For Quick Alerts
  ALLOW NOTIFICATIONS  
  For Daily Alerts

  ಕಾಂತಾರ ಸಂದರ್ಶನದ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಹಿಂದಿ ನಿರೂಪಕ ಯಾರು? ಗರ್ಲ್‌ಫ್ರೆಂಡ್‌ಗಿಂತ ಹೆಚ್ಚಂತೆ!

  |

  ವಿಶ್ವದಾದ್ಯಂತ ಕಾಂತಾರ ಅಬ್ಬರಿಸುತ್ತಿರುವ ರೀತಿ ಕಂಡು ಇತರೆ ಚಿತ್ರರಂಗದ ಹಲವಾರು ದಿಗ್ಗಜ ಕಲಾವಿದರೇ ದಂಗಾಗಿ ಹೋಗಿದ್ದಾರೆ. ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಕಾಂತಾರ ಚಿತ್ರವನ್ನು ವೀಕ್ಷಿಸಿದ ಪರಭಾಷಾ ಸಿನಿಪ್ರೇಕ್ಷಕರು ನಮ್ಮ ಭಾಷೆಗಳಿಗೂ ಸಹ ಇಂಥ ಒಳ್ಳೆ ಚಿತ್ರವನ್ನು ಡಬ್ ಮಾಡಿ ಎಂದು ಪಟ್ಟು ಹಿಡಿದಿದ್ದರು. ಅದರಂತೆ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆ ತಮ್ಮ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಲು ಸಜ್ಜಾಗಿದೆ.

  ಹೀಗಾಗಿ ಕಾಂತಾರ ಚಿತ್ರತಂಡ ಇತರೆ ರಾಜ್ಯಗಳಿಗೆ ತೆರಳಿ ಸಂದರ್ಶನ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುವುದರ ಮೂಲಕ ಚಿತ್ರದ ಪ್ರಚಾರ ಕಾರ್ಯವನ್ನು ಮಾಡುತ್ತಿದೆ. ಹೀಗೆ ಕಾಂತಾರ ಚಿತ್ರತಂಡ ಇತರೆ ರಾಜ್ಯಗಳಲ್ಲಿ ಭಾಗವಹಿಸಿದ ಪ್ರತಿ ಸಂದರ್ಶನ ಹಾಗೂ ಪತ್ರಿಕಾಗೋಷ್ಠಿಯಲ್ಲಿಯೂ ಸಹ ದೊಡ್ಡ ಮಟ್ಟದ ಪ್ರಶಂಸೆಯನ್ನೂ ಪಡೆದುಕೊಳ್ಳುತ್ತಿದೆ.

  ಐಎಂಡಿಬಿ ರೇಟಿಂಗ್: ಭಾರತದಲ್ಲೇ ಕಾಂತಾರ ನಂಬರ್ 1; ಬಿಗ್ ಬಜೆಟ್ ಚಿತ್ರಗಳೇ ಕಾಂತಾರ ಮುಂದೆ ಸೋತವಲ್ಲ!ಐಎಂಡಿಬಿ ರೇಟಿಂಗ್: ಭಾರತದಲ್ಲೇ ಕಾಂತಾರ ನಂಬರ್ 1; ಬಿಗ್ ಬಜೆಟ್ ಚಿತ್ರಗಳೇ ಕಾಂತಾರ ಮುಂದೆ ಸೋತವಲ್ಲ!

  ಇತ್ತೀಚಿಗಷ್ಟೆ ತೆಲುಗು ಪತ್ರಿಕಾಗೋಷ್ಠಿ ವೇಳೆ ತೆಲುಗಿನ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಕಾಂತಾರ ಚಿತ್ರವನ್ನು ಹಾಡಿಹೊಗಳಿದ್ದರು ಹಾಗೂ ವಿಶೇಷವಾಗಿ ರಿಷಬ್ ಶೆಟ್ಟಿ ನಟನಿಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಇದೇ ರೀತಿಯ ಪ್ರಶಂಸೆ ಕಾಂತಾರ ಚಿತ್ರತಂಡಕ್ಕೆ ಹಿಂದಿ ಸಂದರ್ಶನಗಳಲ್ಲಿಯೂ ದೊರಕಿದೆ. ಅದರಲ್ಲಿಯೂ ಹಿಂದಿ ಸಂದರ್ಶನದ ವೇಳೆ ನಿರೂಪಕನೋರ್ವ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿರುವ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

   ಸಂದರ್ಶನದ ವೇಳೆ ರಿಷಬ್ ಕಾಲಿಗೆ ಬಿದ್ದ ನಿರೂಪಕ; ಗರ್ಲ್‌ಫ್ರೆಂಡ್‌ಗಿಂತ ಹೆಚ್ಚಂತೆ!

  ಸಂದರ್ಶನದ ವೇಳೆ ರಿಷಬ್ ಕಾಲಿಗೆ ಬಿದ್ದ ನಿರೂಪಕ; ಗರ್ಲ್‌ಫ್ರೆಂಡ್‌ಗಿಂತ ಹೆಚ್ಚಂತೆ!

