ಡಾರ್ಲಿಂಗ್ ಕೃಷ್ಣ ಹೊಸ ಚಿತ್ರಕ್ಕೆ ಐಪಿಎಸ್ ರವಿ ಡಿ ಚೆನ್ನಣ್ಣನವರ್ ಸಾಥ್

ಕನ್ನಡದಲ್ಲಿ ಸದ್ಯ ಹೆಚ್ಚು ಬ್ಯುಸಿಯಿರುವ ನಟ ಯಾರೆಂದು ಹೇಳಿದರೆ ಬಹುಶಃ ಡಾರ್ಲಿಂಗ್ ಕೃಷ್ಣ ಹೆಸರು ಫಟ್ ಅಂತ ನೆನಪಾಗುತ್ತದೆ. ಒಂದರ ಹಿಂದೆ ಮತ್ತೊಂದರಂತೆ ಹೊಸ ಹೊಸ ಸಿನಿಮಾಗಳಿಗೆ ಕೃಷ್ಣ ಚಾಲನೆ ಕೊಡ್ತಿದ್ದಾರೆ.

ಇದೀಗ, ಮತ್ತೊಂದು ಹೊಸ ಚಿತ್ರಕ್ಕೆ ಅಣಿಯಾಗಿದ್ದು, ಈ ಸಿನಿಮಾಗೆ ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ, ಐಪಿಎಸ್ ರವಿ ಡಿ ಚೆನ್ನಣ್ಣನವರ್ ಸಾಥ್ ಕೊಡ್ತಿದ್ದಾರೆ. ಶಿವತೇಜಸ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಮುಂದಿನ ಸೋಮವಾರ ನಡೆಯಲಿದ್ದು, ರವಿ ಡಿ ಚೆನ್ನಣ್ಣನವರ್ ಬಿಡುಗಡೆ ಮಾಡಲಿದ್ದಾರೆ.

ರಶ್ಮಿ ಫಿಲಂಸ್ ಸಂಸ್ಥೆಯಲ್ಲಿ ಸುಮಂತ್ ಕ್ರಾಂತಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಹೆಸರು ಏನು ಎಂದು ಸೆಪ್ಟೆಂಬರ್ 27 ರಂದು ಸಂಜೆ 6.30ಕ್ಕೆ ಗೊತ್ತಾಗಲಿದೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸುತ್ತಿದ್ದು, ಶೇಖರ್ ಚಂದ್ರ ಛಾಯಾಗ್ರಹಣ, ಕೆಎಂ ಪ್ರಕಾಶ್ ಸಂಕಲನ, ರವಿ ವರ್ಮ ಸಾಹಸ, ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಇದೆ.

IPS officer Ravi D Channannavar to launch Darling krishnas New Movie Title

ಇನ್ನು ಡಾರ್ಲಿಂಗ್ ಕೃಷ್ಣ ಮತ್ತು ಜಾಕಿ ಭಾವನಾ ನಟಿಸಿರುವ 'ಶ್ರೀಕೃಷ್ಣ@ಜಿಮೇಲ್.ಕಾಮ್' ಚಿತ್ರದ ಮೊದಲ ವಿಡಿಯೋ ಸಾಂಗ್ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗುತ್ತಿದೆ. ಸಂದೇಶ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ನಾಗಶೇಖರ್ ನಿರ್ದೇಶಿಸಿದ್ದಾರೆ. ಗಮನಾರ್ಹ ವಿಚಾರ ಅಂದ್ರೆ ಶ್ರೀಕೃಷ್ಣ@ಜಿಮೇಲ್.ಕಾಮ್ ಚಿತ್ರದ ಸ್ಯಾಟ್‌ಲೈಟ್ ಹಕ್ಕು ಹಾಗೂ ಡಿಜಿಟಲ್ ಹಕ್ಕು ದುಬಾರಿ ಬೆಲೆಗೆ ಮಾರಾಟವಾಗಿದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗಿರುವ ಪ್ರಕಾರ, 2.5 ಕೋಟಿ ಸ್ಯಾಟ್‌ಲೈಟ್ ಹಕ್ಕು ಹಾಗೂ ಡಿಜಿಟಲ್ ಹಕ್ಕು ಸೇಲ್ ಆಗಿದೆ ಎನ್ನಲಾಗಿದೆ.

ಈ ನಡುವೆ ಪಿಸಿ ಶೇಖರ್ ಹಾಗೂ ಕಡ್ಡಿಪುಡಿ ಚಂದ್ರು ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಾರ್ಪೋರೇಟ್ ಹಿನ್ನೆಲೆಯಲ್ಲಿ ಕಥೆ ಮಾಡಲಾಗಿದ್ದು, ಡಾರ್ಲಿಂಗ್ ಕೃಷ್ಣ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ.

IPS officer Ravi D Channannavar to launch Darling krishnas New Movie Title

'ಲವ್ ಮಾಕ್ಟೈಲ್' ಹಿಟ್ ಆದ್ಮೇಲೆ ಡಾರ್ಲಿಂಗ್ ಕೃಷ್ಣ ಸಖತ್ ಬ್ಯುಸಿಯಾದರು. ಈಗಾಗಲೇ ಲವ್ ಮಾಕ್ಟೈಲ್ 2 ಸಿನಿಮಾ ಮಾಡಿ ಮುಗಿಸಿದ್ದಾರೆ. ಇದರ ಜೊತೆ ಜೊತೆಗೆ ಹಲವು ಹೊಸ ಪ್ರಾಜೆಕ್ಟ್‌ಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ, ವರ್ಜಿನ್, ರಚಿತಾ ರಾಮ್ ಜೊತೆ ಲವ್ ಮಿ ಔರ್ ಹೇಟ್ ಮೀ ಅಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
IPS officer Ravi D Channannavar to launch Darling krishna's New Movie Title on 27th Sep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X