ಕನ್ನಡ್ ಗೊತ್ತಿಲ್ಲ ಎಂದು ಹೇಳಲಿ, ಬಲವಂತ ಮಾಡೋದು ಬೇಡ ; ಯಶ್ ವಿರುದ್ಧ ಕೆರಳಿ ಕೆಂಡವಾದ ಕನ್ನಡಿಗರು

ಚಿತ್ರರಂಗಕ್ಕೆ ಬಂದ ದಿನದಿಂದ ಸೋಲು-ಗೆಲುವು ಹೊರತಾಗಿ ಶಿಸ್ತನ್ನೂ ಮೈಗೂಡಿಸಿಕೊಂಡು ಬಂದವರು ಯಶ್. ಸಿನಿಮಾ ಬದುಕಿನಂತೆಯೇ ವ್ಯೆಯಕ್ತಿಕ ಬದುಕನ್ನೂ ಕೂಡ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಂಡ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ''ಕೆಜಿಎಫ್'' ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಕುರಿತು ಇವತ್ತು ಜಗತ್ತು ಮಾತನಾಡುತ್ತಿದೆ.

ಯಶ್ ಅವರ ಮುಂದಿನ ಚಿತ್ರ ''ಟಾಕ್ಸಿಕ್'' ಚಿತ್ರಕ್ಕೆ ಕಾತುರದಿಂದ ಕಾಯುತ್ತಿದೆ. ಹಾಲಿವುಡ್‌, ಬಾಲಿವುಡ್‌ನವರೆಲ್ಲ ಸ್ಯಾಂಡಲ್‌ವುಡ್‌ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಇನ್ನು ಯಶ್ ಇವತ್ತು ಕೇವಲ ನ್ಯಾಷನಲ್ ಸ್ಟಾರ್ ಮಾತ್ರ ಅಲ್ಲ. ಪ್ಯಾನ್ ಇಂಡಿಯಾ ಚಿತ್ರಗಳ ನಿರ್ಮಾಪಕ ಕೂಡ ಹೌದು.

Internet Divided Yash s Don t Force Kannada Remark Triggers Firestorm Kannadigas Lash Out

''ಟಾಕ್ಸಿಕ್'' ಚಿತ್ರದ ಜೊತೆ ಜೊತೆಯಲ್ಲಿ ''ರಾಮಾಯಣ'' ಚಿತ್ರವನ್ನು ಕೂಡ ಯಶ್ ಅದ್ಧೂರಿಯಾಗಿ ತೆರೆಗೆ ತರುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಅಬ್ಬರಿಸಲು ಸರ್ವ ಸನ್ನದ್ಧರಾಗಿದ್ದಾರೆ. ಈ ಎಲ್ಲಾ ವಿಚಾರಗಳು ಹೆಮ್ಮೆ ಪಡುವಂತಹದ್ದೇ.

ಆದರೆ, ಕನ್ನಡಾಭಿಮಾನದ ಪ್ರಶ್ನೆ ಬಂದಾಗ ಹಲವರಿಗೆ ಯಶ್ ಅವರ ಕನ್ನಡ ಅಭಿಮಾನದ ಕುರಿತು ಪ್ರಶ್ನೆಗಳಿವೆ. ಪ್ಯಾನ್ ಇಂಡಿಯಾ ಸ್ಟಾರ್‌ ಆದ ನಂತರ ಯಶ್ ಬದಲಾದರು ಎಂಬ ಅಭಿಪ್ರಾಯಗಳು ಸಾರ್ವತ್ರಿಕ ವಲಯದಲ್ಲಿವೆ.

