'ಇರುವುದೆಲ್ಲವ ಬಿಟ್ಟು' ರಿಲೀಸ್ ಡೇಟ್ ಫಿಕ್ಸ್ : ವಿದೇಶದಲ್ಲಿಯೂ ಬಿಡುಗಡೆ ಮಾಡಲು ತಯಾರಿ
Recommended Video

ನಟ ದರ್ಶನ್ ಅವರ ಶುಭ ಹಾರೈಕೆಯಿಂದ ಬಂದ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಹಾಡುಗಳು ಕೂಡ ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇವುಗಳ ಹಿಂದೆಯೇ ಸಿನಿಮಾವನ್ನು ಜನರಿಗೆ ತೋರಿಸುವ ತಯಾರಿಯಲ್ಲಿ ಚಿತ್ರತಂಡ ತೊಡಗಿದೆ.
'ಇರುವುದೆಲ್ಲವ ಬಿಟ್ಟು' ಚಿತ್ರ ಸೆನ್ಸಾರ್ ಆಗಿದ್ದು, ಚಿತ್ರಕ್ಕೆ ಯೂ ಸರ್ಟಿಫಿಕೇಟ್ ಸಿಕ್ಕಿದೆ. ಈ ಬಗ್ಗೆ ಸಂತಸ ವ್ಯಕ್ತಿ ಪಡಿಸಿರುವ ನಿರ್ದೇಶಕ ಕಾಂತ ಕನ್ನಲ್ಲಿ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಅಂದಹಾಗೆ, ಸಿನಿಮಾ ಇದೇ ತಿಂಗಳ 21ರ ಶುಭ ಶುಕ್ರವಾರ ಚಿತ್ರಮಂದಿರಕ್ಕೆ ಬರಲಿದೆ.
ವಿಶೇಷ ಅಂದರೆ, ಕರ್ನಾಟಕದ ಜೊತೆಗೆ ವಿದೇಶದಲ್ಲಿಯೂ ಸಿನಿಮಾವನ್ನು ಏಕ ಕಾಲಕ್ಕೆ ರಿಲೀಸ್ ಮಾಡುವ ತಯಾರಿ ನಡೆಯುತ್ತಿದೆ. ಕ್ಯಾಲಿಫೊರ್ನಿಯ ಹಾಗೂ ಇತರ ಕಡೆ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆಯಂತೆ.

ಈಗಾಗಲೇ ಸಿನಿಮಾವನ್ನು ಅನೇಕ ಸ್ಟಾರ್ ಗಳು ಹಾಗೂ ನಿರ್ದೇಶಕರು ಹೊಗಳಿದ್ದಾರೆ. ನಿರ್ದೇಶಕರಾದ ಶಶಾಂಕ್, ಯೋಗರಾಜ್ ಭಟ್, ರಿಷಬ್ ಶೆಟ್ಟಿ ನಟಿಯರಾದ ರಚಿತಾ ರಾಮ್, ಅಧಿತಿ ಪ್ರಭುದೇವ, ನಟರಾದ ವಿನೋದ್ ಪ್ರಭಾಕರ್ ಮೆಚ್ಚಿಗೆ ಮಾತುಗಳನ್ನು ಹೇಳಿದ್ದಾರೆ.

ಅಂದಹಾಗೆ, 'ಇರುವುದೆಲ್ಲವ ಬಿಟ್ಟು' ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹದೇವ್ ನಟಿಸಿರುವ ಸಿನಿಮಾವಾಗಿದೆ. ದೇವರಾಜ್ ದಾವಣಗೆರೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಸುದೆ ಹರಿಸಿದ್ದಾರೆ.


Click it and Unblock the Notifications











