ಇದೇ ವಾರ ಬರ್ತಿದೆ 'ಇರುವುದೆಲ್ಲವ ಬಿಟ್ಟು' : ಇದು ಮೇಘನಾ ಕೆರಿಯರ್ ನ ಮಹತ್ವದ ಸಿನಿಮಾ

ಇದೇ ಶುಕ್ರವಾರ ಸ್ವಲ್ಪ ಬಿಡುವು ಮಾಡಿಕೊಳ್ಳಿ. ಯಾಕೆಂದ್ರೆ, ಈ ವಾರ ಒಂದು ಸಿನಿಮಾ ಬರುತ್ತಿದೆ. ಸಂಬಂಧಗಳ ಮೇಲೆ ನಿಂತಿರುವ ಈ ಸಿನಿಮಾ ಎಲ್ಲರೂ ನೋಡಬೇಕಾದ ಚಿತ್ರವಾಗಿದೆ.

'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾ ಇದೇ ಶುಕ್ರವಾರ ಅಂದರೆ ಸಪ್ಟೆಂಬರ್ 21ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾದ ಎಲ್ಲ ಹಾಡುಗಳು ಹಿಟ್ ಆಗಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಟ್ರೇಲರ್ ಕೂಡ ಚಿತ್ರದ ಮೇಲೆ ನಂಬಿಕೆ ಹುಟ್ಟಿಸಿದೆ.

'ಇರುವುದೆಲ್ಲವ ಬಿಟ್ಟು' ನಟಿ ಮೇಘನಾ ರಾಜ್ ಅವರ ಕೆರಿಯರ್ ನಲ್ಲಿ ಬರುತ್ತಿರುವ ವಿಭಿನ್ನ ಮತ್ತು ವಿಶೇಷ ಸಿನಿಮಾವಾಗಿದೆ. ಆ ಚಿತ್ರದ ಕೆಲ ಪ್ರಮುಖ ಅಂಶಗಳು ಮುಂದಿದೆ ಓದಿ...

ಮದುವೆಯ ನಂತರ ಮೊದಲ ಸಿನಿಮಾ

ಮದುವೆಯ ನಂತರ ಮೊದಲ ಸಿನಿಮಾ

'ಇರುವುದೆಲ್ಲವ ಬಿಟ್ಟು' ನಟಿ ಮೇಘನಾ ರಾಜ್ ತಮ್ಮ ಮದುವೆ ಬಳಿಕ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ. ಅವರೇ ಹೇಳಿಕೊಂಡಿರುವ ಹಾಗೆ, ಅವರ ಚಿತ್ರ ಜೀವನದಲ್ಲಿ ಈ ಸಿನಿಮಾದ ಪಾತ್ರ ವಿಶೇಷವಾಗಿದೆಯಂತೆ. ಮೇಘನಾ ಮನಸ್ಸಿಗೆ ತೃಪ್ತಿ ಕೊಟ್ಟ ಪಾತ್ರ ಇದಾಗಿದೆ.

ವಿ ಶ್ರೀಧರ್ ಸಂಭ್ರಮ್ ಇಸ್ ಬ್ಯಾಕ್

ವಿ ಶ್ರೀಧರ್ ಸಂಭ್ರಮ್ ಇಸ್ ಬ್ಯಾಕ್

ಹಾಡುಗಳು ಒಂದು ಸಿನಿಮಾಗೆ ಆಮಂತ್ರಣ ಪತ್ರಿಕೆ ಇದ್ದ ಹಾಗೆ. ಹಾಗೆ ನೋಡಿದರೆ, 'ಇರುವುದೆಲ್ಲವ ಬಿಟ್ಟು' ಚಿತ್ರ ನೋಡೋಕ್ಕೆ ಇರುವ ಕಾರಣಗಳಲ್ಲಿ ಹಾಡುಗಳು ಪ್ರಮುಖ ಪಾತ್ರವಹಿಸುತ್ತವೆ. ವಿ ಶ್ರೀಧರ್ ಸಂಭ್ರಮ್ ಅವರ ಸಂಗೀತದ ನಾಲ್ಕೂ ಹಾಡುಗಳು ಹಿಟ್ ಆಗಿವೆ. ಯೂಟ್ಯೂಬ್ ನಲ್ಲಿ ಹಾಡುಗಳು ದೊಡ್ಡ ಜನಪ್ರಿಯತೆ ಗಳಿಸಿವೆ.

ಮೊದಲ ಬಾರಿಗೆ ತಿಲಕ್ ಮೇಘನಾ ಕಾಂಬಿನೇಶನ್

ಮೊದಲ ಬಾರಿಗೆ ತಿಲಕ್ ಮೇಘನಾ ಕಾಂಬಿನೇಶನ್

ಸಿನಿಮಾದಲ್ಲಿ ಮೊದಲ ಬಾರಿಗೆ ಮೇಘನಾ ರಾಜ್ ಹಾಗೂ ತಿಲಕ್ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ಆನ್ ಸ್ಕ್ರೀನ್ ಜೋಡಿ ಚೆನ್ನಾಗಿ ಮೂಡಿ ಬಂದಿದೆ. ಹಾಡುಗಳಲ್ಲಿ ಸಖತ್ ಬೋಲ್ಡ್ ಆಗಿ ಇಬ್ಬರು ಕಾಣಿಸಿಕೊಂಡಿದ್ದಾರೆ. 'ಕಣ್ಣುಗಳೆ ಹೇಳಿ..' ಹಾಡು ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಗಡಿಯ ಸನಿಹ ಇದೆ.

