For Quick Alerts
  ALLOW NOTIFICATIONS  
  For Daily Alerts

  ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಾರಾ ದರ್ಶನ್: ದರ್ಶನ್ 'ಹಿಂದಿ' ಸಿನಿಮಾಗಳ ಯಶಸ್ಸೆಷ್ಟು?

  |

  ಈಗ ಚಿತ್ರರಂಗದ ವಿಚಾರ ಮಾತನಾಡಬೇಕು ಅಂದರೆ ಈ ಪ್ಯಾನ್ ಇಂಡಿಯಾ ವಿಚಾರವನ್ನು ಪಕ್ಕಕ್ಕೆ ಇಟ್ಟು, ಬಿಟ್ಟು ಮಾತನಾಡುವಂತೆ ಇಲ್ಲ. ಯಾಕೆಂದರೆ ಕನ್ನಡದ ಚಿತ್ರ ಕೆಜಿಎಫ್ ಅಂತಹದೊಂದು ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕನ್ನಡದ ಒಂದು ಚಿತ್ರ ದೇಶಾದ್ಯಂತ ಬಾಕ್ಸಾಫಿಸ್ ಕೊಳ್ಳೆ ಹೊಡೆದು, ವಿಶ್ವದಾದ್ಯಯಂತ ಖ್ಯಾತಿ ಗಳಿಸಿದೆ.

  ಹಾಗಾಗಿ ಈಗ ಎಲ್ಲರ ಗಮನ ಕನ್ನಡದ ಉಳಿದ ಸ್ಟಾರ್ ನಟರ ಚಿತ್ರಗಳ ಮೇಲೆ ಇದೆ. ಮುಂದೆ ಬರುವ ಪ್ಯಾನ್ ಇಂಡಿಯಾ ಚಿತ್ರಗಳು ಹೀಗೆ ಅಬ್ಬರಿಸಲಿವೆಯಾ?, ಹೀಗೆ ಎಲ್ಲರೂ ತಿರುಗಿನೋಡುವಂತೆ ಸದ್ದು ಮಾಡಲಿವೆಯಾ ಎನ್ನುವ ಪ್ರಶ್ನೆ ಸಹಜವಾಗಿಯೆ ಮೂಡಿದೆ. ಸದ್ಯ ಈ ವಿಚಾರ ನಟ ದರ್ಶನ್ ಮತ್ತು ಸುದೀಪ್ ಸುತ್ತಲು ಸುತ್ತುತ್ತಾ ಇದೆ. ಇವರು ಕೂಡ ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡಬೇಕು ಎನ್ನುವ ಅಪೇಕ್ಷೆಗಳು, ನಿರೀಕ್ಷೆಗಳು ಮೂಡಿವೆ.

  ಹೈದ್ರಾಬಾದ್‌ನಲ್ಲಿ ವಾಸಿಸಲಿದ್ದಾರೆ ಪ್ರಶಾಂತ್ ನೀಲ್: ಹೊಸ ಮನೆಗೆ ಹುಡುಕಾಟ!ಹೈದ್ರಾಬಾದ್‌ನಲ್ಲಿ ವಾಸಿಸಲಿದ್ದಾರೆ ಪ್ರಶಾಂತ್ ನೀಲ್: ಹೊಸ ಮನೆಗೆ ಹುಡುಕಾಟ!

  ಇನ್ನು ನಟ ದರ್ಶನ್ ಕನ್ನಡದ ಸೂಪರ್ ಸ್ಟಾರ್ ನಟ. ಅತಿ ಹೆಚ್ಚು ಮಾಸ್ ಕ್ರೇಜ್ ಇರುವುದು ನಟ ದರ್ಶನ್‌ಗೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು. ಈಗ ದರ್ಶನ್ ಕೂಡ ಪ್ಯಾನ್ ಇಂಡಿಯಾ ಚಿತ್ರವನ್ನು ಮಾಡುವತ್ತ ಮುಖ ಮಾಡಿದ್ದಾರೆ. ದರ್ಶನ್ ಅಭಿನಯದ 'ಕ್ರಾಂತಿ', ಪ್ಯಾನ್ ಇಂಡಿಯಾ ಸಿನಿಮಾ.

