"ಮ್ಯಾನೇಜ್‌ಮೆಂಟ್ RCBಯ ತಿ* ಇದ್ದಂತೆ.. ಎಮೋಷನ್ ಇಲ್ಲ, ತಿ* ಗಾಂಚಲಿ ಇದೆ"; ಚಿತ್ರ ನಿರ್ದೇಶಕ ಆಕ್ರೋಶ
ಇತ್ತೀಚೆಗೆ ಐಪಿಎಲ್ ಹರಾಜು ನಡೀತು. ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈವರೆಗೆ ಆರ್‌ಸಿಬಿ ತಂಡ ಐಪಿಎಲ್ ಟ್ರೋಲ್ ಗೆದ್ದಿಲ್ಲ. ಆದರೂ ಅಭಿಮಾನಿಗಳ ಪ್ರೀತಿ ಕಮ್ಮಿ ಆಗಿಲ್ಲ. ಈ ಬಾರಿ ಒಳ್ಳೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತದೆ, ಈ ಸಲ ಆದ್ರು ಕಮ್ ನಮ್ದೆ ಎಂದು ಅಭಿಮಾನಿಗಳು ಆಸೆಗಣ್ಣಿನಿಂದ ಕಾಯುತ್ತಿದ್ದರು. ಆದರೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಖರೀದಿಸಿರುವ ಆಟಗಾರರು ಅಷ್ಟೇನು ಒಳ್ಳೆ ಆಟಗಾರರಲ್ಲ, ಇನ್ನು ಉತ್ತಮ ಆಟಗಾರರನ್ನು ಖರೀದಿಸುವ ಅವಕಾಶ ಇತ್ತು. ಆದರೆ ಮ್ಯಾನೇಜ್‌ಮೆಂಟ್ ಅದನ್ನು ಕೈಚೆಲ್ಲಿದೆ ಎನ್ನುವುದು ಅಭಿಮಾನಿಗಳು ಆರೋಪ.

ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಆರ್‌ಸಿಬಿ ಫ್ಯಾನ್ಸ್ ಗರಂ ಆಗಿದ್ದಾರೆ. ಅದರಲ್ಲು ಕರ್ನಾಟಕದ ಆಟಗಾರರನ್ನು ಖರೀದಿಸಲಿಲ್ಲ. ಇದು ಬೆಂಗಳೂರು ತಂದೆ ಹೇಗಾಗುತ್ತದೆ. ಕೆ. ಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಇತ್ತು. ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ವಿರಾಟ್ ಕೊಹ್ಲಿ ಸಹ ಬೇಸರಗೊಂಡಿದ್ದಾರೆ, ಮ್ಯಾನೇಜ್‌ಮೆಂಟ್ ವಿರುದ್ಧ ಕೆಂಡಕಾರಿದ್ದಾರೆ ಎನ್ನುವ ಅಂತೆಕಂತೆ ಸುದ್ದಿ ಹರಿದಾಡುತ್ತಿದೆ.
ಕನ್ನಡ ಚಿತ್ರ ನಿರ್ದೇಶಕ ಸಿಂಪಲ್ ಸುನಿ ಕ್ರಿಕೆಟ್ ಪ್ರೇಮಿ ಕೂಡ ಹೌದು. ಅದರಲ್ಲೂ ಆರ್‌ಸಿಬಿಯ ದೊಡ್ಡ ಅಭಿಮಾನಿ. ಈ ಬಾರಿ ಹರಾಜಿನಲ್ಲಿ ಮ್ಯಾನೇಜ್‌ಮೆಂಟ್ ಕೊಂಡುಕೊಂಡಿರುವ ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಸಮಾಧಾನ ಹೊರಹಾಕಿದ್ದಾರೆ. ತಮ್ಮದೇ ಶೈಲಿಯಲ್ಲಿ ಸುದೀರ್ಘವಾಗಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾಕಷ್ಟು ಜನ ಆ ಟ್ವೀಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.
