For Quick Alerts
  ALLOW NOTIFICATIONS  
  For Daily Alerts

  ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಸಾಮಾನ್ಯದವನಲ್ಲ.!

  By Bharath Kumar
  |

  ಬಹುಭಾಷಾ ನಟಿ ಶ್ರೀಯಾ ಶರಣ್ ಅವರ ಮದುವೆ ಆಗಿದೆ. ರಷ್ಯನ್ ಬಾಯ್ ಫ್ರೆಂಡ್ 'ಆಂಡ್ರೇ ಕೊಸ್ಚೆವೆವ್' ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಮಾರ್ಚ್ 12 ರಂದು ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

  ಇದೆಲ್ಲವೂ ನಿಜಾನೋ ಸುಳ್ಳೋ ಎಂಬ ಅನುಮಾನ, ಗೊಂದಲ ಎಲ್ಲರನ್ನ ಕಾಡುತ್ತಿತ್ತು. ಕೊನೆಗೂ ಶ್ರೀಯಾ ಮದುವೆ ಫೋಟೋಗಳು ಬಹಿರಂಗವಾಗಿತ್ತು. ಅಷ್ಟಕ್ಕೂ, ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಯಾರು ಎಂಬುದು ಅನೇಕರ ಪ್ರಶ್ನೆ. ಈತ ಶ್ರೀಯಾ ಅವರ ಬಾಯ್ ಫ್ರೆಂಡ್ ಹಾಗೂ ರಷ್ಯಾ ಮೂಲದವರು ಎಂಬುದು ಬಿಟ್ಟರೇ ಉಳಿದ ಮಾಹಿತಿ ಗೊತ್ತಿರಲ್ಲ.

  ಚಿತ್ರಗಳು: ಶ್ರೀಯಾ ಶರಣ್ ಮದುವೆ ಆಲ್ಬಂ

  ಭಾರತ ಚಿತ್ರರಂಗದ ಯಶಸ್ವಿ ನಟಿ ಅಂದ್ಮೇಲೆ ಆಕೆಯನ್ನ ಮದುವೆ ಆಗುವ ಹುಡುಗ ಕೂಡ ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೆಸರು ಮಾಡಿರಲೇಬೇಕು ಅಲ್ವಾ.! ಹೌದು, ನಿಮ್ಮ ಊಹೆ ನಿಜಾ. ಶ್ರೀಯಾ ಮದುವೆ ಆಗಿರುವ ಆಂಡ್ರೇ ಸಾಮಾನ್ಯದವನಲ್ಲ. ಮುಂದೆ ಓದಿ....

  ಟೆನ್ನಿಸ್ ಆಟಗಾರ ಆಂಡ್ರೇ

  ಟೆನ್ನಿಸ್ ಆಟಗಾರ ಆಂಡ್ರೇ

  ಶ್ರೀಯಾ ಶರಣ್ ಅವರ ಪತಿ ಆಂಡ್ರೇ ಖ್ಯಾತ ಟೆನ್ನಿಸ್ ಅಟಗಾರ. ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟು. ತಮ್ಮ ಸಹೋದರ ನಿತೀನ್ ಎದುರಲ್ಲಿ ಕೂಡ ಆಂಡ್ರೇ ರಾಷ್ಟ್ರಪಟ್ಟದಲ್ಲಿ ಟೆನ್ನಿಸ್ ಪಂದ್ಯವನ್ನಾಡಿದ್ದಾರೆ.

  ನಟಿ ಶ್ರೀಯಾ ಸರಣ್ ಮದುವೆ ಆಗೋಗಿದೆ.!ನಟಿ ಶ್ರೀಯಾ ಸರಣ್ ಮದುವೆ ಆಗೋಗಿದೆ.!

  ಅತ್ಯುತ್ತಮ ಯುವ ಉದ್ಯಮಿ

  ಅತ್ಯುತ್ತಮ ಯುವ ಉದ್ಯಮಿ

  ಕೇವಲ ಟೆನ್ನಿಸ್ ಆಟಗಾರ ಮಾತ್ರವಲ್ಲ ರಷ್ಯಾದಲ್ಲಿ ಖ್ಯಾತ ಹಾಗೂ ಯಶಸ್ಸು ಕಂಡಿರುವ ಯುವ ಉದ್ಯಮಿ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಬಿಸ್ ನೆಸ್ ಮ್ಯಾನ್. ಈತನ ಪ್ರತಿಭೆಗೆ '2015 ರಲ್ಲಿ ಅತ್ಯುತ್ತಮ ಯಂಗ್ ಎಂಟರ್ಪ್ರೆನಿಯರ್ ಪ್ರಶಸ್ತಿ' ಕೂಡ ಲಭಿಸಿದೆ.

  ವೈರಲ್ ಆಗಿದೆ ಕಿಸ್ಸಿಂಗ್ ಫೋಟೋ

  ವೈರಲ್ ಆಗಿದೆ ಕಿಸ್ಸಿಂಗ್ ಫೋಟೋ

  ಜನರಲ್ ಮ್ಯಾನೆಜ್ ಮೆಂಟ್ ಡಿಪ್ಲೋಮಾ ಪದವಿ ಪಡೆದುಕೊಂಡಿರುವ ಆಂಡ್ರೇ ಭಾರತದಲ್ಲಿ ಹಿಂದೂ ಸಂಪ್ರದಾಯವಾಗಿ ವಿವಾಹವಾಗಿದ್ದಾರೆ. ಇನ್ನು ಮದುವೆ ನಂತರ ಶ್ರೀಯಾ ಮತ್ತು ಆಂಡ್ರೇ ಕಿಸ್ಸ್ ಮಾಡಿರುವ ಫೋಟೋವೊಂದು ವೈರಲ್ ಆಗಿದೆ.

  ಗುಟ್ಟಾಗಿ ಮದುವೆ ಆಗಿದ್ದ ಶ್ರಿಯಾ ಸರಣ್ ಮದುವೆ ಫೋಟೋ ಇದೀಗ ರಟ್ಟು!ಗುಟ್ಟಾಗಿ ಮದುವೆ ಆಗಿದ್ದ ಶ್ರಿಯಾ ಸರಣ್ ಮದುವೆ ಫೋಟೋ ಇದೀಗ ರಟ್ಟು!

  ಗೆಳತಿಯರು ಭಾಗಿ

  ಗೆಳತಿಯರು ಭಾಗಿ

  ಶ್ರೀಯಾ ಮತ್ತು ಆಂಡ್ರೇ ಅವರ ಮದುವೆಯಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇವರ ಪೈಕಿ ಶ್ರೀಯಾ ಅವರ ಗೆಳತಿಯರಾಗಿರುವ ತಮನ್ನಾ ಮತ್ತು ಕಾಜಲ್ ಅಗರ್ ವಲ್ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Southern beauty Shriya Saran surprised the entire nation with the news of her marriage on March 19. Here are a few interesting facts about Shriya's Russian husband Andrei Koscheev.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X