ಕಾಂತ ಕನ್ನಲ್ಲಿ ಅವರ ಪ್ರಾಮಾಣಿಕ ಪ್ರಯತ್ನ

ಕಾಂತ ಕನ್ನಲ್ಲಿ ಅವರ ಪ್ರಾಮಾಣಿಕ ಪ್ರಯತ್ನ

ಈ ಸಿನಿಮಾದ ಸೂತ್ರಧಾರ ಕಾಂತ ಕನ್ನಲ್ಲಿ. ಈ ಹಿಂದೆ ನಿರ್ದೇಶಕ ಶಶಾಂಕ್ ಅವರ ಜೊತೆಗೆ ಕಾಂತ ಕೆಲಸ ಮಾಡಿದ್ದು, ಇದು ಅವರ ಎರಡನೇ ಸಿನಿಮಾ ಆಗಿದೆ. ಒಳ್ಳೆಯ ಕಥೆ ಜೊತೆಗೆ ಮನರಂಜನೆ ಇಟ್ಟುಕೊಂಡು ಕಾಂತ ಈ ಬಾರಿ ಬಂದಿದ್ದಾರೆ. ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಜನ ಮೆಚ್ಚುತ್ತಾರೆ ಎಂಬ ನಂಬಿಕೆಯಲ್ಲಿ ಅವರು ಇದ್ದಾರೆ. ನಿರ್ಮಾಪಕ ದೇವರಾಜ್ ದಾವಣಗೆರೆ ಚಿತ್ರ ನಿರ್ಮಾಣ ಮಾಡಿದ್ದಾರೆ.

ಶ್ರೀಮಹದೇವ್ ಮೊದಲ ಸಿನಿಮಾ

ಶ್ರೀಮಹದೇವ್ ಮೊದಲ ಸಿನಿಮಾ

ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿರುವ ನಟ ಶ್ರೀಮಹದೇವ್ ಅವರ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ತಮ್ಮ ನಟನೆ ಹಾಗೂ ಡ್ಯಾನ್ಸ್ ಗಳಿಂದ ಅವರು ಗಮನ ಸೆಳೆದಿದ್ದಾರೆ.

ಸ್ಟಾರ್ ಗಳು ಮೆಚ್ಚಿದ ಸಿನಿಮಾ

ಸ್ಟಾರ್ ಗಳು ಮೆಚ್ಚಿದ ಸಿನಿಮಾ

ಸ್ಟಾರ್ ಗಳ ಬೆಂಬಲ ಈ ಸಿನಿಮಾದ ಶಕ್ತಿ ಹೆಚ್ಚಿಸಿದೆ. ನಟ ದರ್ಶನ್, ಶಿವರಾಜ್ ಕುಮಾರ್, ಶ್ರೀಮುರಳಿ, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ನಿರ್ದೇಶಕರಾದ ಶಶಾಂಕ್, ಯೋಗರಾಜ್ ಭಟ್, ರಿಷಬ್ ಶೆಟ್ಟಿ ಸೇರಿದಂತೆ ಸಾಕಷ್ಟು ಜನರು ಸಿನಿಮಾದ ಬಗ್ಗೆ ಒಳ್ಳೆಯ ಮಾತನ್ನು ಆಡಿದ್ದಾರೆ. ಅಲ್ಲದೆ ತಮಿಳು ನಟ ಸಿಂಬು ಚಿತ್ರದ ಒಂದು ಹಾಡನ್ನು ಹಾಡಿದ್ದಾರೆ.

ಮಿಸ್ ಮಾಡದೆ ನೋಡಿ

ಮಿಸ್ ಮಾಡದೆ ನೋಡಿ

ಇಷ್ಟೆಲ್ಲ ವಿಶೇಷತೆಗಳೊಂದಿಗೆ ಸಿನಿಮಾ ಒಂದು ಒಳ್ಳೆಯ ಸಂದೇಶ ನೀಡುತ್ತದೆ. ಸಂಬಂಧಗಳ ಬಗ್ಗೆ ಇರುವ ಈ ಚಿತ್ರ ಎಮೋಷನ್ಸ್ ಮೇಲೆ ನಿಂತಿದೆ. ಸೋ, ಇದೇ ಶುಕ್ರವಾರ ಚಿತ್ರಮಂದಿರಕ್ಕೆ ಬರುತ್ತಿರುವ ಈ ಸಿನಿಮಾವನ್ನು ಮಿಸ್ ಮಾಡದೆ ನೋಡಿ.

More from Filmibeat

English summary
Actress Meghana Raj and Tilak Shekar starring 'Iruvudellava Bittu Iruve Bittukolluvude Jeevana' kannada movie will be releasing on september 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X