ತಮ್ಮ ಇಬ್ಬರು ಫೇವರಿಟ್ ಕ್ರಿಕೆಟರ್ಸ್ ಯಾರೆಂದು ಬಿಚ್ಚಿಟ್ಟ ರಶ್ಮಿಕಾ ಹಾಗೂ ತಮನ್ನಾ!

ಇಂದು ( ಮಾರ್ಚ್ 31 ) ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ದೇಶದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿಕೊಂಡಿರುವ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಚಾಲನೆ ಸಿಗಲಿದೆ. ಹೌದು, ಇಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯದ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಿಕ್ ಸ್ಟಾರ್ಟ್ ಆಗಲಿದೆ.

ಇನ್ನು ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದ್ದು, ಇದಕ್ಕೂ ಮುನ್ನ ಭರ್ಜರಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಉದ್ಘಾಟನಾ ಕಾರ್ಯಕ್ರಮದ ಮೂಲಕ ಕೊನೆಯದಾಗಿ ಆರಂಭಿಸಿದ್ದು 2018ರಲ್ಲಿ. ಆ ಬಳಿಕ ಪುಲ್ವಾಮಾ ಅಟ್ಯಾಕ್ ಹಾಗೂ ಕೊರೊನಾ ವೈರಸ್ ಹಬ್ಬಿದ ಕಾರಣದಿಂದಾಗಿ ನಾಲ್ಕು ವರ್ಷಗಳ ಕಾಲ ವರ್ಣರಂಜಿತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆರಂಭಿಸರಲಿಲ್ಲ.

IPL 2023: Rashmika Mandanna and Tamannaah Bhatia revealed their favourite cricketers

ಆದರೆ ಈ ಬಾರಿ ವರ್ಣರಂಜಿತ ಕಾರ್ಯಕ್ರಮವನ್ನು ಭರ್ಜರಿಯಾಗಿ ಆಯೋಜಿಸುವ ಮೂಲಕ ಹದಿನಾರನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಶುರು ಮಾಡಲು ತೀರ್ಮಾನಿಸಿದೆ ಬಿಸಿಸಿಐ. ಇನ್ನು ಈ ಬಾರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರನ್ನು ಆಹ್ವಾನಿಸಲಾಗಿದ್ದು, ಕ್ರೀಡಾಂಗಣದ ಮಧ್ಯದಲ್ಲಿ ಹಾಕಲಿರುವ ಬೃಹತ್ ವೇದಿಕೆ ಮೇಲೆ ಹಾಡುವ ಮೂಲಕ ಹಾಗೂ ನೃತ್ಯ ಮಾಡುವ ಮೂಲಕ ಮನರಂಜನೆ ನೀಡಲಿದ್ದಾರೆ.

ಅಂದಹಾಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟಿ ತಮನ್ನಾ ಭಾಟಿಯಾ ವಿವಿಧ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಇವರ ಜತೆಗೆ ಹಾಡು ಸಂಯೋಜಕ ಹಾಗೂ ಗಾಯಕ ಅರಿಜಿತ್ ಸಿಂಗ್ ಸಹ ತನ್ನ ಹಾಡುಗಳನ್ನು ಹಾಡಿ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲಿದ್ದಾರೆ.

IPL 2023: Rashmika Mandanna and Tamannaah Bhatia revealed their favourite cricketers

ಇನ್ನು ನಿನ್ನೆ ( ಮಾರ್ಚ್ 30 ) ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ತಮನ್ನಾ ಭಾಟಿಯಾ ಕಾರ್ಯಕ್ರಮಕ್ಕಾಗಿ ನೃತ್ಯದ ಅಂತಿಮ ತಾಲೀಮನ್ನು ನಡೆಸಿದ್ದಾರೆ. ಈ ವೇಳೆ ಈ ಬೃಹತ್ ಸಂದರ್ಭದಲ್ಲಿ ನೃತ್ಯ ಮಾಡುತ್ತಿರುವುದರ ಕುರಿತು ತಮನ್ನಾ ಹಾಗೂ ರಶ್ಮಿಕಾ ಮಾತನಾಡಿದ್ದು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಹಾಗೂ ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಬ್ಬರೂ ಸಹ ತಮ್ಮ ನೆಚ್ಚಿನ ಕ್ರಿಕೆಟಿಗರು ಯಾರು ಎಂಬುದನ್ನು ತಿಳಿಸಿದ್ದಾರೆ.

ಮೊದಲಿಗೆ ಮಾತನಾಡಿದ ನಟಿ ತಮನ್ನಾ ಭಾಟಿಯಾ ಕೊವಿಡ್ ಬಳಿಕ ಇಷ್ಟು ದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವುದು ಉತ್ಸುಕತೆಯಿಂದ ಕೂಡಿದ್ದು, ಕ್ರಿಕೆಟ್ ಕಾರ್ಯಕ್ರಮಕ್ಕಾಗಿ ಈ ಪ್ರದರ್ಶನವನ್ನು ನೀಡುತ್ತಿರುವುದು ಇನ್ನೂ ಹೆಚ್ಚು ಉತ್ಸುಕತೆಯನ್ನು ಮೂಡಿಸಿದೆ ಎಂದಿದ್ದಾರೆ. ಇನ್ನು ತಾನು ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್ ಹಾಗೂ ಸಿನಿಮಾ ಎರಡರಲ್ಲಿಯೂ ಆಸಕ್ತಿ ಹೊಂದಿದ್ದು, ಎಂ ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಕ್ರಿಕೆಟರ್‌ಗಳು ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಸಹ ಕ್ರಿಕೆಟ್ ಕ್ರೇಜ್ ಹೊಂದಿದ್ದು, ಈಗಲೂ ಸಹ ತಾನು ಪಂದ್ಯಗಳ ಫಲಿತಾಂಶಗಳನ್ನು ಚೆಕ್ ಮಾಡುತ್ತಾ ಇರುತ್ತೇನೆ ಎಂದು ಹೇಳಿಕೊಂಡಿದ್ದಾರೆ ಮತ್ತು ವಿರಾಟ್ ಕೊಹ್ಲಿ ಹಾಗೂ ಎಂಸ್ ಧೋನಿ ತನ್ನ ನೆಚ್ಚಿನ ಕ್ರಿಕೆಟಿಗರು ಎಂದೂ ಸಹ ಇದೇ ವೇಳೆ ತಿಳಿಸಿದ್ದಾರೆ. ಈ ಮೂಲಕ ಈ ಇಬ್ಬರು ನಟಿಯೂ ಸಹ ವಿರಾಟ್ ಕೊಹ್ಲಿ ಹಾಗೂ ಎಂ ಎಸ್ ಧೋನಿ ತಮ್ಮ ನೆಚ್ಚಿನ ಕ್ರಿಕೆಟಿಗರು ಎಂಬುದನ್ನು ತಿಳಿಸಿದ್ದಾರೆ.

More from Filmibeat

English summary
IPL 2023: Rashmika Mandanna and Tamannaah Bhatia revealed their favourite cricketers. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X