For Quick Alerts
  ALLOW NOTIFICATIONS  
  For Daily Alerts

  'ಅಭಿನೇತ್ರಿ' ಪೂಜಾಗಾಂಧಿ ಕತ್ತಲ್ಲಿ ಕಲ್ಪನಾರ ಕಪ್ಪು ಮಚ್ಚೆ

  By ಜೀವನರಸಿಕ
  |

  ನಟಿ ಪೂಜಾ ಗಾಂಧಿ ಅವರ ಲಕ್ಕೇ ಚೆನ್ನಾಗಿಲ್ಲ ಅಂತ ಈ ಹಿಂದೆ ನಾವೇ ಹೇಳಿದ್ವಿ. ಪೂಜಾ ಬ್ಯಾಡ್ ಲಕ್ ಬಗ್ಗೆ ಒಂದು ಸ್ಲೈಡ್ ನಲ್ಲೇ ವಿವರಿಸಿದ್ವಿ. ಈಗ ಪೂಜಾ ಅದೃಷ್ಟ ಕೊಂಚ ಸುಧಾರಿಸ್ತಿದೆ. ಪೂಜಾ ಅಭಿನಯದ 'ಅಭಿನೇತ್ರಿ' ಸಿನಿಮಾದ ಶೂಟಿಂಗ್ ಶುರುವಾಗಿದೆ.

  ಈ ಹಿಂದೆ ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಹೆಸರಲ್ಲಿ ಶುರುವಾಗಿದ್ದ ಚಿತ್ರ ಈಗ ಕಂಪ್ಲೀಟ್ಲೀ ಪೂಜಾಗಾಂಧಿ ಪ್ರೊಡಕ್ಷನ್ಸ್ ಆಗಿದೆ. ಮುಹೂರ್ತ ನಡೆಸಿ ಎರಡು ತಿಂಗಳು ಸುಮ್ಮನಿದ್ದ ಪೂಜಾ ಗಾಂಧಿ 'ಅಭಿನೇತ್ರಿ'ಗೆ ಪ್ರೊಡ್ಯೂಸರ್ ಬಳ್ಳಾರಿಯ ವೈಜಯಂತಿ ಅನ್ನೋರು. [ತಿಪ್ಪಜ್ಜಿ ಸರ್ಕಲ್ ಕಥೆ ಏನಾಯಿತು?]

  ಆದರೆ ಮುಹೂರ್ತದ ಮಾರನೇ ದಿನವೇ ಮುಹೂರ್ತದಲ್ಲಾದ ದುಂದು ವೆಚ್ಚ ಮತ್ತು ಇನ್ನೂ ಏನೇನೋ ಕಾರಣಗಳಿಗೆ ಪ್ರೊಡ್ಯೂಸರ್ ದೂರವಾದರು ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿತ್ತು. ಆದರೆ ಪೂಜಾ ಅದರ ಬಗ್ಗೆ ತುಟಿ ಪಿಟಕ್ಕೆಂದಿಲ್ಲ.

  ಏನೇ ಆಗ್ಲಿ ಪೂಜಾ ಮತ್ತೆ ಟ್ರ್ಯಾಕ್ ಗೆ ಬಂದಿದ್ದಾರೆ. ಸತೀಶ್ ಪ್ರಧಾನ್ ನಿರ್ದೇಶನದ ಸಿನಿಮಾದ ಶೂಟಿಂಗ್ 40 ದಿನಗಳ ಮೊದಲ ಶೆಡ್ಯೂಲ್ ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ನಡೆಯಲಿದೆಯಂತೆ. ಪೂಜಾ ಇಲ್ಲಿ 70-80ರ ದಶಕದ ನಾಯಕಿಯರನ್ನ ಪ್ರತಿನಿಧಿಸೋ ಪಾತ್ರ ಮಾಡ್ತಿದ್ದಾರೆ. ಇಲ್ಲಿ ಪೂಜಾಗಾಂಧಿ 20 ಕ್ಕೂ ಹೆಚ್ಚು ಗೆಟಪ್ ಗಳಲ್ಲಿ ಮಿಂಚ್ತಾರೆ. ಪೂಜಾ ಗಾಂಧಿ ಗೆಟಪ್ ಬಗ್ಗೆ ಸ್ಲೈಡ್ ನಲ್ಲೊಂದು ಇಣುಕು ನೋಟ.

  ಮಿನುಗುತಾರೆ ಕಲ್ಪನಾ ಕಥೆ ಅನ್ನೋ ಗುಮಾನಿ

  ಮಿನುಗುತಾರೆ ಕಲ್ಪನಾ ಕಥೆ ಅನ್ನೋ ಗುಮಾನಿ

  ಇದು ಮಿನುಗುತಾರೆ ಕಲ್ಪನಾ ಕಥೆ ಅನ್ನೋ ಗುಮಾನಿ ಸ್ಯಾಂಡಲ್ ವುಡ್ ನದ್ದು.

  ಕಲ್ಪನಾರಂತೆ ಕಪ್ಪು ಮಚ್ಚೆಯೂ ಇದೆ

  ಕಲ್ಪನಾರಂತೆ ಕಪ್ಪು ಮಚ್ಚೆಯೂ ಇದೆ

  ಪೂಜಾಗಾಂಧಿಯ ಕತ್ತಲ್ಲಿ ಶರಪಂಜರದ ಕಲ್ಪನಾರಂತೆ ಕಪ್ಪು ಮಚ್ಚೆಯೂ ಇದೆ.

  ಪಂಜರದಲ್ಲಿ ನಿಂತ ಕಲ್ಪನಾ ಗೆಟಪ್

  ಪಂಜರದಲ್ಲಿ ನಿಂತ ಕಲ್ಪನಾ ಗೆಟಪ್

  ಶರಪಂಜರದ ಪಂಜರದೊಳಗೆ ಪೂಜಾಗಾಂಧಿ ಕಲ್ಪನಾರಂತೆ ನಿಂತಿರೋ ಗೆಟಪ್ ಕೂಡ ಇಲ್ಲಿದೆ.

  ಇಲ್ಲೂ ಕೂಡ ಕಲ್ಪನಾ ಛಾಯೆಯಿದೆ

  ಇಲ್ಲೂ ಕೂಡ ಕಲ್ಪನಾ ಛಾಯೆಯಿದೆ

  ರಾಜಕಾರಿಣಿಯಂತೆ ಜನ್ರ ಮುಂದೆ ನಿಂತು ಕೈ ಬೀಸ್ತಾ ಇರೋ ಪೋಸ್ ಇದೆ, ಇಲ್ಲೂ ಕೂಡ ಕಲ್ಪನಾ ಛಾಯೆಯಿದೆ.

  ಅತುಲ್ ಕುಲಕರ್ಣಿ ಅವರದು ನಿರ್ದೇಶಕನ ಪಾತ್ರ

  ಅತುಲ್ ಕುಲಕರ್ಣಿ ಅವರದು ನಿರ್ದೇಶಕನ ಪಾತ್ರ

  ಅತುಲ್ ಕುಲಕರ್ಣಿ ಸಿನಿಮಾದೊಳಗೆ ನಿರ್ದೇಶಕನ ಪಾತ್ರ ಮಾಡ್ತಿದ್ದಾರೆ.

  ಎಪ್ಪತ್ತರ ದಶಕದ ಕಥೆ ಹೇಳೋಕೆ ಹೊರಟ ಪೂಜಾ

  ಎಪ್ಪತ್ತರ ದಶಕದ ಕಥೆ ಹೇಳೋಕೆ ಹೊರಟ ಪೂಜಾ

  ಫೋಟೋ ಶೂಟ್ ನಲ್ಲಿ ಎಪ್ಪತ್ತರ ದಶಕದ ಕಥೆ ಹೇಳೋಕೆ ಹೊರಡ್ತಿದ್ದಾರೆ ಪೂಜಾಗಾಂಧಿ.

  ಕಾಸ್ಟ್ಯೂಮ್ ಡಿಸೈನ್ ವಿಶೇಷವಾಗಿದೆ

  ಕಾಸ್ಟ್ಯೂಮ್ ಡಿಸೈನ್ ವಿಶೇಷವಾಗಿದೆ

  ಕಾಸ್ಟ್ಯೂಮ್ ಗಳನ್ನ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. 70ರ ದಶಕದ ನಟಿಯರು ಬಳಸ್ತಾ ಇದ್ದ ಬಟ್ಟೆಗಳ ಡಿಸೈನನ್ನೇ ಇಲ್ಲೂ ನೋಡಬಹುದು.

  English summary
  Interesting facts on actress Pooja Gandhi forthcoming movie 'Abhinetri'. Her role almost imitates Minugu Tare Kalpana. She is producing the film under Pooja Gandhi productions. Atul Kulkarni play a director in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X