Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಕೆಟ್ ಮನಿಗಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಈ ನಟಿಯ ಸಂಭಾವನೆ ಈಗ 2.5 ಕೋಟಿ!
Recommended Video
ಇದಕ್ಕೆ ಅದೃಷ್ಟ ಎನ್ನಬೇಕೋ.. ಪರಿಶ್ರಮ ಎನ್ನಬೇಕೋ.. ನೀವೇ ನಿರ್ಧರಿಸಿ. ಆದರೆ ಆ ನಟಿ ಮಾತ್ರ ನೋಡ ನೋಡುತ್ತಲೆ ನಂ.1 ಸ್ಥಾನಕ್ಕೇರಿದರು. ಪಾಕೆಟ್ ಮನಿಗಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಈ ಹುಡುಗಿ ಇಂದು ಟಾಲಿವುಡ್ ಸಿನಿಮಾ ಸಾಮ್ರಾಜ್ಯದ ರಾಣಿಯಾಗಿದ್ದಾರೆ.
ಮುದ್ದು ಮುಖದ ಚೆಲುವೆ ರಕುಲ್ ಪ್ರೀತ್ ಸಿಂಗ್ ಸದ್ಯ ಸೌತ್ ಸಿನಿಮಾರಂಗದ ಸ್ಟಾರ್ ನಟಿ. ಟಾಲಿವುಡ್ ನಲ್ಲಿ ಬಹುಪಾಲು ಎಲ್ಲ ನಟರ ಜೊತೆ ತೆರೆ ಹಂಚಿಕೊಂಡಿರುವ ಖ್ಯಾತಿ ಈ ನಟಿಗಿದೆ. ಸದ್ಯ 'ಶಿಮ್ಲ ಮಿರ್ಚಿ' ಎಂಬ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಕಮಲ್ ಹಾಸನ್ ಅವರ 'ಇಂಡಿಯಾನ್ 2' ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ತಮಿಳು ಸಿನಿಮಾ ಅವರ ಕೈನಲ್ಲಿ ಇದೆ.
ಟಾಲಿವುಡ್ ನ ಸ್ಟಾರ್ ನಟಿ ರಕುಲ್ ಚಿತ್ರ ಬದುಕಿನ ಸ್ವಾರಸ್ಯಕರ ವಿಷಯಗಳು ಇಲ್ಲಿವೆ.
'ಗಿಲ್ಲಿ' ಸಿನಿಮಾ
ಜಗ್ಗೇಶ್ ಪುತ್ರ ಗುರು ನಟನೆಯ 'ಗಿಲ್ಲಿ' ಚಿತ್ರದ ಮೂಲಕ ರಕುಲ್ ಪ್ರೀತ್ ಸಿಂಗ್ ಮೊದಲ ಬಾರಿಗೆ ಪರದೆ ಮೇಲೆ ಕಾಣಿಸಿಕೊಂಡಿದ್ದರು. 2009ರಲ್ಲಿ ರಿಲೀಸ್ ಆದ ಈ ಚಿತ್ರವನ್ನು ರಾಘವ ಲೋಕಿ ನಿರ್ದೇಶನ ಮಾಡಿದ್ದರು.
ಪಿಯುಸಿ ಓದುತ್ತಿದ್ದರು
'ಗಿಲ್ಲಿ' ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿದ್ದಾಗ ಅಂತರ್ಜಾಲದ ಮೂಲಕ ರಕುಲ್ ಅವರನ್ನು ಚಿತ್ರತಂಡ ಸಂಪರ್ಕ ಮಾಡಿದೆ. ಆಗಿನ್ನೂ ದೆಹಲಿಯ ಕಾಲೇಜಿನಲ್ಲಿ ರಕುಲ್ ಪಿಯುಸಿ ಓದುತ್ತಿದ್ದರಂತೆ.
ಪಾಕೆಟ್ ಮನಿಗಾಗಿ..
''ಆಗ ನನಗೆ 17 ವರ್ಷ. ಸಿನಿಮಾದಲ್ಲಿ ನಟಿಸಿದರೆ ಹಣ ಸಿಗುತ್ತದೆ ಎಂದು ಮೊದಲ ಚಿತ್ರಕ್ಕೆ ಸಹಿ ಹಾಕಿದೆ. ಪಾಕೆಟ್ ಮನಿಗೆ ಅಂತ ಸಿನಿಮಾರಂಗಕ್ಕೆ ಕಾಲಿಟ್ಟೆ. ಆದರೆ ಈಗ ಇದು ನನ್ನ ಜಗತ್ತು ಮತ್ತು ನಾನು ಇಲ್ಲಿನವಳೇ ಎನ್ನುವುದು ನನಗೆ ತಿಳಿದಿದೆ'' ಎಂದು ರಕುಲ್ ಹಳೇ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಮಾಡಲಿಂಗ್ ನಲ್ಲಿ ಮಿಂಚಿದ್ದರು
''ಕನ್ನಡ ಚಿತ್ರದಿಂದ ನಾನು ನನ್ನ ವೃತ್ತಿ ಬದುಕನ್ನು ಪ್ರಾರಂಭ ಮಾಡಿದೆ ಎನ್ನುವುದನ್ನು ನಾನು ಮರೆಯಲಾರೆ. 'ಗಿಲ್ಲಿ' ನನ್ನ ಮೊದಲ ಸಿನಿಮಾ, ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, ಮಾಡೆಲಿಂಗ್ ಕ್ಷೇತ್ರದಲ್ಲಿದ್ದಾಗ ನನಗೆ ಈ ಚಿತ್ರದ ಆಫರ್ ಬಂದಿತ್ತು'' - ರಕುಲ್ ಪ್ರೀತ್ ಸಿಂಗ್, ನಟಿ.
ಕನ್ನಡದ 'ಗಿಲ್ಲಿ' ಬೆಡಗಿಯ ಬ್ಯಾಗ್ ನಲ್ಲಿ ಬುಲೆಟ್ ಪತ್ತೆ
ಸ್ಟಾರ್ ನಟಿ
ಈ ರೀತಿ ಆಕಸ್ಮಿಕವಾಗಿ ಬಣ್ಣ ಹಚ್ಚಿದ ರಕುಲ್ ಇಂದು ಸೌತ್ ಸಿನಿ ದುನಿಯಾದ ಟಾಪ್ ನಟಿಯಲ್ಲಿ ಒಬ್ಬರು. ತೆಲುಗಿನಲ್ಲಿ ಜೂನಿಯರ್ ಎನ್.ಟಿ.ಆರ್, ಮಹೇಶ್ ಬಾಬು, ರವಿತೇಜ, ಅಲ್ಲು ಅರ್ಜುನ್ ಸೇರಿದಂತೆ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ರಕುಲ್ ಮಿಂಚಿದ್ದಾರೆ.
ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು
2.5 ಕೋಟಿ ಸಂಭಾವನೆ
ಆಗ ಪಾಕೆಟ್ ಮನಿಗಾಗಿ ಸಿನಿಮಾ ಮಾಡಿದ್ದ ರಕುಲ್ ಸಂಭಾವನೆ ಈಗ ಒಂದು ಚಿತ್ರಕ್ಕೆ 2.5 ಕೋಟಿ ಆಗಿದೆ. ತೆಲುಗು ನಟಿಯರಾದ ಅನುಷ್ಕಾ ಶೆಟ್ಟಿ, ಸಮಂತಾ, ಕಾಜಲ್, ನಯನ ತಾರ ಸಂಭಾವನೆಗೆ ರಕುಲ್ ಪೈಪೋಟಿ ನೀಡುತ್ತಿದ್ದಾರೆ.