ಸುನೀಲ್ ರಾವ್ ಮಾಡಬೇಕಿದ್ದ 'ತಾಜ್‌ಮಹಲ್' ಅಜಯ್ ರಾವ್ ಕೈ ಸೇರಿದ್ದೇಗೆ?

ಆರ್ ಚಂದ್ರು ನಿರ್ದೇಶನದ 'ತಾಜ್ ಮಹಲ್' ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಮುಂಗಾರು ಮಳೆ ಗುಂಗಿನಲ್ಲಿದ್ದ ಪ್ರೇಕ್ಷಕರಿಗೆ ತಾಜ್ ಮಹಲ್ ತೋರಿಸಿ ಗೆಲುವು ಕಂಡಿದ್ದು ಈಗ ಇತಿಹಾಸ. ಆರ್ ಚಂದ್ರುಗೆ ಇದು ಚೊಚ್ಚಲ ಸಿನಿಮಾ. ಎಕ್ಸ್‌ಕ್ಯೂಸಮಿ ಬಳಿಕ ಸಕ್ಸಸ್ ಸಿಗದೆ ಒದ್ದಾಡುತ್ತಿದ್ದ ಅಜಯ್ ರಾವ್‌ಗೆ ಬ್ರೇಕ್ ಕೊಟ್ಟಂತಹ ಚಿತ್ರ.

Recommended Video

DIRECTORS DIARY | ಅಜಯ್ ರಾವ್ ನೋಡದೆ ಇರೋ ಅಷ್ಟು ಸಂಭಾವನೆ ಕೊಡ್ಸಿದ್ದೆ| R Chandru |Part 3 |Filmibeat Kannada

ತಾಜ್ ಮಹಲ್ ಸಿನಿಮಾ ಶುರುವಾಗಿದ್ದೇ ಒಂದು ರೋಚಕ ಕಥೆ. ನಿಜ ಏನಪ್ಪಾ ಅಂದ್ರೆ ತಾಜ್ ಮಹಲ್ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಅಜಯ್ ರಾವ್ ಅಲ್ಲ. ಅಜಯ್‌ಗೂ ಮುಂಚೆ ಈ ಸಿನಿಮಾ ಮಾಡಬೇಕಾಗಿದಿದ್ದು ಸುನಿಲ್ ರಾವ್. ಅದ್ರೆ, ಸುನೀಲ್ ರಾವ್ ಈ ಚಿತ್ರದಿಂದ ಹಿಂದೆ ಸರಿದರು. ಏಕೆ? ಮುಂದೆ ಓದಿ....

'ಐ ಮಿಸ್ ಯೂ' ಎಂದು ಹೆಸರಿಟ್ಟಿದ್ದ ಆರ್ ಚಂದ್ರು

'ಐ ಮಿಸ್ ಯೂ' ಎಂದು ಹೆಸರಿಟ್ಟಿದ್ದ ಆರ್ ಚಂದ್ರು

ಎಸ್‌ ನಾರಾಯಣ್ ತಂಡದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆರ್ ಚಂದ್ರು ಒಂದು ಲವ್ ಸ್ಟೋರಿ ಕಥೆ ಮಾಡಿದ್ದರು. ಆ ಕಥೆಗೆ ಮೊದಲು 'ಉರಿ ಬಿಸಿಲು' ಎಂದು ಹೆಸರು ಇಟ್ಟುಕೊಂಡಿದ್ದರು. ನಂತರ ಅದಕ್ಕೆ 'ಐ ಮಿಸ್ ಯೂ' ಅಂತಹ ಬದಲಾಯಿಸಿಕೊಂಡರು. ಈ ಕಥೆಯನ್ನು ಸಿನಿಮಾ ಮಾಡ್ಬೇಕೆಂದು ನಿರ್ಧರಿಸಿ ಚಂದ್ರು, ನಿರ್ಮಾಪಕರಿಗಾಗಿ ಇಡೀ ಗಾಂಧಿನಗರ ಸುತ್ತಾಡಿರುವುದು ಉಂಟು. ಆಗಲೇ ಸಿಕ್ಕಿದ್ದೇ ಅಶೋಕ್. ಅವರು ತಾಜ್‌ ಮಹಲ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು.

