»   » ಡಾ.ರಾಜ್ ಮೊಮ್ಮಗ ಧೀರನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ಡಾ.ರಾಜ್ ಮೊಮ್ಮಗ ಧೀರನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಅವರ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪ್ರವೇಶ ಮಾಡಲು ಸಿದ್ದವಾಗಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಮಗ ವಿನಯ್ ರಾಜ್ ಕುಮಾರ್ ಸೇರಿದಂತೆ ಈಗಾಗಲೇ ನಾಲ್ಕು ಜನ ನಟರು ಡಾ.ರಾಜ್ ಕುಟುಂಬದಲ್ಲಿ ಇದ್ದಾರೆ. ಈಗ ಐದನೇ ನಟನ ಎಂಟ್ರಿಗೆ ಚಂದನವನ ಸಜ್ಜಾಗುತ್ತಿದೆ.

ಅಂದ್ಹಾಗೆ, ಧೀರನ್ ಸುಖಸುಮ್ಮನೇ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿಲ್ಲ. ಎಲ್ಲ ರೀತಿಯ ತಯಾರಿ ಮಾಡಿಕೊಂಡೇ ಬಣ್ಣ ಹಚ್ಚಲು ಸಿದ್ದವಾಗುತ್ತಿದ್ದಾರೆ. ಈಗಷ್ಟೇ ಇಂಜಿನಿಯರಿಂಗ್ ಮುಗಿಸಿರುವ ಧೀರನ್ ಈಗ ನಟನೆ, ಡ್ಯಾನ್ಸ್, ಫೈಟ್ ಹೀಗೆ ಎಲ್ಲವನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಸ್ಟೈಲಿಶ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿರುವ ಧೀರನ್ ರಾಮ್ ಕುಮಾರ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷ್ಯಗಳು ಇಲ್ಲಿದೆ ನೋಡಿ.

ಯಾರು ಈ ಧೀರನ್?

ಡಾ.ರಾಜ್ ಕುಮಾರ್ ಮೊಮ್ಮಗನಾಗಿರುವ ಧೀರನ್, ರಾಜ್ ಕುಮಾರ್ ಅವರ ಕಿರಿಯ ಮಗಳು ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ದಂಪತಿಯ ಮಗ.

ಬೆಳ್ಳಿತೆರೆಗೆ ಬರಲು ಸಿದ್ದ

ಈಗಷ್ಟೇ ವ್ಯಾಸಂಗ ಮುಗಿಸಿರುವ ಧೀರನ್ ತಮ್ಮ ತಾತನಂತೆ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ದವಾಗಿದ್ದಾರೆ. ಅದಕ್ಕಾಗಿಯೇ ಸಾಕಷ್ಟು ತಯಾರಿ ಮಾಡಿಕೊಂಡು ಸ್ಯಾಂಡಲ್ ವುಡ್ ಗೆ ಜಿಗಿಯಲು ರೆಡಿಯಾಗುತ್ತಿದ್ದಾರೆ.

ಡ್ಯಾನ್ಸ್-ಫೈಟ್ ಕಲಿಕೆ

ಧೀರನ್ ಕೇವಲ ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗಬಾರದು ಎಂದು ಡ್ಯಾನ್ಸ್, ಫೈಟ್ ಎಲ್ಲವೂ ಕಲಿಯುತ್ತಿದ್ದಾರೆ. ಅಭಿನಯ ತರಂಗದ ಗೌರಿ ದತ್ತು ಅವರ ಬಳಿ ರಂಗಭೂಮಿಯ ಪಟುಗಳನ್ನ ಕಲಿಯುತ್ತಿರುವ ಧೀರನ್, ಕ್ಲಾಸ್ ಮತ್ತು ಮಾಸ್ ಎರಡು ಕಥೆಗಳಿಗೂ ನ್ಯಾಯ ಒದಗಿಸುವ ಸಿನಿಮಾ ಮಾಡಲಿದ್ದಾರಂತೆ.

ಅದ್ಧೂರಿ ಫೋಟೋಶೂಟ್

ಧೀರನ್ ರಾಮ್ ಕುಮಾರ್ ತಮ್ಮ ಚೊಚ್ಚಲ ಚಿತ್ರಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ಅದ್ಧೂರಿಯಾಗಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೊಡ್ಮನೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಾವಂದಿರಿಂದ ಉತ್ತೇಜನ

ಧೀರನ್ ಅವರ ಮಾವಂದಿರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಿಂದ ನಟನೆ ಬಗ್ಗೆ ಹಾಗೂ ವೈಯಕ್ತಿವಾಗಿ ಹೇಗಿರಬೇಕು ಮತ್ತು ಹಾರ್ಡ್ ವರ್ಕ್ ಹೇಗಿರಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡಿದ್ದಾರಂತೆ.

ಧೀರನ್ ಗೆ ಅರಸಿ ಬಂದಿವೆ ಆಫರ್

ಈಗಾಗಲೇ ಧೀರನ್ ನಾಯಕನನ್ನಾಗಿ ಪರಿಚಯಿಸಲು ಹಲವು ನಿರ್ಮಾಪಕರು ಮುಂದೆ ಬಂದಿದ್ದಾರೆ. ಒಳ್ಳೆ ಸಮಯಕ್ಕಾಗಿ ಕಾಯುತ್ತಿರುವ ಧೀರನ್ ಇನ್ನು ಯಾವ ಚಿತ್ರವನ್ನ ಒಪ್ಪಿಕೊಂಡಿಲ್ಲವಂತೆ.

ಅತಿ ಶೀಘ್ರದಲ್ಲಿ ಧೀರನ್ ಲಾಂಚ್

ಎಲ್ಲ ರೀತಿಯ ಸಿದ್ದತೆಗಳನ್ನ ಮಾಡಿಕೊಂಡಿರುವ ಧೀರನ್ ರಾಮ್ ಕುಮಾರ್, ತಮ್ಮ ಮಾವಂದಿರ ಸಲಹೆ ಮೆರೆಗೆ ಒಂದೊಳ್ಳೆ ಸಿನಿಮಾ ಆಯ್ಕೆ ಮಾಡಿಕೊಂಡು ಬಿಗ್ ಸ್ಕ್ರೀನ್ ಪ್ರವೇಶ ಮಾಡಲಿದ್ದಾರಂತೆ.

English summary
Dheeren, one of Dr Rajkumar's grandsons. Dheeren is the son of Poornima and Ramkumar. Poornima happens to be Dr. Rajkumar's youngest daughter. Here is an interesting facts on Dheeren

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada