ಸಿಂಬು ಹಾಡಿದ ಮೊದಲ ಕನ್ನಡ ಹಾಡು ಇದೇ ತಿಂಗಳು ಬಿಡುಗಡೆ
ಕಾಲಿವುಡ್ ನಟ ಸಿಂಬು ಗಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕಾವೇರಿ ನದಿ ನೀರು ವಿಚಾರದಲ್ಲಿ ತನ್ನ ಹೇಳಿಕೆ ಮೂಲಕ ಕನ್ನಡಿಗರ ಪ್ರೀತಿಗಳಿಸಿದ್ದ ಸಿಂಬು 'ಇರುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಹಾಡಿನ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ.
ಅಂದಹಾಗೆ, ಸಿಂಬು ಹಾಡಿರುವ ಮೊದಲ ಕನ್ನಡ ಹಾಡು ಇದೇ ತಿಂಗಳು 25ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಅಂದು ನಡೆಯಲಿದೆ. ಸದ್ಯಕ್ಕೆ ಸಿಂಬು ಹಾಡಿರುವ 'ಕುಣಿರಿ ತಕಥ ಕುಣಿಸಿ ತಕಥೈ ಕುಣಿರಿ ತಕಥ ಕುಣಿಸಿ ತಕಥೈ...''ಹಾಡಿನ ಟೀಸರ್ ಸದ್ದು ಮಾಡುತ್ತಿದೆ.
ಇನ್ನು ಈ ಹಾಡಿನ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ವಿ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಕಾಂತ ಕನ್ನಲಿ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ. Bilwa Creations ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ದೇವರಾಜ್ ದಾವಣಗೆರೆ ಬಂಡವಾಳ ಹಾಕಿದ್ದಾರೆ.

'ಇರುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾ ಈಗಾಗಲೇ ಅನೇಕ ವಿಚಾರಗಳಿಗೆ ದೊಡ್ಡ ಸುದ್ದಿ ಮಾಡಿದೆ. ನಟಿ ಮೇಘನಾ ರಾಜ್ ಈ ಚಿತ್ರದ ನಾಯಕಿ ಆಗಿದ್ದಾರೆ. ಅಲ್ಲದೆ ಮೇಘನಾ ನನ್ನ ಕೆರಿಯರ್ ನಲ್ಲಿ ಬಂದಿರುವ ಬೆಸ್ಟ್ ಸಿನಿಮಾ ಇದು ಅಂತ ಹೇಳಿಕೊಂಡಿದ್ದಾರೆ.

'ರಂಗಿತರಂಗ' ಚಿತ್ರಕ್ಕೆ ಕೆಲಸ ಮಾಡಿದ್ದ ಸಿನಿಮಾಟೋಗ್ರಾಫರ್ ವಿಲಿಯಮ್ ಡೇವಿದ್ ಈ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ಊಟಿ, ಮಂಗಳೂರು ನಲ್ಲಿ 45 ದಿನ ಚಿತ್ರೀಕರಣ ಮಾಡಲಾಗಿದೆ. ಅಚ್ಚುತ್ ಕುಮಾರ್ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರ ಮಾಡಿದ್ದಾರೆ. 'ಡ್ರಾಮಾ ಜೂನಿಯರ್ಸ್' ರನ್ನರ್ ಅಪ್ ಅಭಿಶೇಕ್ ರಾಯನ್ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











