆಣ್ಣು ಮಗು

ನಟಿ ರಾಧಿಕ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಡಿಸೆಂಬರ್ 2 ರಂದು ಬೆಳಗ್ಗೆ 6.20ರ ಸುಮಾರಿಗೆ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಜೂನಿಯರ್ ರಾಧಿಕಾ ಪಂಡಿತ್ ಗೆ ಸ್ಯಾಂಡಲ್ ವುಡ್ ನ ಅನೇಕರು ವಿಶ್ ಮಾಡಿದ್ದಾರೆ.

ಗಣೇಶ್- ಶಿಲ್ಪಾ ಗೆ ಹೆಣ್ಣು ಮಗು

ಗಣೇಶ್- ಶಿಲ್ಪಾ ಗೆ ಹೆಣ್ಣು ಮಗು

'ಮುಂಗಾರು ಮಳೆ' ಸಿನಿಮಾದ ನಾಯಕ ಗಣೇಶ್ ಅವರಿಗೆ ಸಹ ಇರುವುದು ಹೆಣ್ಣು ಮಗು. 'ಮುಂಗಾರು ಮಳೆ' ಸಿನಿಮಾ 2006 ರಲ್ಲಿ ಬಿಡುಗಡೆಯಾಗಿದ್ದು, 2008 ಗಣೇಶ್ ಶಿಲ್ಪಾ ರನ್ನ ವಿವಾಹವಾದರು. ಗಣೇಶ್ ಹಾಗೂ ಶಿಲ್ಪಾ ದಂಪತಿಗೆ 2009ರಲ್ಲಿ ಮಗಳು ಜನಿಸಿದಳು. ಗಣೇಶ್ ಪುತ್ರಿ ಚಾರಿತ್ಯಗೆ ಸದ್ಯ 9 ವರ್ಷ ತುಂಬಿದೆ.

ನಿರ್ದೇಶಕರಿಗೂ ಅಷ್ಟೇ

ನಿರ್ದೇಶಕರಿಗೂ ಅಷ್ಟೇ

'ಮುಂಗಾರು ಮಳೆ' ಸಿನಿಮಾದ ಸೂತ್ರಧಾರ ಯೋಗರಾಜ್ ಭಟ್ ಅವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಗಳೇ. ಅದೇ ಕಾರಣಕ್ಕೆ ಭಟ್ಟರು ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಎಂದು ಹೇಳಿರಬಹುದು. ಹಾಗೇಯೇ 'ಮೊಗ್ಗಿನ ಮನಸ್ಸು' ನಿರ್ದೇಶಕ ಶಶಾಂಕ್ ಅವರಿಗೂ ಹೆಣ್ಣು ಮಗು ಇದೆ. ಇಬ್ಬರು ನಿರ್ದೇಶಕರು ಹೆಣ್ಣು ಮಕ್ಕಳಿಗೆ ತಂದೆಯಾಗಿದ್ದಾರೆ.

ನಿರ್ಮಾಪಕರು, ತಂತ್ರಜ್ಞರು

ನಿರ್ಮಾಪಕರು, ತಂತ್ರಜ್ಞರು

'ಹೆಬ್ಬುಲಿ' ನಿರ್ದೇಶಕ ಕೃಷ್ಣ ಈ ಹಿಂದೆ 'ಮುಂಗಾರು ಮಳೆ' ಸಿನಿಮಾಗೆ ಕ್ಯಾಮರಾ ಮ್ಯಾನ್ ಆಗಿದ್ದರು. ಕೃಷ್ಣ ಹಾಗೂ ಸ್ವಪ್ನ ದಂಪತಿಗೆ ಸಹ ಹೆಣ್ಣು ಮಗು ಆಗಿತ್ತು. 'ಮುಂಗಾರು ಮಳೆ' ಹಾಗೂ 'ಮೊಗ್ಗಿನ ಮನಸ್ಸು' ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಇ ಕೆ ಎಂಟರ್ ಪ್ರೈಸಸ್. ಈ ಚಿತ್ರದ ನಿರ್ಮಾಪಕ ಗಂಗಾಧರ್ ಅವರಿಗೂ ಹೆಣ್ಣು ಮಗು ಇದೆ.

More from Filmibeat

English summary
Interesting facts about 'Moggina Manasu' and Mungaru Male' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X