ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಮೈಸೂರಿನಲ್ಲಿ ಅತ್ಯಾಚಾರದ ದೂರು ದಾಖಲಿಸಿದ ಇರಾನಿ ಯುವತಿ!

By ಮೈಸೂರು ಪ್ರತಿನಿಧಿ

ರಾಖಿ ಸಾವಂತ್ ಹಾಗೂ ಮೈಸೂರಿನ ಆದಿಲ್ ದಾಂಪತ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಲೇ ಇವೆ. ತೀರಾ ಇತ್ತೀಚೆಗೆ ಆದಿಲ್ ಅನ್ನು ವಿವಾಹವಾಗಿದ್ದ ರಾಖಿ ಸಾವಂತ್, ಇದೀಗ ಪತಿಯ ವಿರುದ್ಧ ಕೆಲವು ಗುರುತರ ಆರೋಪಗಳನ್ನು ಮಾಡಿದ್ದು, ರಾಖಿಯ ದೂರಿನ ಮೇರೆಗೆ ಆದಿಲ್ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಇದರ ನಡುವೆಯೇ ಆದಿಲ್ ವಿರುದ್ಧ ಮೈಸೂರಿನಲ್ಲಿ ಇರಾನಿ ಯುವತಿಯೊಬ್ಬಾಕೆ ಅತ್ಯಾಚಾರದ ದೂರು ದಾಖಲಿಸಿದ್ದಾರೆ.

ರಾಖಿ ಸಾವಂತ್ ದೂರಿನ ಮೇರೆಗೆ ಈಗಾಗಲೇ ಆದಿಲ್ ವಂಚನೆ, ವರದಕ್ಷಿಣಿ ಕಿರುಕುಳ, ಅಕ್ರಮ ಸಂಬಂಧ ಆರೋಪದಡಿ ಜೈಲು ಸೇರಿದ್ದಾನೆ. ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಇದೀಗ ಇರಾನಿ ಯುವತಿ ತಾನು ಮೈಸೂರಿನಲ್ಲಿದ್ದಾಗ ಆದಿಲ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376ರ ಅಡಿ ಎಫ್‌ಐಆರ್ ದಾಖಲಾಗಿದೆ.

ಕೆಲವೇ ದಿನಗಳ ಹಿಂದೆ ರಾಖಿ ಸಾವಂತ್ ತಾಯಿ ನಿಧನರಾಗಿದ್ದರು. ಇದಕ್ಕೂ ಮುನ್ನ ರಾಖಿ ಮರಾಠಿ ಬಿಗ್‌ಬಾಸ್‌ಗೆ ಹೋಗಿದ್ದರು. ತಾಯಿ ಅನಾರೋಗ್ಯದ ಕಾರಣ ಶೋ ಅರ್ಧಕ್ಕೆ ನಿಲ್ಲಿಸಿ ವಾಪಾಸು ಬಂದಿದ್ದಳು. ಈ ವೇಳೆ ಆದಿಲ್ ತನ್ನ ತಾಯಿಗೆ ಸರಿಯಾದ ಚಿಕಿತ್ಸೆ ಕೊಡಿಸದ ಕಾರಣ ನಿಧನರಾದರು ಎಂದು ಆರೋಪಿಸಿದ್ದಳು. ಜೊತೆಗೆ ಆದಿಲ್‌ಗೆ ಈಗಾಗಲೇ ಒಂದು ಹುಡುಗಿ ಜೊತೆ ಸಂಬಂಧ ಇದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಳು. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಆದಿಲ್ ಖಾನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

Iranian Girl Filed Complaint Against Rakhi Sawants Husband Adil Durrani In Mysore

ಇದು ಮಾತ್ರವೇ ಅಲ್ಲದೆ, ಮರಾಠಿ ಬಿಗ್‌ಬಾಸ್‌ಗೆ ಹೋಗುವ ಮುನ್ನ ಹಣ, ಚಿನ್ನದ ಆಭರಣಗಳನ್ನು ಆದಿಲ್‌ಗೆ ನೀಡಿದ್ದೆ ಅವುಗಳನ್ನು ಆತ ಹಿಂತಿರುಗಿಸುತ್ತಿಲ್ಲ ಎಂದಿದ್ದರು. ಅಂತಿಮವಾಗಿ, ಆದಿಲ್ ತನ್ನ ನಗ್ನ ವಿಡಿಯೋ ಮಾಡಿಕೊಂಡು ಅದನ್ನು ಮಾರಾಟ ಮಾಡಿ ಹಣ ಮಾಡಿಕೊಂಡಿದ್ದಾನೆ ಎಂದು ಸಹ ಆರೋಪ ಮಾಡಿದ್ದರು ರಾಖಿ ಸಾವಂತ್.

More from Filmibeat

English summary
A Iranian girl filed complaint against Rakhi Sawant's husband Adil in Mysore. Adil Durrani is from Mysore he has some business in Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X