For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಹಾಡಿ ಹೊಗಳಿದ ಅಂತರಾಷ್ಟ್ರೀಯ ಕ್ರಿಕೆಟಿಗ

  By Pavithra
  |

  ಕನ್ನಡ ಸಿನಿಮಾರಂಗದ ಅಜಾತಶತ್ರು, ಸ್ನೇಹಜೀವಿ ಅಂದರೆ ಡಾ ಶಿವರಾಜ್ ಕುಮಾರ್. ಇದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತೆ. ಶಿವಣ್ಣನ ಮೆಚ್ಚಿಕೊಳ್ಳದವರೇ ಇಲ್ಲ. ಪ್ರತಿಯೊಬ್ಬರ ಜೊತೆಯಲ್ಲೂ ಸಂತೋಷದಿಂದಿರುವ ಶಿವರಾಜ್ ಕುಮಾರ್ ಅವರನ್ನು ಅಂತರಾಷ್ಟೀಯ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ ಹೊಗಳಿದ್ದಾರೆ.

  ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಸಿಸಿ ಸೀಸನ್ 2 ನಲ್ಲಿ ಆಡಂ ಗಿಲ್ ಕ್ರಿಸ್ಟ್ ಶಿವರಾಜ್ ಕುಮಾರ್ ತಂಡದಲ್ಲಿ ಆಡುತ್ತಿದ್ದಾರೆ. ಶಿವಣ್ಣನ ಹತ್ತಿರದಿಂದ ನೋಡಿದ ಗಿಲ್ ಕ್ರಿಸ್ಟ್ ಅವರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.

  ಫೈನಲ್ ಹಂತ ತಲುಪಿದ ಮೊದಲ ತಂಡವಾದ ಗಣೇಶ್ ಟೀಂಫೈನಲ್ ಹಂತ ತಲುಪಿದ ಮೊದಲ ತಂಡವಾದ ಗಣೇಶ್ ಟೀಂ

  ಶಿವರಾಜ್ ಕುಮಾರ್ ಒಬ್ಬ ಒಳ್ಳೆ ಕ್ರಿಕೆಟಿಗ ಹಾಗೂ ಒಳ್ಳೆ ನೃತ್ಯಗಾರ ಎಂದಿದ್ದಾರೆ. ಒಬ್ಬ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಶಿವರಾಜಕುಮಾರ್ ಅವರ ನೃತ್ಯದ ಬಗ್ಗೆ , ನಾಯಕತ್ವದ ಬಗ್ಗೆ ಅವರ ಎನರ್ಜಿ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

  international cricketer Adam Gilchrist praised actor Shivraj Kumar

  ವಿಜಯನಗರ ಪೇಟ್ರಿಯಾಟ್ಸ್ ತಂಡದಲ್ಲಿ ಶಿವಣ್ಣ ಹಾಗೂ ಆಡಂ ಗಿಲ್ ಕ್ರಿಸ್ಟ್ ಆಡಿದ್ದು ನಿನ್ನೆ ಒಂದು ಮ್ಯಾಚ್ ನಲ್ಲಿ ಜಯ ಸಾಧಿಸಿದ್ದರು. ಇಂದು ಕೆಸಿಸಿ 2 ನ ಫೈನಲ್ ನಡೆಯಲಿದ್ದು ಯಾರು ಗೆಲುವು ಸಾಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  English summary
  international cricketer Adam Gilchrist praised actor Shivraj Kumar. Adam Gilchrist says Shivraj Kumar is a good cricketer and a good dancer

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X