twitter
    For Quick Alerts
    ALLOW NOTIFICATIONS  
    For Daily Alerts

    ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ ಅಂತರಾಷ್ಟ್ರೀಯ ಚಿತ್ರೋತ್ಸವ

    By Naveen
    |

    ಸದ್ಯ 'ಬಿಗ್ ಬಾಸ್' ವೇದಿಕೆ ಆಗಿರುವ ಬಿಡದಿಯ ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳ ನಡೆಯಲಿರುವ ಈ ಫಿಲ್ಮ್ ಫೆಸ್ಟಿವಲ್ ಚಿತ್ರರಸಿಕರಿಗೆ ಸಿನಿಔತಣ ನೀಡಲಿದೆ.

    ಎಪ್ರಿಲ್ ತಿಂಗಳ 14 15 ಮತ್ತು 16 ರಂದು ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ನಡೆಯಲಿದ್ದು ಇದರ ಹಿನ್ನೆಲೆಯಲ್ಲಿ ನಿನ್ನೆ (ಭಾನುವಾರ) ರಾತ್ರಿ ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರಸಂತೆಯ ಟೀಸರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇನೋವೆಟಿವ್ ಫಿಲ್ಮ್ ಸಿಟಿಯ ಎಂ.ಡಿ ಸರವಣ ಪ್ರಸಾದ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟಿ ಹಾಗೂ ಚಿತ್ರೋತ್ಸವದ ಅಂಬಾಸೆಡರ್ ಮಾಲಾಶ್ರೀ, ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಡಾ.ರಾಜೇಂದ್ರಸಿಂಗ್ ಬಾಬು ಪಾಲ್ಗೊಂಡಿದ್ದರು.

    ಇದೇ ವೇಳೆ ಮಾತನಾಡಿದ ಇನೋವೆಟಿವ್ ಫಿಲ್ಮ್ ಸಿಟಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸರವಣ ಪ್ರಸಾದ್, ''ಚಿತ್ರೋತ್ಸವದಲ್ಲಿ 9 ರಾಷ್ಟ್ರಗಳ 90 ಚಿತ್ರಗಳ ಜೊತೆಗೆ ಪ್ರತ್ಯೇಕವಾಗಿ ಮಕ್ಕಳ ಚಿತ್ರಗಳು ಸೇರಿದಂತೆ ಒಟ್ಟಾರೆ 160 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕೆನಡಾ, ಭಾರತ, ಶ್ರೀಲಂಕಾ, ಅರ್ಜೆಂಟೈನಾ, ನ್ಯೂಜಿಲೆಂಡ್, ಫ್ರಾನ್ಸ್, ಜರ್ಮನಿ, ಹಾಲಿವುಡ್ ಭಾಷೆಯ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಎಲ್ಲಾ ವಿಭಾಗಗಳಿಂದ ಒಟ್ಟು ಸುಮಾರು 50 ಲಕ್ಷ ರೂ.ಗಳ ಬಹುಮಾನ ನೀಡಲಾಗುತ್ತದೆ'' ಎಂದು ತಿಳಿಸಿದರು.

    International Film Festival 2018 in Innovative Film City

    ಡಾ. ರಾಜೇಂದ್ರಸಿಂಗ್ ಬಾಬು ಮಾತನಾಡಿ ''ಪ್ರಪಂಚದ ಎಲ್ಲಾ ಭಾಗದ ಅಯಾ ಪ್ರದೇಶದ ಸಂಸ್ಕೃತಿ ಮತ್ತು ಅಲ್ಲಿನ ಸಮಾಜಿಕ, ಮತ್ತು ರಾಜಕೀಯದ ರೀತಿ ನೀತಿಗಳು ಚಿತ್ರಸಂತೆಯಲ್ಲಿ ಅನಾವರಣ ಮಾಡಿಸುವ ಮೂಲಕ ಕರುನಾಡಿನ ಜನಕ್ಕೆ ಅದನ್ನ ಪರಿಚಯಿಸುವ ದೃಷ್ಠಿಯಿಂದ ಈ ಚಿತ್ರೋತ್ಸವ ಆಯೋಜನೆ ಮಾಡಲಾಗುತ್ತಿದೆ. ಇಂತಹ ಚಿತ್ರೋತ್ಸವ ಭಾರತದಲ್ಲಿ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ'' ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ನಟ ಕಿಚ್ಚ ಸುದೀಪ್, ಹಿರಿಯ ನಟ ಅಂಬರೀಷ್ ಸೇರಿದಂತೆ ಹಲವರು ಗೈರು ಹಾಜರಾಗಿದ್ದರು. ಒಟ್ಟಾರೆ ಚಿತ್ರೋತ್ಸವದ ಉದ್ದೇಶ ಸರಿ ಇದ್ದರೂ ಟೀಸರ್ ಬಿಡುಗಡೆ ಬರಬೇಕಿದ್ದ ಗಣ್ಯರ ಗೈರು ಹಾಗೂ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ನಡೆಯದಿರುವುದು ಮಾತ್ರ ನೆರೆದಿದ್ದವರಲ್ಲಿ ಬೇಸರ ಮೂಡಿಸಿತ್ತು.

    English summary
    Innovative Film City's International Film Festival 2018 was inaugurated by Karnataka Chalanachitra Academy president S.V.Rajendra Singh Babu, Producer Rockline Venkatesh, and Actress Malashri. Film Festival will be held from April 14 to 16th.
    Monday, January 22, 2018, 10:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X