ನಿಜಾ.. ಯಶ್ ತಾನು ಬದಲಾಗಿಲ್ಲ ಎನ್ನುವ ಮಾತುಗಳನ್ನಾಡುತ್ತಲೇ ಬಂದಿದ್ದಾರೆ. ಸಮಯ- ಸಂದರ್ಭ ಬಂದಾಗ ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಕೂಡ ಮಾಡಿದ್ದಾರೆ.ಈ ಮಣ್ಣಿನ ಪ್ರತಿ ಕಣವೂ ಬಂಗಾರ... ಕನ್ನಡಾಂಬೆ ನೀನೆ ಭಾರತ ಮಾತೆಯ ಸಿಂಧೂರ ಎಂದೆಲ್ಲಾ ಈ ಮಣ್ಣಿನ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ತೀರಾ ಇತ್ತೀಚೆಗೆ ನವೆಂಬರ್ 1ರಂದು ರಾಜ್ಯೋತ್ಸವದ ಪ್ರಯುಕ್ತ ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ ಎಂದವರು ಯಶ್.

ಆದರೂ ಕೂಡ ಹಲವರಲ್ಲಿನ ಅನುಮಾನ ಇನ್ನೂ ದೂರವಾಗಿಲ್ಲ. ಯಶ್ ಕನ್ನಡಾಭಿಮಾನದ ಕುರಿತು ಪ್ರಶ್ನೆ ಮಾಡುವರ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಯಶ್ ಅವರ ಕನ್ನಡಾಭಿಮಾನದ ಕುರಿತು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

Internet Divided Yash s Don t Force Kannada Remark Triggers Firestorm Kannadigas Lash Out

ಹೌದು, ಅಸಲಿಗೆ ಯಶ್ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಮಯದಲ್ಲಿ ಕನ್ನಡ ಬರದವರಿಗೆ ಕೂಡ ಇಲ್ಲಿ ಸ್ಪರ್ಧೆ ಇಟ್ಟು ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಬಹಳ ಜನಕ್ಕೆ ಕನ್ನಡ ಗೊತ್ತಿಲ್ಲ ಅನ್ಸತ್ತೆ. ನನಗೆ ಅನ್ನಿಸುವುದು ಏನು ಅಂದ್ರೆ ಎಲ್ಲಿಗೆ ಹೋದ್ರು, ಅಲ್ಲಿನ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟರೆ ಅದರ ಹತ್ತು ಪಟ್ಟು ತಿರುಗಿ ಬರುತ್ತದೆ. ಅದೇ ಕರ್ನಾಟಕ, ಕನ್ನಡ ನನಗೆ ಕಲಿಸಿದೆ. ನೀವೆಲ್ಲಾ ಕನ್ನಡ ಕಲಿಯಲು ಯತ್ನಿಸಿದ್ದು ಖುಷಿಯಿದೆ ಎಂದು ಹೇಳಿದ್ದರು.

ಮುಂದುವರೆದು ಕರ್ನಾಟಕಕ್ಕೆ ಬೇರೆ ಕಡೆಗಳಿಂದ ಬಂದವರು ಇಲ್ಲಿನ ಜನರ ಬಗ್ಗೆ ಒಳ್ಳೆ ಮಾತುಗಳನ್ನಾಡುತ್ತಾರೆ. ಅದು ನಮ್ಮ ಸಂಸ್ಕೃತಿ. ನಾವೆಲ್ಲರೂ ಬೇರೆಯವರಿಗೆ ಕನ್ನಡ ಕಲಿಸೋಣ. ಎಲ್ಲರಲ್ಲಿ ಒಂದು ಮನವಿ ಬಲವಂತವಾಗಿ ಯಾರಿಗೆ ಏನೂ ಕಲಿಸೋಕೆ ಆಗಲ್ಲ. ಬೇರೆಯವರು ಕನ್ನಡ ಕಲಿಯಬೇಕು ಎಂದು ಗಲಾಟೆ ಮಾಡುವ ಬದಲು ಕನ್ನಡ ಗೊತ್ತಿಲ್ಲದಿದ್ದರೆ ಇಲ್ಲಿ ಕಷ್ಟ ಎನ್ನುವ ಭಾವನೆ ಬರುವಂತೆ ಮಾಡಬೇಕು. ನನ್ನ ಪ್ರಕಾರ ಯಾವುದೇ ಭಾಷೆ ಹೊಟ್ಟೆ ತುಂಬಿಸುತ್ತದೆ. ಎಲ್ಲಾ ಕಡೆ ಕನ್ನಡಕ್ಕೆ ಪ್ರಾಮುಖ್ಯತೆ ಬರುವಂತೆ ಮಾಡಬೇಕು ಅಂದ್ರೆ ನಾವು ಕನ್ನಡಿಗರಾಗಿ ಅಭಿವೃದ್ಧಿಯಾಗುವಂತೆ ಮಾಡಬೇಕು ಎಂದು ಹೇಳಿದ್ದರು.

