ಬಿಡುಗಡೆಗೆ ಮುಂಚೆಯೇ ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದ 'ಇರುವುದೆಲ್ಲವ ಬಿಟ್ಟು'

ಅದೊಂದು ಕಾಲವಿತ್ತು, ಒಂದು ಸಿನಿಮಾ ನೋಡ್ಬೇಕು ಅಂದ್ರೆ ಇಡೀ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಿದ್ರು. ಬಹುಶಃ ಅಂತಹ ಕ್ಷಣಗಳು ಈಗ ಕಡಿಮೆಯಾಗಿದೆ. ಅಲ್ಲೊಂದು ಇಲ್ಲೊಂದು ಸಿನಿಮಾಗಳು ಬಿಟ್ಟರೇ ಉಳಿದೆಲ್ಲವೂ ಪ್ರೀತಿ-ಪ್ರೇಮ, ಹೊಡಿ-ಬಡಿ ಅಂತಹ ಸಿನಿಮಾಗಳೇ. ಅದಕ್ಕೆ ಫ್ಯಾಮಿಲಿ ಆಡಿಯೆನ್ಸ್ ಕೂಡ ಥಿಯೇಟರ್ ಗೆ ಬರೋಕೆ ಸ್ವಲ್ಪ ಹಿಂದೆ ಸರಿಯುತ್ತಾರೆ.

ಇಂತಹ ಸಮಯದಲ್ಲಿ ಇಡೀ ಫ್ಯಾಮಿಲಿಯನ್ನೇ ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿದೆ ಈ ಸಿನಿಮಾ. ಹೌದು, ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹಾದೇವ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾ ಇದೇ ವಾರ (ಸೆಪ್ಟೆಂಬರ್ 21) ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಈಗಾಗಲೇ ಟ್ರೈಲರ್, ಹಾಡುಗಳು, ಪ್ರಮೋಷನ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರವನ್ನ ಇಡೀ ಕುಟುಂಬ ಜೊತೆ ನೋಡಬೇಕು ಎಂದು ಚಿತ್ರತಂಡ ವಿಶೇಷವಾಗಿ ಹೇಳುತ್ತಲೇ ಇದೆ. ಇದೇ ಉದ್ದೇಶದಿಂದ ಒಂದು ಹೊಸ ರೀತಿಯ ಪ್ರಯತ್ನವನ್ನ ಮಾಡಿ ಗೆದ್ದಿದೆ ಚಿತ್ರತಂಡ.

Iruvudellava Bittu premier show response

ಹೌದು, 'ಇರುವುದೆಲ್ಲವ ಬಿಟ್ಟು' ಚಿತ್ರ ಪಬ್ಲಿಕ್ ಪ್ರೀಮಿಯರ್ ಶೋ ಮಾಡಿ ಜನರ ಮನಸ್ಸು ಗೆದ್ದಿದೆ. ಇರುವ ಕೆಲಸವನ್ನೆಲ್ಲಾ ಬಿಟ್ಟು ಸಿನಿಮಾ ನೋಡಲು ಬನ್ನಿ ಎಂದು ಅಭಿಯಾನ ಮಾಡಿ ಸುಮಾರು ಕುಟುಂಬಗಳನ್ನ ಚಿತ್ರಮಂದಿರಕ್ಕೆ ಆಹ್ವಾನ ನೀಡಿತ್ತು. ಎಲ್ಲ ಕೆಲಸಗಳನ್ನ ಬಿಟ್ಟು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ಆ ಜನರು ಸಿನಿಮಾ ನೋಡಿ ಖುಷಿಯಾದರು. ಮಕ್ಕಳು, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಜ್ಜ-ಅಜ್ಜಿ ಹೀಗೆ ಇಡೀ ಕುಟುಂಬಗಳೇ ಸಿನಿಮಾ ನೋಡಿ ಸಂತಸಗೊಂಡರು.

Iruvudellava Bittu premier show response

ಇನ್ನು 'ಇರುವುದೆಲ್ಲವ ಬಿಟ್ಟು' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿನಿಮಾ ಕಥೆ ಹಾಗೂ ಕಲಾವಿದರ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟರು. ಹೀಗೆ, ಸಿನಿಮಾ ಬಿಡುಗಡೆಗೂ ಮುಂಚೆಯೇ ಇಂತಹದೊಂದು ಪ್ರಯತ್ನ ಮಾಡಿ ಯಶಸ್ಸು ಕಂಡ ಈ ಸಿನಿಮಾ ಈ ಶುಕ್ರವಾರ ಅಧಿಕೃತವಾಗಿ ನಿಮ್ಮ ಮುಂದೆ ಬರ್ತಿದೆ.

ಕಾಂತಕನ್ನಲ್ಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹದೇವ್ ನಟಿಸಿದ್ದಾರೆ. ದೇವರಾಜ್ ದಾವಣಗೆರೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಒದಗಿಸಿದ್ದಾರೆ.

More from Filmibeat

English summary
Actress Meghana Raj and Tilak Shekar starring 'Iruvudellava Bittu Iruve Bittukolluvude Jeevana' kannada movie will be releasing on september 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X