ಅಂತಾರಾಷ್ಟ್ರೀಯ ಪ್ರಶಸ್ತಿಗಳ ಬಾಚಿಕೊಂಡ ಕನ್ನಡ ಸಿನಿಮಾ 'ಪೆದ್ರೊ' ಟ್ರೇಲರ್ ಬಿಡುಗಡೆ

ಹಲವು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿರುವ ಕನ್ನಡ ಸಿನಿಮಾ 'ಪೆದ್ರೊ'ದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

ಕನ್ನಡದ ಹಿರಿಯ, ಜನಪ್ರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಟ್ರೇಲರ್ ಬಿಡುಗಡೆ ಮಾಡಿದ್ದು, 'ಪೆದ್ರೊ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡಿ, ನಟೇಶ್ ಹೆಗಡೆ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ಪ್ರಸ್ತುತ ಪಡಿಸುತ್ತಿದ್ದಾರೆ.

ಬೂಸಾನ್ ಅಂತರಾಷ್ಟ್ರೀಯ ಸಿನಿಮೋತ್ಸವ, ಬಿಎಫ್‌ಐ ಲಂಡನ್ ಸಿನಿಮೋತ್ಸವ, ಫೆಸ್ಟಿವಲ್ ದೆ 3 ಕಾಂಟಿನೆಂಟ್ಸ್, ಇನ್ನೂ ಕೆಲವು ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡು ಪ್ರಶಸ್ತಿಯ ಜೊತೆಗೆ ಮೆಚ್ಚುಗೆ ಗಳಿಸಿದೆ.

ತನ್ನ ಮುದ್ದಿನ ನಾಯಿಯನ್ನು ಕೊಂದ ಹಂದಿಯನ್ನು ಕೊಲ್ಲಲು ಯತ್ನಿಸುವಾಗ ಆಗುವ ಅನಾಹುತ ಹಾಗೂ ಆ ನಂತರ ಪೆದ್ರೊನ ಜೀವನದಲ್ಲಿ ನಡೆಯುವ ಘಟನೆಗಳೇ ಸಿನಿಮಾದ ಕತೆ.

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರೀಶ್ ಕಾಸರವಳ್ಳಿ, ''ಇತ್ತೀಚಿನ ವರ್ಷಗಳಲ್ಲಿ ನಾನು ಮೆಚ್ಚಿದ ಸಿನಿಮಾಗಳಲ್ಲಿ ಒಂದು 'ಪೆದ್ರೊ'. ಈ ಸಿನಿಮಾದಲ್ಲಿ ನಿರ್ದೇಶಕ ನಟೇಶ್ ಹೆಗಡೆ ಬಳಸಿರುವ ಭಾಷೆ ಹಾಗೂ 'ಸಿನಿಮಾ ಭಾಷೆ' ನನ್ನನ್ನು ಆಶ್ಚರ್ಯ ಚಕಿತಗೊಳಿಸಿತು. ಇದೊಂದು ಬಹಳ ಭಿನ್ನ ಅನುಭವ ಕೊಡುವ ಸಿನಿಮಾ'' ಎಂದರು.

 International Award Winning Kannada Movie Pedro Trailer Released

'ಪೆದ್ರೊ' ನಿರ್ಮಾಪಕ ರಿಷಬ್ ಶೆಟ್ಟಿಯವರನ್ನು ಶ್ಲಾಘಿಸಿದ ಗಿರೀಶ್ ಕಾಸರವಳ್ಳಿ, ''ರಿಷಬ್ ಶೆಟ್ಟಿಯವರು ಒಂದೊಳ್ಳೆಯ ಪರಂಪರೆಯನ್ನು ಹುಟ್ಟುಹಾಕುತ್ತಿದ್ದಾರೆ. ಸ್ಟಾರ್ ನಟರು ಈ ರೀತಿಯ ಕಲಾ ಮಾದರಿಯ ಸಿನಿಮಾಗಳಿಗೆ ಬಂಡವಾಳ ಹೂಡುವ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ನಡೆದಿದೆ. ಇಲ್ಲಿ ರಿಷಬ್ ಶೆಟ್ಟಿ ಮಾದರಿಯಾಗಲಿ ಎಂದು ನಾನು ಹಾರೈಸುತ್ತೇನೆ. ಈಗಾಗಲೇ ಖ್ಯಾತಿ ಗಳಿಸಿದ ನಿರ್ದೇಶಕರನ್ನು ಬಿಟ್ಟು ಹೊಸ ನಿರ್ದೇಶಕರ, ಅದರಲ್ಲಿಯೂ ಹೊಸ ರೀತಿಯ ಸಿನಿಮಾಗಳನ್ನು ಮಾಡುವ ನಿರ್ದೇಶಕರಿಗೆ ಬೆನ್ನೆಲುಬಾಗುವುದು ಸುಲಭದ ಮಾತಲ್ಲ'' ಎಂದರು.ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ನಟೇಶ್ ಹೆಗಡೆ, ''ನಮ್ಮ ಸಿನಿಮಾ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ ಆದರೆ ಈ ಸಿನಿಮಾ ನಮ್ಮ ಜನರಿಗೆ ಹೆಚ್ಚು ಅರ್ಥವಾಗುತ್ತದೆ ಎಂಬುದು ನನ್ನ ನಂಬಿಕೆ. ಹಾಗಾಗಿ ಈ ಟ್ರೇಲರ್‌ ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿಕ್ಕೆ ಸಂತೋಶವಾಗುತ್ತದೆ'' ಎಂದರು. ಜೊತೆಗೆ ನಿರ್ಮಾಪಕ ರಿಷಬ್ ಶೆಟ್ಟಿ, ನಿರ್ದೇಶಕ ರಾಜ್ ಬಿ ಶೆಟ್ಟಿ , ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಪ್ರಕಾಶ್ ಬಾಬು ಅವರಿಗೆ ಧನ್ಯವಾದಗಳನ್ನು ಹೇಳಿದರು.

More from Filmibeat

English summary
Kannada movie Pedro trailer released. Movie won many international movie awards. Movie directed by Natesh Hegde produced by Rishab Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X