ಮೇಘನಾ ರಾಜ್ ಗ್ಲಾಮರ್ ಕಂಡು ಎಲ್ಲರೂ ಮನಸೋತರು
Recommended Video

ನಟಿ ಮೇಘನಾ ರಾಜ್ ಅವರ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾ ದಿನೇ ದಿನೇ ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾದ ಹಾಡುಗಳು ಕೇಳುಗರ ಮನ ಗೆದ್ದಿದೆ.
ಇದೀಗ ಸಿನಿಮಾದ ಒಂದು ಹಾಡು ಯೂ ಟ್ಯೂಬ್ ನಲ್ಲಿ ದೊಡ್ಡ ಜನಪ್ರಿಯತೆ ಗಳಿಸುತ್ತಿದೆ. 'ಕಣ್ಣುಗಳೆ ಹೇಳಿ..' ವಿಡಿಯೋ ಹಾಡು ರಿಲೀಸ್ ಆದ ಮೂರೇ ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಈ ಹಾಡಿನ ಮೂಲಕ ಸಿನಿಮಾ ಇನ್ನಷ್ಟು ಜನರನ್ನು ತಲುಪಿದೆ.
ಮೇಘನಾ ರಾಜ್ ಈ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ಗ್ಲಾಮರ್ ನೋಡಿ ಹುಡುಗರು ಫಿದಾ ಆಗಿದ್ದಾರೆ. ಇದೊಂದು ರೋಮ್ಯಾಂಟಿಕ್ ಸಾಂಗ್ ಆಗಿದ್ದು, ಮೇಘನಾ ರಾಜ್ ಜೊತೆಗೆ ತಿಲಕ್ ನಟಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿ ಬಂದಿದೆ.

ಸಿನಿಮಾಗೆ ವಿ ಶ್ರೀಧರ್ ಸಂಭ್ರಮ್ (ವಿ ಎಸ್ ಆರ್) ಸಂಗೀತ ನೀಡಿದ್ದಾರೆ. ಕವಿರಾಜ್ ಸಾಹಿತ್ಯ ಬರೆದಿದ್ದು, ಸಂಜಿತ್ ಹೆಗ್ಡೆ ಹಾಡಿದ್ದಾರೆ. ಕಾಂತ ಕನ್ನಲಿ ನಿರ್ದೇಶನ ಚಿತ್ರಕ್ಕಿದೆ. ದೇವರಾಜ್ ದಾವಣಗೆರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಫಸ್ಟ್ ಕಾಫಿ ಸಿದ್ಧವಾಗಿದ್ದು, ಅದಷ್ಟು ಬೇಗ ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications