ಬೆಂಗಳೂರಿನಲ್ಲಿ ಅಮೀರ್ ಖಾನ್ ಪುತ್ರಿ ನಿರ್ದೇಶನದ ನಾಟಕ ಪ್ರದರ್ಶನ
ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆಯ ನಾಟಕಗಳು ಆಗಾಗ ಪ್ರದರ್ಶನ ಆಗುತ್ತಿರುತ್ತವೆ. ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ನಿರ್ದೇಶನದ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನ ಆಗುತ್ತಿದೆ.
'ಮೆಡಿಯಾ' ಇರಾ ಖಾನ್ ನಿರ್ದೇಶನ ಮಾಡಿರುವ ನಾಟಕ. ಈ ನಾಟಕ ಮೂಲ ಗ್ರೀಕ್ ಭಾಷೆಯಲ್ಲಿ ಇದೆ. ಇಂಗ್ಲೀಷ್ ಗೆ ಭಾಷಾಂತರ ಮಾಡಿ ಈ ನಾಟಕವನ್ನು ಪ್ರದರ್ಶನ ಮಾಡಲಾಗುತ್ತದೆ. ಬೆಂಗಳೂರಿನ ಜೆ ಪಿ ನಗರದ ರಂಗಶಂಕರದಲ್ಲಿ ನಾಟಕ ಪ್ರದರ್ಶನ ಆಗುತ್ತಿದೆ. ಡಿಸೆಂಬರ್ 22ರ ಭಾನುವಾರದಂದು ಮಧ್ಯಾಹ್ನ 3.30ಕ್ಕೆ ಹಾಗೂ 7.30ಕ್ಕೆ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ವಿಶೇಷ ಅಂದರೆ, ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಪತ್ನಿ ಹ್ಯಾಜಿಲ್ ಕೀಚ್ ಈ ನಾಟಕ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೇಲಿ ವ್ಯಾಸ್, ಜಯ್ನ ಮರಿಯೇ ಖಾನ್, ರೋಹಿಣಿ ರಾಜ್, ಸಾರಾ ಚೌಹಾಣ್, ವರುಣ್ ಪಟೇಲ್ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ.

ನಟ ಅಮೀರ್ ಖಾನ್ ನಾಟಕದ ಪೋಸ್ಟರ್ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಮಗಳ ಮೊದಲ ಪ್ರಯತ್ನ ನೋಡಿ ಹೆಮ್ಮೆ ಆಗುತ್ತಿದೆ ಎಂದಿದ್ದಾರೆ. ಉಳಿದಂತೆ, ಅಮೀರ್ ಪುತ್ರ ಜುನೈದ್ ಖಾನ್ ಕೂಡ ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕುವೆಂಪು ವಿರಚಿತ 'ದಶಾನನ ಸ್ವಪ್ನಸಿದ್ಧಿ' ನಾಟಕ ಪ್ರದರ್ಶನ
ನೌಟಂಕಿ ವಾಲೆ ತಂಡ 'ಮೆಡಿಯಾ' ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ. ನಾಟಕದ ಅವಧಿ 90 ನಿಮಿಷ ಇದೆ. ಈಗಾಗಲೇ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.


Click it and Unblock the Notifications











