ಐಪಿಎಲ್ ಗ್ರಹಣ ಕಳೀತು; ಜೂನ್ ತಿಂಗಳು ಬರ್ತಿರೋ ಇಂಟ್ರೆಸ್ಟಿಂಗ್ ಚಿತ್ರಗಳ ಲಿಸ್ಟ್ ಇಲ್ಲಿದೆ

ಐಪಿಎಲ್ ಟೂರ್ನಿ ಯಾವಾಗ ಮುಗಿಯುತ್ತೋ ಎಂದು ಚಿತ್ರರಂಗ ಕಾಯ್ತಿದೆ. ಕೆಲ ದೊಡ್ಡ ದೊಡ್ಡ ಸಿನಿಮಾಗಳು ಜೂನ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಕನ್ನಡ ಸಿನಿಮಾಗಳು ಕೂಡ ಈ ಲಿಸ್ಟ್‌ನಲ್ಲಿವೆ. 2 ತಿಂಗಳಿಂದ ಎಲ್ಲೆಲ್ಲೂ ಐಪಿಎಲ್ ಫೀವರ್ ಜೋರಾಗಿದೆ. ಹಾಗಾಗಿ ಚಿತ್ರಮಂದಿಗಳಿಗೆ ಪ್ರೇಕ್ಷಕರು ಬರುವುದು ಕಮ್ಮಿ ಆಗಿದೆ.

ಪ್ರತಿವರ್ಷ ಐಪಿಎಲ್ ಕಾರಣಕ್ಕೆ ದೊಡ್ಡ ಸಿನಿಮಾಗಳ ಬಿಡುಗಡೆ ಮುಂದೂಡುವುದನ್ನು ನೋಡ್ತಾ ಬರ್ತಿದ್ದೀವಿ. ಕನ್ನಡದ 'ಕೆಡಿ', ತಮಿಳಿನ 'ಕರುಪ್ಪು' ಹಾಗೂ ಮಲಯಾಳಂ ಸಿನಿಮಾ 'ದೃಶ್ಯಂ- 3' ಈ ಎರಡು ತಿಂಗಳಲ್ಲಿ ಬಂದು ದೊಡ್ಡ ಸಿನಿಮಾಗಳು ಎನ್ನಬಹುದು. ಇನ್ನುಳಿದಂತೆ ಬಂದುಹೋದ ಸಣ್ಣಪುಟ್ಟ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಸಿಗಲೇ ಇಲ್ಲ. ಜೂನ್‌ನಲ್ಲಿ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗ್ತಿವೆ ಬನ್ನಿ ನೋಡೋಣ.

IPL Over Movie Season Begins Must-Watch Films Releasing in June 2026

1. ಪೆದ್ದಿ

ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಜೂನ್ 4ರಂದು ತೆರೆಗೆ ಬರ್ತಿದೆ. ಏಪ್ರಿಲ್ 30ಕ್ಕೆ ಬಿಡುಗಡೆ ಆಗಬೇಕಿದ್ದ ಸಿನಿಮಾವನ್ನು ಒಂದು ತಿಂಗಳು ಮುಂದೂಡಲಾಗಿತ್ತು. 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಬಿಡುಗಡೆ ಎಂದು ಹೇಳಿದ್ದರು. ಆದರೆ ಯಶ್ ಸಿನಿಮಾ ರಿಲೀಸ್ ಮುಂದಕ್ಕೆ ಹೋಯಿತು. ಹಾಗಾಗಿ ಆ ಜಾಗಕ್ಕೆ ಪೆದ್ದಿ ಬಂದಿದ್ದಾರೆ. ರಾಮ್‌ಚರಣ್ ಜೊತೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಶಿವಣ್ಣ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

2. ಮ್ಯಾಂಗೋ ಪಚ್ಚ

ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಜೂನ್ 5ರಂದು ತೆರೆಗೆ ಬರ್ತಿದೆ. ವಿವೇಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಗಮನ ಸೆಳೆದಿದೆ. ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ಸುಪ್ರಿಯಾನ್ವಿ ಬ್ಯಾನರ್ ಅಡಿಯಲ್ಲಿ ಪ್ರಿಯಾ ಸುದೀಪ್ ಸಿನಿಮಾ ನಿರ್ಮಿಸಿದ್ದಾರೆ.

IPL Over Movie Season Begins Must-Watch Films Releasing in June 2026

3. ಹೈ ಜವಾನಿ ತೋ ಇಷ್ಕ್ ಹೋನಾ ಹೈ

ಜೂನ್ 5ರಂದು ಬಾಲಿವುಡ್ ಸಿನಿಮಾ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ವರುನ್ ಧವನ್ ಜೊತೆ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಹಾಗೂ ಮೃಣಾಲ್ ಠಾಕೂರ್ ನಾಯಕಿಯರಾಗಿ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎನ್ನುವುದು ಗೊತ್ತಾಗ್ತಿದೆ.

