ಬಿಡುಗಡೆಗೆ ಸಜ್ಜಾಗಿದೆ 'ಇರುವುದೆಲ್ಲವ ಬಿಟ್ಟು' ಸಿನಿಮಾ
ಮೇಘನಾ ರಾಜ್ ಮತ್ತು ತಿಲಕ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಕಾಂತಕನ್ನಲ್ಲಿ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಮಹೇಶ್ ಮಳವಳ್ಳಿ ಅವರ ಸಂಭಾಷಣೆ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಮತ್ತು ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಒಳಗೊಂಡಿದೆ. ಮೇಘನರಾಜ್, ತಿಲಕ್ ಜೊತೆ, ಶ್ರೀಮಹದೇವ್, ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಅಭಿಷೇಕ್ ರಾಯಣ್ಣ, ರಿಚರ್ಡ್ ಲೂಯಿಸ್ ಮುಂತಾದವರು ಅಭಿನಯಿಸಿದ್ದಾರೆ.
ಬಿಲ್ವ ಕ್ರಿಯೇಷನ್ಸ್ ಲಾಂಛನದಲ್ಲಿ ದಾವಣಗೆರೆ ದೇವರಾಜ್ ನಿರ್ಮಾಣ ಮಾಡಿದ್ದು, ಬೆಂಗಳೂರು, ಮಂಗಳೂರು, ಊಟಿ ಮುಂತಾದೆಡೆಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

"ಪಾದರಸ" ಕ್ಕೆ 'ಎ' ಸರ್ಟಿಫಿಕೆಟ್
ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ "ಪಾದರಸ" ಚಿತ್ರವನ್ನು ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ 'ಎ' ಸರ್ಟಿಫಿಕೆಟ್ ನೀಡಿದೆ.
ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಹೃಷಿಕೇಶ್ ಜಂಬಗಿ ನಿರ್ದೇಶನ ಮಾಡಿದ್ದಾರೆ. ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ.ಗುರುದತ್, ಶೋಭರಾಜ್, ಭವ್ಯ, ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್, ಮುಂತಾದವರಿದ್ದಾರೆ.


Click it and Unblock the Notifications