  ಫೈಟ್ ಮಾಸ್ಟರ್ 'ಡಿಫ್ರೆಂಟ್ ಡ್ಯಾನಿ' ಸಾವಿನಿಂದ ಪಾರಾಗಿದ್ದೇ ಪವಾಡ!ಫೈಟ್ ಮಾಸ್ಟರ್ 'ಡಿಫ್ರೆಂಟ್ ಡ್ಯಾನಿ' ಸಾವಿನಿಂದ ಪಾರಾಗಿದ್ದೇ ಪವಾಡ!

  ಸೌತ್‌ನಲ್ಲಿ ದರ್ಶನ್ ಪರಿಚಿತ!

  ಸೌತ್‌ನಲ್ಲಿ ದರ್ಶನ್ ಪರಿಚಿತ!

  ನಟ ದರ್ಶನ್ ಕನ್ನಡದಲ್ಲಿ ಮಾಡಿದ ಬಹುತೇಕ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ನಿರ್ಮಾಪಕನಿಗೆ ಲಾಭ ಬೇಕು ಎಂದರೆ ದರ್ಶನ್‌ಗೆ ಒಂದು ಸಿನಿಮಾ ಮಾಡಬೇಕು ಎನ್ನುವ ಮಾತು ಗಾಂಧಿನಗರದಲ್ಲಿ ಹಲವು ದಿನಗಳಿಂದ ಜಾರಿಯಲ್ಲಿ ಇದೆ. ಅದಕ್ಕೆ ತಕ್ಕಂತೆ ದರ್ಶನ್ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತವೆ. ಆದರೆ ಪ್ಯಾನ್ ಇಂಡಿಯಾ ಅಂತ ಬಂದಾಗ ಕೊಂಚ ಬದಲಾವಣೆಗಳು ಇದ್ದೇ ಇರುತ್ತೆ. ದರ್ಶನ್ ತಮ್ಮ ಚಿತ್ರಗಳ ಮೂಲಕ ಸೌತ್ ಪ್ರೇಕ್ಷಕರಿಗೆ ಪರಿಚಿತವಾಗಿದ್ದಾರೆ.

  ಕುರುಕ್ಷೇತ್ರ, ರಾಬರ್ಟ್ ತೆಲುಗಿನಲ್ಲಿ ರಿಲೀಸ್ ಆಗಿದ್ದವು!

  ಕುರುಕ್ಷೇತ್ರ, ರಾಬರ್ಟ್ ತೆಲುಗಿನಲ್ಲಿ ರಿಲೀಸ್ ಆಗಿದ್ದವು!

  ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ರಾಬರ್ಟ್ ಚಿತ್ರಗಳು ಈಗಾಗಲೇ ತೆಲುಗಿನಲ್ಲಿ ತೆರೆಕಂಡಿವೆ. ರಾಬರ್ಟ್ ಸಿನಿಮಾ ಉತ್ತಮ ಕಲೆಕ್ಷನ್ ಕೂಡ ಮಾಡಿತ್ತು. ಇನ್ನು ಕುರುಕ್ಷೇತ್ರ ಕನ್ನಡದಲ್ಲಿ ಉತ್ತಮ ಗಳೀಕೆ ಕಂಡಿತ್ತು. ಕನ್ನಡದಲ್ಲಿ ರಿಲೀಸ್ ಆದ ಹಲವು ದಿನಗಳ ಬಳಿಕೆ ತೆಲುಗಿನಲ್ಲಿ ತೆರೆಕಂಡು ಕುರುಕ್ಷೇತ್ರ ಚಿತ್ರ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡದೇ ಹೋದರು ತೆಲುಗು ಪ್ರೇಕ್ಷಕರ ಗಮನ ಸೆಳೆದಿದೆ.