ಯಶ್ ಅವರ ಈ ಅಭಿಪ್ರಾಯ ಸದ್ಯ ಪರ ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಸಾಮಾಜಿಕ ಜಾಲತಾಣ ಈ ವಿಚಾರದಲ್ಲಿ ಇಬ್ಬಾಗವಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆದ ನಂತರ ಯಶ್ ಬದಲಾಗಿದ್ದಾರೆ, ಹಿಂದಿಯವರನ್ನು ಮೆಚ್ಚಿಸಲು ಮೃದು ಧೋರಣೆ ತೋರುತ್ತಿದ್ದಾರೆ, ಎಂದು ಕೆಲವರು ಹೇಳಿದರೆ ಕನ್ನಡವನ್ನು ಬಲವಂತವಾಗಿ ಕಲಿಸೋದು ಬೇಡ ಎಂದು ಹೇಳಿದ್ದು ಸರಿ ಆದರೆ ಕರ್ನಾಟಕದಲ್ಲಿ ಎಲ್ಲೆಡೆ ಬಲವಂತವಾಗಿ ಹಿಂದಿ ಹೇರಿಕೆ ನಡೆಯುತ್ತಿದೆ. ಈ ಬಗ್ಗೆ ಯಾಕೆ ಯಶ್ ಮಾತನಾಡಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಲವಂತವಾಗಿ ನಮಗೆಲ್ಲಾ ಹಿಂದಿ ಕಲಿಸಿಲ್ಲವೇ..? ಸಾವಿರಾರು ವಲಸಿಗರು ಬರುತ್ತಿದ್ದಾರೆ ಇದಕ್ಕೆ ಯಾರು ಹೊಣೆ..? ಎನ್ನುತ್ತಿದ್ದಾರೆ. ನಿಮ್ಮ ಮುಂದಿನ ಎರಡು ಚಿತ್ರಗಳಿಗೋಸ್ಕರ ಕನ್ನಡಕ್ಕೆ ದ್ರೋಹ ಬಗೆಯಬೇಡಿ ಎಂದು ಕೂಡ ಕಾಮೆಂಟ್‌ಗಳನ್ನು ಮಾಡುತ್ತಿದ್ಧಾರೆ.

ಮತ್ತೊಂದು ಕಡೆ ಯಶ್ ಅವರ ಪರ ಹಲವರು ವಕಾಲತ್ತು ವಹಿಸಿಕೊಂಡು ಚರ್ಚೆ ಮಾಡುತ್ತಿದ್ದಾರೆ. ಯಶ್ ಈ ಹಿಂದೆ ಕನ್ನಡ ಚಿತ್ರರಂಗ, ಕನ್ನಡ ಭಾಷೆಯ ಕುರಿತು ಅಭಿಮಾನದಿಂದ ಆಡಿದ್ದ ವಿಡಿಯೋಗಳನ್ನೆಲ್ಲಾ ಹೆಕ್ಕಿ ತೆಗೆದು ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ಭಾಷೆ ಅಂತ ಕಿತ್ತಾಡಿದಿರು ಮನುಜ ನಡಿ ನೀ ಮುಂದೆ. ಶಿವನ ಚರಣದ ಆಶ್ರಯ ಪಡೆಯುವ ತನಕ ಎಂದು ತಮ್ಮ ಅಭಿಪ್ರಾಯವನ್ನು ವ್ತಕ್ತಪಡಿಸುತ್ತಿದ್ದಾರೆ.

More from Filmibeat

English summary
Yash's comments on the Kannada language have sparked massive controversy and divided the internet. Explore why Kannadigas are upset with the star's statement.
Read more about: yash filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X