4. ಕಾಕ್‌ಟೇಲ್- 2

ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೂನ್ ನಟನೆಯ 'ಕಾಕ್‌ಟೇಲ್- 2' ಚಿತ್ರಕ್ಕೆ ಜೂನ್ 19ರಂದು ಬಿಡುಗಡೆ ಭಾಗ್ಯ ಸಿಗಲಿದೆ. ಮದುವೆ ಬಳಿಕ ತೆರೆಗೆ ಬರ್ತಿರೋ ರಶ್ಮಿಕಾ ನಟನೆಯ ಮೊದಲ ಸಿನಿಮಾ ಇದು. ಹೊಮಿ ಆಡಜಾನಿಯಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಪಾತ್ರ ಕುತೂಹಲ ಮೂಡಿಸಿದೆ.

5. ಮಾ ಇಂಟಿ ಬಂಗಾರಂ

ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಸಮಂತಾ ನಟನೆಯ ಸಿನಿಮಾ 'ಮಾ ಇಂಟಿ ಬಂಗಾರಂ' ಜೂನ್ 19ಕ್ಕೆ ತೆರೆಗೆ ಬರಲಿದೆ. ಚಿತ್ರಕ್ಕೆ ಸಮಂತಾ ಪತಿ ರಾಜ್ ನಿಡುಮೊರು ಕಥೆ ಒದಗಿಸಿದ್ದಾರೆ. ಕನ್ನಡ ನಟ ದೂದ್‌ಪೇಡಾ ದಿಗಂತ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.

6. ಜನ ನಾಯಗನ್

ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಪದೇ ಪದೆ ಸಿನಿಮಾ ಪ್ರೇಕ್ಷಕರ ಮುಂದೆ ಬರುವುದು ತಡವಾಗುತ್ತಿದೆ. ಜೂನ್ 22ರಂದು ವಿಜಯ್ ಹುಟ್ಟುಹಬ್ಬ. ಹಾಗಾಗಿ ಅದಕ್ಕಿಂತ 4 ದಿನ ಮುನ್ನ ಸಿನಿಮಾ ಬಿಡುಗಡೆ ತಯಾರಿ ನಡೀತಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

7. ಗ್ರಾಮಾಯಣ

ದೇವರಾಜ್‌ ಕುಮಾರ್ ನಿರ್ದೇಶನದ ಕನ್ನಡದ 'ಗ್ರಾಮಾಯಣ' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಜೂನ್‌ನಲ್ಲಿ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ. ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಜೋಡಿಯಾಗಿ ಮೇಘಾಶೆಟ್ಟಿ ನಟಿಸಿದ್ದಾರೆ.

8. ಮೋಡ ಕವಿದ ವಾತಾವರಣ

ಶೀಲಂ ಎಂ.ಸ್ವಾಮಿ ನಾಯಕರಾಗಿ ನಟಿಸಿರುವ ಸಿನಿಮಾ 'ಮೋಡ ಕವಿದ ವಾತಾವರಣ'. ಸಿಂಪಲ್ ಸುನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸೈಂಟಿಫಿಕ್ ಫಿಕ್ಷನ್ ಸ್ಟೋರಿ ಸಿನಿಮಾದಲ್ಲಿದೆ. ಜೂನ್ 26ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

9. ವೆಲ್‌ಕಂ ಟು ದ ಜಂಗಲ್

ಬಾಲಿವುಡ್ 'ವೆಲ್‌ಕಂ' ಸಿನಿಮಾ ಸರಣಿಯ 3ನೇ ಭಾಗ 'ವೆಲ್‌ಕಂ ಟು ದ ಜಂಗಲ್' ಸಿನಿಮಾ ಕೂಡ ಜೂನ್ 26ರಂದು ಬಿಡುಗಡೆ ಆಗ್ತಿದೆ. 2 ವರ್ಷಗಳಿಂದ ಸಿನಿಮಾ ರಿಲೀಸ್ ಪದೇ ಪದೆ ಮುಂದೂಡಲಾಗಿತ್ತು. ಅಂತಿಮವಾಗಿ ಈ ವರ್ಷ ಪ್ರೇಕ್ಷಕರ ಮುಂದೆ ಬರ್ತಿದೆ. ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಪರೇಶ್ ರಾವಲ್, ಜಾನಿ ಲಿವರ್, ರಾಜ್ಪಾಲ್ ಯಾದವ್ ಚಿತ್ರದ ತಾರಗಣದಲ್ಲಿದ್ದು ಅಹ್ಮದ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ.

Read more about: sandalwood kollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X