  'ಸೂರಜ್ ಕುಮಾರ್' ಎಂಬ ಯೂಟ್ಯೂಬ್ ಚಾನೆಲ್ ನಿರ್ವಹಿಸುತ್ತಿರುವ ನಿರೂಪಕ ಹಾಗೂ ವಿಮರ್ಶಕ ಸೂರಜ್ ಕುಮಾರ್ ಎಂಬಾತ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಹಾಗೂ ನಟಿ ಸಪ್ತಮಿ ಗೌಡ ಅವರ ಸಂದರ್ಶನವನ್ನು ಆರಂಭ ಮಾಡುವುದಕ್ಕೂ ಮುನ್ನ ರಿಷಬ್ ಶೆಟ್ಟಿ ಅವರನ್ನು ಎದ್ದೇಳಿ ಎಂದು ಅಪ್ಪುಗೆ ನೀಡಿ ನಾನು ಅನೇಕ ಚಿತ್ರಗಳನ್ನು ನೋಡಿದ್ದೇನೆ ಆದರೆ ಈ ಚಿತ್ರದಲ್ಲಿ ನಿಮ್ಮ ನಟನೆ ಮಾತ್ರ ಅತ್ಯದ್ಭುತ ಎಂದು ಸಂದರ್ಶನದ ವೇಳೆ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿದ್ದಾರೆ ಹಾಗೂ ನಾನು ನಿಮ್ಮನ್ನು ನನ್ನ ಪ್ರೇಯಸಿಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸೂರಜ್ ಕುಮಾರ್ ರಿಷಬ್ ಶೆಟ್ಟಿ ಕಾಲಿಗೆ ಬಿದ್ದಿರುವ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

   ಸೂರಜ್ ಕುಮಾರ್ ಯಾರು?

  ಸೂರಜ್ ಕುಮಾರ್ ಯಾರು?

  ಸೂರಜ್ ಕುಮಾರ್ ಎಂಬಾತ 24 ವರ್ಷ ವಯಸ್ಸಿನ ಯುಟ್ಯೂಬರ್, ವಿಮರ್ಶಕ ಹಾಗೂ ಹಾಸ್ಯನಟ. ಮೂಲತಃ ಮಹಾರಾಷ್ಟ್ರದ ಮುಂಬೈನ ನಿವಾಸಿಯಾಗಿರುವ ಸೂರಜ್ ಕುಮಾರ್ ಬಾಲ್ಯದಿಂದಲೂ ಸಹ ಚಿತ್ರ ವೀಕ್ಷಿಸುವ ಹವ್ಯಾಸವನ್ನು ಹೊಂದಿದ್ದಾರೆ. ಹೀಗೆ ಬಾಲ್ಯದಿಂದಲೂ ಸಿನಿಮಾ ಕಡೆ ಒಲವನ್ನು ಹೊಂದಿದ್ದ ಸೂರಜ್ ಕುಮಾರ್ ಯೂಟ್ಯೂಬ್ ಚಾನೆಲ್ ಆರಂಭಿಸಿ ಮೊದಲಿಗೆ 2018ರ ಮಾರ್ಚ್ 30ರಂದು 'ಭಾಗಿ 2' ಚಿತ್ರದ ವಿಮರ್ಶೆಯನ್ನು ಮಾಡಿದ್ದರು. ಈ ವಿಮರ್ಶೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಹಾಗೂ ಇದರಿಂದ ಪ್ರೇರೇಪಿತಗೊಂಡ ಸೂರಜ್ ಕುಮಾರ್ ಮತ್ತಷ್ಟು ವಿಡಿಯೊಗಳನ್ನು ಮಾಡಿದರು. ಇನ್ನು ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಹಲವಾರು ಒಳ್ಳೆಯ ಚಿತ್ರಗಳ ವಿಮರ್ಶೆ ಮಾಡಿ ಪ್ರಶಂಸಿಸಿರುವ ಸೂರಜ್ ಕುಮಾರ್ ಕೆಟ್ಟ ಚಿತ್ರಗಳನ್ನು ವ್ಯಂಗ್ಯಾತ್ಮಕವಾಗಿ ಟ್ರೋಲ್ ಕೂಡಾ ಮಾಡಿದ್ದಾರೆ. ಸದ್ಯ 6 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ಸ್ ಅನ್ನು ಸೂರಜ್ ಕುಮಾರ್ ಹೊಂದಿದ್ದಾರೆ.

   2500ಕ್ಕೂ ಹೆಚ್ಚು ಪರದೆಗಳಲ್ಲಿ ಕಾಂತಾರ ಹಿಂದಿ ರಿಲೀಸ್!

  2500ಕ್ಕೂ ಹೆಚ್ಚು ಪರದೆಗಳಲ್ಲಿ ಕಾಂತಾರ ಹಿಂದಿ ರಿಲೀಸ್!

  ಇನ್ನು ಬಾಲಿವುಡ್ ಪ್ರವೇಶಿಸಿರುವ ಕಾಂತಾರ ಚಿತ್ರ ಇಂದು ( ಅಕ್ಟೋಬರ್ 14 ) ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ಉತ್ತರ ಭಾರತದಾದ್ಯಂತ ಸುಮಾರು 2500ಕ್ಕೂ ಹೆಚ್ಚು ಪರದೆಗಳಲ್ಲಿ ಕಾಂತಾರ ಪ್ರದರ್ಶನಗೊಳ್ಳಲಿದೆ. ಕಾಂತಾರ ಚಿತ್ರ ಹಿಂದಿಗೆ ಡಬ್ ಆಗುವ ಮುನ್ನ ಚಿತ್ರವನ್ನು ಕನ್ನಡ ಭಾಷೆಯಲ್ಲಿಯೇ ನೋಡಿ ಬೆನ್ನು ತಟ್ಟಿದ್ದ ಉತ್ತರ ಭಾರತದ ಸಿನಿ ಪ್ರೇಕ್ಷಕರು ಇದೀಗ ತಮ್ಮದೇ ಭಾಷೆಯಲ್ಲಿ ಚಿತ್ರ ಲಭ್ಯವಿರುವ ಕಾರಣ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರವನ್ನು ನೋಡುವ ನಿರೀಕ್ಷೆ ಹೆಚ್ಚಿದೆ.

  English summary
  Interviewer touches Rishab Shetty feet & getting emotional on meeting the actor; Video Goes Viral. Read on
  Friday, October 14, 2022, 11:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X