»   » ಲಕ್ಕಿ ಸ್ಟಾರ್ ರಮ್ಯಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಚಿತ್ರಾನ್ನ!

ಲಕ್ಕಿ ಸ್ಟಾರ್ ರಮ್ಯಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಚಿತ್ರಾನ್ನ!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಲಕ್ಕಿ ಸ್ಟಾರ್, ಗೋಲ್ಡನ್ ಗರ್ಲ್, ಸ್ಯಾಂಡಲ್ ವುಡ್ ಕ್ವೀನ್, ಮಂಡ್ಯದ ರಾಣಿ...ಇದೆಲ್ಲವೂ ಸುರಸುಂದರಾಂಗಿ ರಮ್ಯಾ ಹಿರಿಮೆಗೆ ಸಿಕ್ಕಿರುವ ಗರಿಗಳು. ಚಿತ್ರರಂಗಕ್ಕೆ ಕಾಲಿಟ್ಟ ಒಂದು ದಶಕದಲ್ಲೇ ಯಶಸ್ಸಿನ ಉತ್ತುಂಗಕ್ಕೇರಿ, ರಾಜಕೀಯದಲ್ಲೂ ಒಂದು ಸುತ್ತು ಹಾಕಿರುವ ರಮ್ಯಾಗಿಂದು 32ನೇ ಹುಟ್ಟುಹಬ್ಬದ ಸಂಭ್ರಮ.

  ತಮ್ಮ ಬರ್ತಡೇಯನ್ನು ಅಭಿಮಾನಿಗಳೊಂದಿಗೆ ಗ್ರ್ಯಾಂಡಾಗಿ ಆಚರಿಸುವುದಕ್ಕೆ ರಮ್ಯಾ ಬೆಂಗಳೂರಲ್ಲಿಲ್ಲ! ಓದೋಕ್ಕಂತ ಫಾರಿನ್ ಗೆ ತೆರಳಿರುವ ರಮ್ಯಾ ಮೇಡಂ ಲಂಡನ್ ನಲ್ಲೇ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. [ಹೇಗಿದ್ದ ಲಕ್ಕಿ ಸ್ಟಾರ್ ರಮ್ಯಾ ಈಗ ಹೇಗಾಗಿದ್ದಾರೆ ನೋಡಿ]

  ರಮ್ಯಾ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಸಂಘ ಕ್ರಿಕೆಟ್ ಪಂದ್ಯಾವಳಿ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಭಿನ್ನವಾಗಿ ಸ್ಯಾಂಡಲ್ ವುಡ್ ಕ್ವೀನ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಮ್ಯಾ ಜೀವನದ ಕೆಲ ಇಂಟ್ರೆಸ್ಟಿಂಗ್ ಮಾಹಿತಿಗಳನ್ನಿಟ್ಟುಕೊಂಡು ನಾವು ಸ್ಪೆಷಲ್ ಚಿತ್ರಾನ್ನ ರೆಡಿಮಾಡಿದ್ದೀವಿ. ಅದನ್ನ ತಿಳಿದುಕೊಳ್ಳುವುದಕ್ಕೆ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ...[ಎಕ್ಸ್ ಕ್ಯೂಸ್ ಮೀ ಇದು ರಮ್ಯಾ ಅಭಿಮಾನಿಗಳಿಗೆ ಮಾತ್ರ]

  'ನಿನಗಾಗಿ' ಅನ್ನಲಿಲ್ಲ.

  ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ರಮ್ಯಾ ಮೊದಲ ಚಿತ್ರ 'ಅಭಿ'. ಆದ್ರೆ 'ಅಭಿ' ಸಿನಿಮಾ ಶುರುವಾಗುವುದಕ್ಕೂ ಒಂದು ವರ್ಷ ಮುನ್ನವೇ ರಮ್ಯಾ ಬೆಳ್ಳಿತೆರೆಮೇಲೆ 'ನಿನಗಾಗಿ' ಚಿತ್ರದ ಮೂಲಕ ಪರಿಚಯವಾಗ್ಬೇಕಿತ್ತು. ಆದ್ರೆ ಅಷ್ಟರಲ್ಲಿ ರಮ್ಯಾ ಜಾಗಕ್ಕೆ ರಾಧಿಕಾ ಗ್ರ್ಯಾಂಡ್ ಎಂಟ್ರಿಕೊಟ್ರು.

  ಮಿಸ್ಸಾದ 'ಅಪ್ಪು'

  ನಿನಗಾಗಿ ಚಿತ್ರದಂತೆ 'ಅಪ್ಪು' ಚಿತ್ರದ ಆಫರ್ ಕೂಡ ರಮ್ಯಾ ಕೈ ತಪ್ಪಿಹೋಯ್ತು. ಅದ್ರಿಂದ ಪವರ್ ಸ್ಟಾರ್ ಪುನೀತ್ ಜೊತೆ ಡೆಬ್ಯು ಮಾಡುವ ಅವಕಾಶ ಕೂಡ ರಮ್ಯಾಗೆ ಮಿಸ್ಸಾಯ್ತು. ರಮ್ಯಾ ಕೈತಪ್ಪಿದ ಅವಕಾಶ ರಕ್ಷಿತಾಗೆ ಒಲಿಯಿತು.

  ಅಂತೂ ಇಂತೂ ಸಿಕ್ಕ 'ಅಭಿ'

  ಎರಡು ಬಾರಿ ಚಾನ್ಸ್ ಮಿಸ್ ಮಾಡಿಕೊಂಡಿದ್ದ ರಮ್ಯಾ, ಮೂರನೇ ಬಾರಿ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿಕೊಟ್ಟೇಬಿಟ್ಟರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಭಿ' ಚಿತ್ರದೊಂದಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

  'ಅಪ್ಪು' ಜೊತೆ ಅತಿ ಹೆಚ್ಚು ಚಿತ್ರಗಳ ಅಭಿನಯ

  'ಅಪ್ಪು' ಜೊತೆ ನಟಿಸುವ ಅವಕಾಶ ಮೊದಮೊದಲು ಮಿಸ್ಸಾದರೂ, ಪವರ್ ಸ್ಟಾರ್ ಜೊತೆ ಅತಿ ಹೆಚ್ಚು (ಮೂರು) ಚಿತ್ರಗಳಲ್ಲಿ ಅಭಿನಯಿಸಿರುವ ಖ್ಯಾತಿ ರಮ್ಯಾಗೆ ಸಲ್ಲುತ್ತೆ, 'ಅಭಿ', 'ಆಕಾಶ್' ಮತ್ತು 'ಅರಸು' ಚಿತ್ರಗಳಲ್ಲಿ ಪವರ್ ಸ್ಟಾರ್ ಜೊತೆ ಮೋಹಕ ತಾರೆ ರಮ್ಯಾ ಜೊತೆಯಾಗಿದ್ದಾರೆ.

  ರಾಜ್ ಕುಟುಂಬಕ್ಕೆ ಅತ್ಯಾಪ್ತೆ

  ಪ್ರತಿಷ್ಟಿತ ವಜ್ರೇಶ್ವರಿ ಕಂಬೈನ್ಸ್ ಮೂಲಕ ಸಿನಿಲೋಕಕ್ಕೆ ಕಾಲಿಟ್ಟ ರಮ್ಯಾ, ರಾಜ್ ಕುಟುಂಬಕ್ಕೆ ತೀರಾ ಹತ್ತಿರ. ಇದೇ ಕಾರಣಕ್ಕೆ ಅಪ್ಪು ಜೊತೆ ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ರಮ್ಯಾಗೆ ಮಾತ್ರ ಲಭಿಸಿದ್ದು. ಮೂಲ ಹೆಸರು ದಿವ್ಯ ಸ್ಪಂದನ ಆಗಿದ್ರೂ, ರಮ್ಯಾ ಅಂತ ನಾಮಕರಣ ಮಾಡಿ ಚಿತ್ರರಂಗಕ್ಕೆ ಪರಿಚಯಿಸಿದವರು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್.

  ರಮ್ಯಾ ಎತ್ತರ ಎಷ್ಟು?