RCB ಒಂದು ದೇಹ ಇದ್ದ ಹಾಗೆ. ಮಲ್ಯ ಜೀವ ಕೊಟ್ಟರು.. ಕೊಹ್ಲಿ FACE OF THE TEAM ಆದರು .. ABD ಹೃದಯವಾದರು .. KUMBLE ..DRAVID ..robbie ..manish.. GAYLE .. ROSS .. KALLIS..CHAHAL .. SIRAJ ,FAF ,MAXI ,JACKS ಹೀಗೆ ಹತ್ತು ಹಲವು ಅಂಗಗಳಿಂದ ದೇಹ ರಚನೆಯಾಗಿ ಚಲಿಸುತ್ತಿದ್ದರೆ .. ನಮ್ಮ MANAGEMENT ಕೂಡ ಇದೇ ದೇಹದ "ತಿ*" ಆಗಿದ್ದಾರೆ ..EMOTIONS ಇಲ್ಲ ..MOTION ಇದೆ .. ಕಳಕಳಿ ಇಲ್ಲ .. ಗಾಂಚಲಿ ಇದೆ ..ತಿ* ಗಾಂಚಲಿ ಇದೆ. ಈ ಅಂಗ ಕೂಡ ಬದುಕಿರಲು (ತಂಡ ಆಡಲು )ಅತ್ಯಗತ್ಯ ... ಪ್ರತಿ ಬಿಡ್ಡಿಂಗ್‌ನಲ್ಲೂ OH SHIT ಅಂದುಕೊಳ್ಳಬೇಕು ಹಾಗೆ ನೋಡಿಕೊಳ್ಳುತ್ತಾರೆ" ಎಂದು ಸುನಿ ಟ್ವೀಟ್ ಆರಂಭಿಸಿದ್ದಾರೆ.
ಟ್ವೀಟ್ ಮುಂದುವರೆಸಿರುವ ಸಿಂಪಲ್ ಸುನಿ "ಬರಿಯ RC team ತಗೊಂಡಿದ್ದರೆ ..ಅವರಿಷ್ಟ ಎಂದು ಸುಮ್ಮನಿರಬಹುದಿತ್ತು .. ಆದರೆ RCಗೆ ಬೆಲೆ ಬಂದಿದೆ B ಬೆಂಗಳೂರಿಗರಿಂದ .. ಹಾಗಾಗಿ ಅವರು ಬೆಂಗಳೂರಿಗರನ್ನು ಅವರ feelings ಅನ್ನು ಕಡೆಗಣಿಸುವಂತಿಲ್ಲ ... ನಾಮಕಾವಸ್ಥೆಗೆ ಸುಮ್ಮನೆ ಒಬ್ಬಿಬ್ಬರನ್ನು ಬೆಂಚು ಕಾಯಿಸಲು ಕೂರಿಸಿ .. ನಮ್ಮನ್ನು ಕುರಿ ಮಾಡುವ ಸಂಸ್ಕೃತಿ ಈ ಬಾರಿಯೂ ಮುಂದುವರಿಸುತ್ತಿದ್ದಾರೆ" ಎಂದು ಬೇಸರ ಹೊರ ಹಾಕಿದ್ದಾರೆ.
ನೀವು local playersಗೆ ತೋರೋ ಮಲತಾಯಿ ಧೋರಣೆ ಮಾತ್ರ ಸಹಿಸಲಾಗುತ್ತಿಲ್ಲ .. ಆದರೂ ಇದು ನಮ್ಮ ದೇಹ ... ಹೃದಯ ,,ತಿ* ಇದ್ದರು ನಮ್ಮವರೇ ಇರುವ ದೇಹ ..ಇದು ಬೆಂಗಳೂರಿನ ದೇಹ ಯಾರೇ ಬರಲಿ .. ಎಷ್ಟೇ ಸೋಲಲಿ ನಾವು ಸದಾ ಬೆಂಬಲಿಸುವ ದೇಹ" ಎಂದು ಸುನಿ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಗೀತಸಾಹಿತಿ ಕವಿರಾಜ್ ಸಹ ಆರ್‌ಸಿನಿ ಮ್ಯಾನೇಜ್‌ಮೆಂಟ್ ಬಗ್ಗೆ ಬೇಸರ ಹೊರಹಾಕಿದ್ದರು.


Click it and Unblock the Notifications











