Just In
Don't Miss!
- News
ಮೈಸೂರು; ಖದೀಮರ ಪತ್ತೆಗೆ ಬಂದ ಬೆಲ್ಜಿಯಂ ಮಾಲಿನೋಯ್ಸ್
- Sports
ಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗ
- Finance
ಜಿಎಸ್ಟಿ ಆದಾಯ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಮಹಿಳೆಯರ ದಿನ: ಡೂಡಲ್ನಲ್ಲಿ ನೀಡಿದ ಈ ಸಂದೇಶ ಗಮನಿಸಿದ್ದೀರಾ?
- Automobiles
ಕಾರಿನೊಳಗೆ ಅಲಂಕಾರಿಕ ವಸ್ತುಗಳಿಡುವುದನ್ನು ನಿಷೇಧಿಸಿದ ಸರ್ಕಾರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಕ್ರಾಂತಿಗೆ 'ಇರುವುದೆಲ್ಲವ ಬಿಟ್ಟು..' ಚಿತ್ರತಂಡ ಕೊಟ್ಟ ಉಡುಗೊರೆ
ಕರ್ನಾಟಕದ ಸಮಸ್ತ ಜನತೆ ಇಂದು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಹಬ್ಬದ ಖುಷಿಯಲ್ಲಿ ಇರುವ ಜನರಿಗೆ ಕನ್ನಡದ ಕೆಲ ಸಿನಿಮಾಗಳು ಉಡುಗೊರೆ ನೀಡಿವೆ. ಸದ್ಯ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಚಿತ್ರದ ಫಸ್ಟ್ ಲುಕ್ ಕೂಡ ಹಬ್ಬದ ವಿಶೇಷವಾಗಿ ರಿಲೀಸ್ ಆಗಿದೆ.
ನಟಿ ಮೇಘನಾ ರಾಜ್ ತಮ್ಮ ನಿಶ್ಚಿತಾರ್ಥದ ಬಳಿಕ ಮಾಡುತ್ತಿರುವ ಹೊಸ ಸಿನಿಮಾ ಇದಾಗಿದೆ. ವಿಶೇಷ ಅಂದರೆ ವಿಶೇಷ ಅಂದರೆ ಇದೇ ಮೊದಲ ಬಾರಿಗೆ ತಿಲಕ್ ಮತ್ತು ಮೇಘನಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ತಿಲಕ್ ಪಾತ್ರ ತುಂಬ ಪ್ರಮುಖವಾಗಿದೆಯಂತೆ. ಈ ಪಾತ್ರದ ಮೂಲಕ ಚಿತ್ರಕ್ಕೆ ತಿರುವು ಸಿಗುತ್ತದೆಯಂತೆ. ಇಂದು ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ಸಿಂಪಲ್ ಮತ್ತು ಸೂಪರ್ ಆಗಿದೆ.
ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೇಘನಾ ರಾಜ್, ತಿಲಕ್ ನಟನೆ
ಈ ಹಿಂದೆ 'ಜಲ್ಸ' ಚಿತ್ರವನ್ನು ನಿರ್ದೇಶನ ಮಾಡಿದ್ದ ಕಾಂತ ಕನ್ನಲ್ಲಿ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೊದಲು ಕಮರ್ಶಿಯಲ್ ಸಿನಿಮಾ ಮಾಡಿದ್ದ ಅವರು ಈಗ ವಿಭಿನ್ನ ಕಥೆಯ ಚಿತ್ರ ಮಾಡುತ್ತಿದ್ದಾರೆ. ತಮ್ಮ ಕನಸಿನ ಚಿತ್ರಕ್ಕೆ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಎಂಬ ವಿಭಿನ್ನ ಟೈಟಲ್ ಇಟ್ಟಿದ್ದಾರೆ.
ಅಂದಹಾಗೆ, ಮೇಘನಾ ಅವರ ಕೆರಿಯರ್ ನಲ್ಲಿ ಇದು ವಿಶೇಷ ಸಿನಿಮಾವಾಗಿದ್ದು ಚಿತ್ರದಲ್ಲಿ ಅವರು ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಬಂದಗಳ ಸುತ್ತ ಈ ಚಿತ್ರ ಸುತ್ತಲಿದ್ದು, ವಾಸ್ತವಕ್ಕೆ ತುಂಬ ಹತ್ತಿರವಾಗುವ ವಿಷಯ ಚಿತ್ರದಲ್ಲಿದೆಯಂತೆ. ಇನ್ನು ದೇವರಾಜ್ ದಾವಣಗೆರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.