  'ಕುಳ್ಳಿ' ಅಂತಲೇ ಕೆಲ ಹೀರೋಗಳು, ತಮ್ಮ ಚಿತ್ರಗಳಲ್ಲಿ ರಮ್ಯಾ ಕಾಲನ್ನ ಎಳೆದಿದ್ದರು. ಆದ್ರೆ ಅವರೆಲ್ಲಾ ಹೇಳುವಂತೆ ರಮ್ಯಾ ಅಷ್ಟು ಕುಳ್ಳಿ ಅಲ್ಲ. ಅವರ ನಿಜವಾದ ಎತ್ತರ 5 ಅಡಿ 3 ಇಂಚು.

  ಚಿತ್ರಾನ್ನ ಅಂದ್ರೆ ತುಂಬಾ ಇಷ್ಟ!

  ಮಂಡ್ಯದ ಹುಡುಗಿ ರಮ್ಯಾಗೆ ಚಿತ್ರಾನ್ನ ಅಂದ್ರೆ ಪಂಚಪ್ರಾಣ. ಟೊಮ್ಯಾಟೋ ಚಿತ್ರಾನ್ನವನ್ನ ತಾವೇ ಖುದ್ದಾಗಿ ಮಾಡಿಕೊಂಡು ತಿನ್ನುವುದಂದ್ರೆ ರಮ್ಯಾಗೆ ತುಂಬಾ ಇಷ್ಟವಂತೆ.

  ಎಸ್.ಎಂ.ಕೃಷ್ಣ ಮೊಮ್ಮಗಳಾ ರಮ್ಯಾ?

  ಈ ಪ್ರಶ್ನೆ ಇಡೀ ಕರ್ನಾಟಕದಲ್ಲೇ ಹೆಚ್ಚು ಚರ್ಚಾಸ್ಪದವಾಗಿತ್ತು. ಈ ಬಗ್ಗೆ ಸ್ಪಷ್ಟಪಡಿಸಿರುವ ರಮ್ಯಾ, ಎಸ್.ಎಂ.ಕೃಷ್ಣಗೂ ತಮಗೂ ಯಾವುದೇ ಸಂಬಂಧ ಇಲ್ಲ ಅಂತ ಬಹಿರಂಗವಾಗಿ ಹೇಳಿದ್ದರು. ಮೂಲತಃ ಮಂಡ್ಯ ಮೂಲದ ರಮ್ಯಾ ತಾಯಿ ರಂಜಿತಾ ಮತ್ತು ಸಾಕು ತಂದೆ ಆರ್.ಟಿ.ನಾರಾಯಣ್.

  ಸ್ವಮೇಕ್ ಚಿತ್ರಗಳಲ್ಲಿ ಹೆಚ್ಚು ಅಭಿನಯ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾದಿಯಲ್ಲಿ ರೀಮೇಕ್ ಸಿನಿಮಾಗಳಲ್ಲಿ ಅಭಿನಯಿಸಲ್ಲ ಅಂತ ಪಣತೊಟ್ಟ ರಮ್ಯಾ, ಸ್ವಮೇಕ್ ಚಿತ್ರಗಳಿಗೆ ಹೆಚ್ಚು ಪ್ರಮುಖ್ಯತೆ ನೀಡಿದ್ದಾರೆ. ಅದರಲ್ಲಿ ಅಷ್ಟೇ ಯಶಸ್ವಿಯಾಗಿದ್ದಾರೆ ಕೂಡ. ಅಭಿ, ಎಕ್ಸ್ ಕೂಸ್ ಮೀ, ಆಕಾಶ್, ಅಮೃತಧಾರೆ, ಸೇವಂತಿ ಸೇವಂತಿ, ಜೊತೆಜೊತೆಯಲಿ, ಅರಸು, ಮುಸ್ಸಂಜೆ ಮಾತು, ಸಂಜು ವೆಡ್ಸ್ ಗೀತಾ, ಸಿದ್ಲಿಂಗು, ಕಠಾರಿವೀರ ಸುರಸುಂದರಾಂಗಿ, ಆರ್ಯನ್ ಹೀಗೆ ರಮ್ಯಾ ಸ್ವಮೇಕ್ ಚಿತ್ರಗಳ ಪಟ್ಟಿ ದೊಡ್ಡದಿದೆ.

  ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕ!

  2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯಾ, ಒಂದು ದಶಕದಲ್ಲಿ 45 ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹತ್ತು ವರ್ಷಗಳ ಕಾಲ ನಂಬರ್ ಒನ್ ನಟಿಯಂತಲೇ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ರಮ್ಯಾಗೆ ಈಗಲೂ ಗಾಂಧಿನಗರದಲ್ಲಿ ಬಹುಬೇಡಿಕೆ ಇದೆ.

  ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ

  ಗಾಂಧಿನಗರದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅಂದ್ರೆ ಅದು ರಮ್ಯಾ ಮಾತ್ರ. ಒಂದ್ಕಾಲದಲ್ಲಿ 50 ಲಕ್ಷದ ವರೆಗೂ ಸಂಭಾವನೆ ಪಡೆಯುತ್ತಿದ್ದ ರಮ್ಯಾ, ನಟಿಯರ ಪರವಾಗಿ ಸಂಭಾವನೆ ವಿಷಯದಲ್ಲಿ ದನಿಯೆತ್ತಿದ್ದರು.

  ಕಿರುತೆರೆಗೆ ಎಂಟ್ರಿ

  ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ರಮ್ಯಾ ಕಿರುತೆರೆಗೂ ಎಂಟ್ರಿಕೊಟ್ಟರು. 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಸೂತ್ರಧಾರಿಯಾಗಿ ಪಾತ್ರಗಳನ್ನ ಪರಿಚಯ ಮಾಡುವ ಮೂಲಕ ಒಂದು ವಾರಗಳ ಕಾಲ ಕಿರುತೆರೆಯಲ್ಲೂ ಮಿಂಚಿದ್ದರು ಲಕ್ಕಿ ಸ್ಟಾರ್. [ಆರ್ಯನ್ ಬಳಿಕ ರಮ್ಯಾ ಸದ್ದಿಲ್ಲ ಸುಳಿವಿಲ್ಲ ಏನಾದರು?]

  ರಮ್ಯಾ ರಂಪಾಟ

  ರಮ್ಯಾಗೆ ಅಭಿಮಾನಿಗಳ ಬಳಗ ಎಷ್ಟಿದೆಯೋ ಅಷ್ಟೇ ವಿರೋಧಿಗಳೂ ಇದ್ದಾರೆ. ತಂಟೆಗೆ ಬಂದ್ರೆ ತರಾಟೆಗೆ ತೆಗೆದುಕೊಳ್ಳುವ ಹುಡುಗಿ ರಮ್ಯಾ ಮಾಡಿಕೊಂಡಿರುವ ರಂಪಾಟಗಳು ಒಂದೆರಡಲ್ಲ. ದಂಡಂ ದಶಗುಣಂ ನಿಂದ ಹಿಡಿದು ರಾಜ್ಯ ಪ್ರಶಸ್ತಿಗೆ ಲಾಭಿ ಮಾಡುವ ವಿಷಯದವರೆಗೂ ರಮ್ಯಾ ಅದೆಷ್ಟೋ ಜನರಿಗೆ ನೀರಿಳಿಸಿದ್ದಾರೆ.

  ರಫೇಲ್ ಜೊತೆ ಪ್ರೀತಿ ಪ್ರೇಮ ಪ್ರಣಯ!

  ಬಿಳಿ ರಾಜಕುಮಾರ ರಫೇಲ್ ಗೆ ಕ್ಲೀನ್ ಬೌಲ್ಡ್ ಆಗಿದ್ದ ರಮ್ಯಾ, ಸಂಜು ವೆಡ್ಸ್ ಗೀತಾ ನಂತರ ಎಲ್ಲೇ ಹೋದ್ರೂ, ರಫೇಲ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ರಫೇಲ್ ಹೆಸರಿನ ಟಾಟ್ಯೂವನ್ನು ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ರಮ್ಯಾ ಇತ್ತೀಚೆಗೆ ರಫೇಲ್ ಬಗ್ಗೆ ಮಾತನಾಡಿದ್ದೇ ಇಲ್ಲ.