  ಹಿಂದಿ ಪ್ರೇಕ್ಷಕರಿಗೆ ದರ್ಶನ್ ಹೊಸಬರಲ್ಲ!

  ಹಿಂದಿ ಪ್ರೇಕ್ಷಕರಿಗೆ ದರ್ಶನ್ ಹೊಸಬರಲ್ಲ!

  ಇನ್ನು ಹಿಂದಿ ವಿಚಾರಕ್ಕೆ ಬರುವುದಾದರೆ ನಟ ದರ್ಶನ್ ಹಿಂದಿ ಪ್ರೇಕ್ಷಕರಿಗೆ ಹೊಸಬರೇನಲ್ಲ. ಈಗಾಗಲೇ ದರ್ಶನ್ ಅಭಿನಯದ ಹಲವು ಚಿತ್ರಗಳನ್ನು ಹಿಂದಿ ಪ್ರೇಕ್ಷಕರು ನೋಡಿ ಮೊಚ್ಚಿಕೊಂಡಿದ್ದಾರೆ. ಹಾಗಂತ ದರ್ಶನ್ ಹಿಂದಿಯಲ್ಲಿ ಸಿನಿಮಾ ಮಾಡಿಲ್ಲ. ಬದಲಿಗೆ ಕನ್ನಡದಲ್ಲಿ ಬಂದ ಚಿತ್ರಗಳು ಹಿಂದಿ ಭಾಷೆಗೆ ಡಬ್ ಆಗಿ ಕಿರುತೆರೆ ಮತ್ತು ಯುಟ್ಯೂಬ್‌ನಲ್ಲಿ ರಿಲೀಸ್ ಆಗಿವೆ. ಈ ಚಿತ್ರಗಳ ಮೂಲಕ ದರ್ಶನ್ ಉತ್ತರ ಭಾರತದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

  ದರ್ಶನ್ ಮಾಸ್ ಅಪೀಲ್ ಬಾಲಿವುಡ್‌ಗೆ ಹೊಡೆತ ಕೊಡುತ್ತಾ?

  ದರ್ಶನ್ ಮಾಸ್ ಅಪೀಲ್ ಬಾಲಿವುಡ್‌ಗೆ ಹೊಡೆತ ಕೊಡುತ್ತಾ?

  ಇನ್ನು ದರ್ಶನ್ ಹೇಳಿ, ಕೇಳಿ ಮಾಸ್ ಹೀರೋ. ದರ್ಶನ್ ಮಾಸ್ ಅಪೀಲ್‌ಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಒಮ್ಮೆ ದರ್ಶನ್ ಮಾಸ್ ಅವತಾರದಲ್ಲಿ ಬಾಲಿವುಡ್ ಅಖಾಡಕ್ಕೆ ಕಾಲಿಟ್ಟರೆ, ಹಿಟ್ ಆಗುವ ಸಾಧ್ಯತೆ ಇದೆ. ದರ್ಶನ್ ಪ್ಯಾನ್ ಇಂಡಿಯಾ ಅಂತ ಹೋದರೆ ಹೊಸ ಸವಾಲುಗಳಿಗೆ ಸಿದ್ಧವಾಗಿಯೆ ಇರಬೇಕು. ಮುಂದಿನ ಚಿತ್ರ 'ಕ್ರಾಂತಿ' ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್ ಬಳಿಕ ದರ್ಶನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ನಿಲ್ಲುತ್ತಾರೋ ಇಲ್ಲವಾ ಎನ್ನುವ ಬಗ್ಗೆ ಒಂದಷ್ಟು ಸ್ಪಷ್ಟನೆ ಸಿಗುತ್ತದೆ.

  English summary
  Is Actor Darshan Will Become Successful Pan India Star, Know More Details About Darshan Hindi Dubbed Movies

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X