ಅಂತರಾಷ್ಟ್ರೀಯ ಕ್ರಿಕೆಟರ್ಸ್ ಜೊತೆ ಕರ್ನಾಟಕ ಚಲನಚಿತ್ರ ಕಪ್
Recommended Video

ಕೆಲವು ತಿಂಗಳುಗಳ ಹಿಂದೆಯಷ್ಟೇ ಯಶಸ್ವಿಯಾಗಿ 'ಕರ್ನಾಟಕ ಚಲನಚಿತ್ರ ಕಪ್' ಮೊದಲ ಸರಣಿ ಮುಗಿಸಿದ ಸ್ಯಾಂಡಲ್ ವುಡ್ ಕಲಾವಿದರು ಇದೀಗ ಸೀಸನ್ 2 ಗೆ ತಯಾರಾಗಿದ್ದಾರೆ. ಈ ಭಾರಿ ಚಂದನವನದ ತಾರೆಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರಿಕೆಟರ್ ಗಳ ಜೊತೆಯಲ್ಲಿ ಮೈದಾನಕ್ಕಿಳಿದು ಆಟ ಆಡಲಿದ್ದಾರೆ.
ಇಂದು (ಜುಲೈ21) ರಂದು ಸುದ್ದಿಗೋಷ್ಟಿ ನಡೆಸುವ ಮೂಲಕ ಆಟಗಾರರ ಪಟ್ಟಿಯನ್ನು ಕಿಚ್ಚ ಸುದೀಪ್ ಪ್ರಕಟ ಮಾಡಲಿದ್ದಾರೆ. ಈ ಸಲದ ವಿಶೇಷ ಎಂದರೆ ಕರ್ನಾಟಕ ಚಲನಚಿತ್ರ ಕಪ್ ಪಂದ್ಯದಲ್ಲಿ ಆರು ಅಂತರಾಷ್ಟ್ರೀಯ ಕ್ರಿಕೆಟರ್ ಆಟಗಾರರು ಸೇರ್ಪಡೆ ಆಗಲಿದ್ದಾರೆ.
ಒಬ್ಬೊಬ್ಬರು ಒಂದೊಂದು ತಂಡವನ್ನು ಪ್ರತಿನಿಧಿಸಲಿದ್ದು ಮೂಲಗಳ ಪ್ರಕಾರ ವೀರೇಂದ್ರ ಸೆಹ್ವಾಗ್, ಶ್ರೀಲಂಕಾದ ದಿಲ್ಷನ್, ಆಸ್ಟ್ರೇಲಿಯಾದ ಗಿಲ್ಕ್ರಿಸ್ಟ್, ಸೌತ್ ಆಫ್ರಿಕಾದ ಹರ್ಷೆಲ್ ಗಿಬ್ಸ್ ಹಾಗೂ ಓವೈಸ್ ಶಾ ಕಲಾವಿದರ ಜೊತೆ ಕ್ರಿಕೆಟ್ ಆಡಲಿದ್ದಾರಂತೆ.

ಯಶ್, ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್ ಹಾಗೂ ಉಪೇಂದ್ರ ತಂಡಗಳು ಮೈದಾನದಲ್ಲಿ ಸೆಣಸಾಟ ನಡೆಸಲಿದ್ದು, ಈ ಬಾರಿಯ ಕ್ರಿಕೆಟ್ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.


Click it and Unblock the Notifications