  ಮಂಡ್ಯದ ಸಂಸದೆ

  2011ರಲ್ಲಿ ಯ್ಯೂತ್ ಕಾಂಗ್ರೆಸ್ ಗೆ ಸೇರ್ಪಡೆಯಾದ ರಮ್ಯಾ, ಅದೇ ಕಾಂಗ್ರೆಸ್ ಪಕ್ಷದಿಂದ ಬಹುಬೇಗ ಮಂಡ್ಯದ ಸಂಸದೆಯಾದರು. ಆದ್ರೆ ಪಕ್ಷದ ಆಂತರಿಕ ವಿಚಾರವಾಗಿ ರಮ್ಯಾ, ಚುನಾವಣೆಯಲ್ಲಿ ಸೋಲು ಕಂಡರು.

  ಲಂಡನ್ ನಲ್ಲಿದ್ದಾರೆ ರಮ್ಯಾ

  ಎಲೆಕ್ಷನ್ ನಲ್ಲಿ ಸೋಲುಕಂಡ ನಂತ್ರ ಸೀದಾ ಲಂಡನ್ ಗೆ ಹಾರಿರುವ ರಮ್ಯಾ ಅಲ್ಲಿ ರಾಜ್ಯಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಇದೆ.

  ಗೌಡರ ಮನೆ ಸೊಸೆಯಾಗುವರೇ ರಮ್ಯಾ

  ಲಂಡನ್ ನಲ್ಲಿ ಓದುವುದರ ಜೊತೆಗೆ ಮತ್ತೆ ಪ್ರೀತಿಯ ಬಲೆಯಲ್ಲಿ ಸಿಲುಕಿಕೊಂಡಿರುವ ರಮ್ಯಾ ಗೌಡರ ಹುಡುಗನ ಜೊತೆ ಸುತ್ತಾಡುತ್ತಿದ್ದಾರೆ ಅಂತ ಗುಲ್ಲೆಬ್ಬಿದೆ. [ಗೌಡರ ಮನೆ ಸೊಸೆಯಾಗುವರೇ ಲಕ್ಕಿ ಸ್ಟಾರ್ ರಮ್ಯಾ?]

  ಗಾಂಧಿನಗರಕ್ಕೆ ಮರಳುವರೇ ರಮ್ಯಾ?

  ಸದ್ಯ ಲಂಡನ್ ನಲ್ಲೇ ಸೆಟ್ಲ್ ಆಗಿರುವ ರಮ್ಯಾ ಮತ್ತೆ ಗಾಂಧಿನಗರಕ್ಕೆ ಮರಳುತ್ತಾರಾ ಅನ್ನುವುದಕ್ಕೆ ರಮ್ಯಾ ಪ್ರತಿಕ್ರಿಯೆಸಿಲ್ಲ. ನೀರ್ ದೋಸೆ, ದಿಲ್ ಕಾ ರಾಜ ಚಿತ್ರತಂಡ ರಮ್ಯಾ ಆಗಮನದ ನಿರೀಕ್ಷೆಯಲ್ಲಿವೆ. ಓದು ಕಂಪ್ಲೀಟ್ ಆಗುತ್ತಿದ್ದ ಹಾಗೆ, ರಮ್ಯಾ ಬೆಂಗಳೂರಿಗೆ ಬಂದ್ರೆ ಮತ್ತೆ ಅಭಿಮಾನಿಗಳಿಗೋಸ್ಕರ ಅಭಿನಯಿಸುತ್ತಾರಾ ಅನ್ನುವುದು ಈಗಿನ ಮಟ್ಟಕ್ಕೆ ಸಸ್ಪೆನ್ಸ್.

  English summary
  Sandalwood Queen Ramya aka Divya Spandana is celebrating her 32nd Birthday today. On behalf of her birthday, here are few interesting facts about Ramya. Take a look

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more