ಶಿವಶಂಕರ್ ರೆಡ್ಡಿ ಮುಂದೆ ಬಂದರು

ಶಿವಶಂಕರ್ ರೆಡ್ಡಿ ಮುಂದೆ ಬಂದರು

ಅಶೋಕ್ ಅವರ ಕರೆದುಕೊಂಡು ಬಂದ ವ್ಯಕ್ತಿ ಶಿವಶಂಕರ್ ರೆಡ್ಡಿ. ಕಥೆ ಕೇಳಿ ಇಷ್ಟಪಟ್ಟ ಈ ಇಬ್ಬರು ಮತ್ತೊಬ್ಬರನ್ನು ಪಾಟ್ನರ್ ಮಾಡಿಕೊಂಡು ಸಿನಿಮಾ ಮಾಡಬೇಕೆಂದು ನಿರ್ಧರಿಸಿದರು. ಆಮೇಲೆ ಹೀರೋ ಯಾರು ಎಂದು ಬಂದಾಗ ಎಕ್ಸ್‌ಕ್ಯೂಸ್‌ಮಿ ನಾಯಕ ಸುನೀಲ್ ರಾವ್ ಅಂತ ಫಿಕ್ಸ್ ಆಯಿತು. ನಿರ್ಮಾಪಕರು ಸಹ ಖುಷಿ ಆದರು. ಸುನೀಲ್ ರಾವ್ ಜೊತೆ ಚಂದ್ರುಗೆ ಮೊದಲೇ ಪರಿಚಯ ಇದ್ದ ಕಾರಣ, ಕಥೆ ಕೇಳಿ, 'ಓಕೆ ಸಿನಿಮಾ ಮಾಡೋಣ' ಎಂದು ಒಪ್ಪಿದರು ಸುನೀಲ್.

'ತಾಜ್ ಮಹಲ್' ಟೈಟಲ್ ಬದಲಾಗಿದ್ದು ಹೇಗೆ?

'ತಾಜ್ ಮಹಲ್' ಟೈಟಲ್ ಬದಲಾಗಿದ್ದು ಹೇಗೆ?

ಕಥೆ, ಹೀರೋ ಎಲ್ಲ ಓಕೆ ಆದ್ಮೇಲೆ ನಿರ್ಮಾಪಕರು ಉತ್ತರ ಭಾರತ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದರು. ಈ ಸಂದರ್ಭದಲ್ಲಿ ಚಂದ್ರು ಸಹ ಅವರ ಜೊತೆಯಲ್ಲಿ ಹೋದರು. ಆಗ್ರಾ ಬಳಿ ಹೋದಾಗ ತಾಜ್ ಮಹಲ್ ನೋಡುತ್ತಿದ್ದ ಚಂದ್ರುಗೆ ತನ್ನ ಕಥೆಗೆ 'ತಾಜ್ ಮಹಲ್' ಎಂದು ಹೆಸರಿಡುವುದು ಸೂಕ್ತ ಎಂಬ ಭಾವನೆಗೆ ಬಂದರು. ನಂತರ ನಿರ್ಮಾಪಕರಿಗೂ ವಿಚಾರ ಹೇಳಿ ತಾಜ್ ಮಹಲ್ ಫಿಕ್ಸ್ ಮಾಡ್ತಾರೆ.

ಸುನೀಲ್ ರಾವ್ ಮಾಡಲ್ಲ ಅಂದಿದ್ದೇಕೆ?

ಸುನೀಲ್ ರಾವ್ ಮಾಡಲ್ಲ ಅಂದಿದ್ದೇಕೆ?

ತಾಜ್ ಮಹಲ್ ಚಿತ್ರದ ಸ್ಕ್ರಿಪ್ ಸಿದ್ಧ ಮಾಡಿ ಸುನೀಲ್ ರಾವ್ ಅವರಿಗೆ ನೀಡಲಾಗಿತ್ತು. ಆ ಸ್ಕ್ರಿಪ್ಟ್‌ನಲ್ಲಿ ಕೆಲವು ಅಕ್ಷರಗಳಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದವು. ಅದನ್ನು ಗಮನಿಸಿದ ಸುನೀಲ್ ರಾವ್, ಆರ್ ಚಂದ್ರು ಅವರನ್ನು ಕರೆದು ''ನೋಡು ಸ್ಕ್ರಿಪ್ಟ್‌ನಲ್ಲಿ ತಪ್ಪುಗಳಿವೆ, ಸಣ್ಣ ತಪ್ಪುಗಳನ್ನು ನಿಭಾಯಿಸದ ನೀನು ದೊಡ್ಡ ಸಿನಿಮಾ ಹೇಗೆ ಮಾಡಲು ಸಾಧ್ಯ? ನೀನು ಧಾರಾವಾಹಿ ಮಾಡಿರುವುದನ್ನು ನೋಡಿದ್ದೇನೆ, ಸಿನಿಮಾ ಮಾಡಿದ್ದು ನೋಡಿಲ್ಲ. ಒಂದು ಸಿನಿಮಾ ಮಾಡು, ಆಮೇಲೆ ಒಟ್ಟಿಗೆ ಸಿನಿಮಾ ಮಾಡೋಣ. ಈಗ ಈ ಚಿತ್ರ ನಾನು ಮಾಡೋಕೆ ಆಗಲ್ಲ'' ಎಂದು ಆತ್ಮೀಯವಾಗಿ ತಿಳಿಸಿದರಂತೆ. ಇದನ್ನು ಸ್ವತಃ ಆರ್ ಚಂದ್ರ ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ಹೇಳಿಕೊಂಡಿದ್ದಾರೆ.

