ಕಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾನ್ ಈಗ ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುತ್ತಿದ್ದ ಪಠಾನ್ ಈಗ ಬೆಳ್ಳಿತೆರೆ ಮೇಲೆ ಮಿಂಚಲು ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ ಪಠಾನ್ ಕಾಲಿವುಡ್ ಚಿತ್ರರಂಗದ ಮೂಲಕ ಬಣ್ಣದ ಲೋಕದಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್ ಸಿನಿಮಾದಲ್ಲಿ ಪಠಾನ್ ಬಣ್ಣಹಚ್ಚುತ್ತಿದ್ದಾರೆ. ಇತ್ತೀಚಿಗಷ್ಟೆ ವಿಕ್ರಮ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಚಿತ್ರಕ್ಕೆ ನಿರ್ದೇಶಕ ಅಜಯ್ ಜ್ಞಾನಮುತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಸದ್ಯ "ವಿಕ್ರಮ್ 58" ಎಂದು ಕರಿಯಲಾಗುತ್ತಿದೆ.

ವಿಕ್ರಮ್ ಜೊತೆ ಇರ್ಫಾನ್ ಪಠಾನ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಬಗ್ಗೆ ಸ್ವತಹ ಇರ್ಫಾನ್ ಪಠಾನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಇರ್ಫಾನ್ "ಹೊಸ ಸಾಹಸ, ಹೊಸ ಸವಾಲನ್ನು ಎದುರು ನೋಡುತ್ತಿದ್ದಾರೆ" ಎಂದು ಹೇಳಿದ್ದಾರೆ.

Irfan Pathan Playing Important Role In Tamil Film With Actor Vikram

"ವಿಕ್ರಮ್ 58" ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಭವಾನಿ ಶಂಕರ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೊಂದು ಪಕ್ಕ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು ಇರ್ಫಾನ್ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

ವಿಶೇಷ ಅಂದ್ರೆ ಮೊನ್ನೆ ಮೊನ್ನೆಯಷ್ಟೆ ಎಂ.ಎಸ್ ದೋನಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ, ಅಭಿನಯದ ಜೊತೆಗೆ ಬಣ್ಣಹಚ್ಚುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಅದೆ ಸಾಲಿನಲ್ಲೀಗ ಪಠಾನ್ ಕೂಡ ಸಾಗುತ್ತಿದ್ದಾರೆ. ಇನ್ನು ಕ್ರಿಕೆಟಿಗ ಶ್ರೀಶಾಂತ್ ಕೂಡ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಸಿನಿಮಾದಲ್ಲಿ ಮಿಂಚಿದ್ದ ಶ್ರೀಶಾಂತ್ ಈಗ ನಟಿ ಹನ್ಸಿಕಾ ಮೋಟ್ವಾನಿ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಇದೆ ಸಾಲಿಗೆ ಇರ್ಫಾನ್ ಪಠಾನ್ ಕೂಡ ಸೇರಿಕೊಂಡಿದ್ದಾರೆ.

More from Filmibeat

English summary
Cricketer Irfan Pathan playing important role in Tamil film with Actor Vikram.
Read more about: vikram ವಿಕ್ರಮ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X