ಅಜಯ್ ರಾವ್ ಏಕೆ ಟ್ರೈ ಮಾಡಬಾರದು

ಅಜಯ್ ರಾವ್ ಏಕೆ ಟ್ರೈ ಮಾಡಬಾರದು

ಸುನೀಲ್ ರಾವ್ ಆಗಲ್ಲ ಅಂದ್ಮೇಲೆ ಆಕಾಶನೇ ತಲೆಕೆಳಗಾದಂತೆ ಚಿಂತೆಗೆ ಬಿದ್ದ ಚಂದ್ರು ಮುಂದೇನೂ ಎಂದು ಯೋಚಿಸುತ್ತಾ ಕುಳಿತುಬಿಟ್ಟರು. ಸ್ಕ್ರಿಪ್ಟ್ ಪೂಜೆ ಆಗಿದೆ, ಎಕ್ಸ್‌ಕ್ಯೂಸ್‌ಮಿ ಹೀರೋ ಅಂತ ಪ್ರಚಾರ ಆಗ್ಬಿಟ್ಟಿದೆ. ಆಗ ತಲೆಯಲ್ಲಿ ಬಂದಿದ್ದು ಎಕ್ಸ್‌ಕ್ಯೂಸ್‌ಮಿ ಹೀರೋ ಸುನೀಲ್ ರಾವ್ ಒಬ್ಬರು, ಮತ್ತೊಬ್ಬರು ಅಜಯ್ ರಾವ್ ಇದ್ದಾರೆ ಅಲ್ವಾ ಎಂದು ನಿರ್ಧರಿಸಿದ ಚಂದ್ರು ಮತ್ತೆ ಪ್ರಾಜೆಕ್ಟ್ ಗೆ ಜೀವ ತುಂಬಲು ಮುಂದಾದರು.

ಅಜಯ್ ರಾವ್ ಮೇಕ್ ಓವರ್

ಅಜಯ್ ರಾವ್ ಮೇಕ್ ಓವರ್

ಅಜಯ್ ರಾವ್ ಅವರನ್ನು ಸಂಪರ್ಕಿಸಿ, ಅವರನ್ನು ಮಲ್ಲೇಶ್ವರಂಗೆ ಕರೆದುಕೊಂಡು ಹೋಗಿ ಮೇಕ್ ಓವರ್ ಮಾಡಿಸಿ, ನಿರ್ಮಾಪಕರಿಗೆ ಇವರೇ ನಮ್ಮ ಹೀರೋ ಎಂದು ಪರಿಚಯಿಸಿದಾಗ ಸ್ವತಃ ನಿರ್ಮಾಪಕರು ಸಹ ಬಹಳ ಸಂತೋಷಗೊಂಡರಂತೆ. ಈ ಚಿತ್ರಕ್ಕೆ ಇವರೇ ಸೂಕ್ತ ಎನ್ನುವಷ್ಟು ಲುಕ್ ಮಾಡಿಸಿದ್ದರಂತೆ ಚಂದ್ರು. ಅಜಯ್ ರಾವ್ ಸಹ ಖುಷಿಯಿಂದ ಚಿತ್ರ ಒಪ್ಪಿಕೊಂಡು ಸಿನಿಮಾ ಮಾಡಿದರು. ಆಮೇಲೆ ರಿಲೀಸ್ ಆಯ್ತು, ಸಿನಿಮಾನೂ ಸಕ್ಸಸ್ ಆಗಿದ್ದು ಈಗ ಇತಿಹಾಸ.

More from Filmibeat

English summary
Director R Chandru shares Interesting story behind Taj mahal movie Making with filmibeat director dairy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X