ಚಂದನ್ - ನಿವೇದಿತಾ ಡಿವೋರ್ಸ್ ವಿಚಾರಕ್ಕೆ ಸೃಜನ್ ಲೋಕೇಶ್ ಹೆಸರು ತಳುಕು ಹಾಕಿದ್ಯಾರು?
ಬಿಗ್‌ಬಾಸ್ ಶೋ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ ಡಿವೋರ್ಸ್ ಪಡೆದು ದೂರಾಗಿದ್ದಾರೆ. ದಿಢೀರನೆ ಈ ಸುದ್ದಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅರೇ, ಮೊನ್ ಮೊನ್ನೆ ಚೆನ್ನಾಗಿಯೇ ಓಡಾಡಿಕೊಂಡು ಇದ್ದರು. 20 ದಿನದ ಹಿಂದೆ ನಿವೇದಿತಾಗೆ ಚಂದನ್ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದರು. ಈಗ ಏನಾಯ್ತು? ಅಂತ ಚರ್ಚಿಸುತ್ತಿದ್ದಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿ ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆದು ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. ಇನ್ನು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

"ಈ ದಿನ ಚಂದನ್ ಶೆಟ್ಟಿ ಹಾಗೂ ನಾನು, ನಮ್ಮ ದಾಂಪತ್ಯವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಹಾಗೂ ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಎಂದಿನಂತೆ ಬೆಂಬಲ ಕೋರುತ್ತೇವೆ. ನಾವೂ ಪ್ರತ್ಯೇಕ ಮಾರ್ಗ ಅನುಸರಿಸಿದ್ರೂ, ಒಬ್ಬರೊನ್ನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ನಿವೇದಿತಾ ಪೋಸ್ಟ್ ಮಾಡಿದ್ದಾರೆ.
ಇದೇ ಪೋಸ್ಟ್ ಅನ್ನು ಕೊಂಚ ಬದಲಿಸಿ ಚಂದನ್ ಶೆಟ್ಟಿ ಕೂಡ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಆದರೆ ಚಂದನ್- ನಿವೇದಿತಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದ್ದು ಏಕೆ? ಬಿರುಕು ಮೂಡಲು ಕಾರಣ ಏನು? ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ನ್ಯಾಯಾಧೀಶರ ಮುಂದೆ ಇಬ್ಬರು ಮಾತನಾಡಿ "ಇಬ್ಬರ ಸ್ವಲ್ಪ ಭಿನ್ನಾಭಿಪ್ರಾಯ ಇದೆ, ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ, ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ" ಎಂದು ಹೇಳಿದ್ದಾರೆ ಎನ್ನಲಾಗ್ತಿದೆ.
ಇನ್ನು ಚಂದನ್- ನಿವೇದಿತಾ ಡಿವೋರ್ಸ್ ವಿಚಾರದಲ್ಲಿ ಕೆಲವರು ನಟ ಸೃಜನ್ ಲೋಕೇಶ್ ಹೆಸರು ಎಳೆದುತಂದು ಟ್ರೋಲ್ ಮಾಡುತ್ತಿದ್ದಾರೆ. ಸೃಜನ್ ಕಾರಣಕ್ಕೆ ಇಬ್ಬರೂ ದೂರಾಗುವಂತೆ ಆಯ್ತಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ತಮ್ಮ ಡಿವೋರ್ಸ್ ಬಗ್ಗೆ ಚಂದನ್, ನಿವೇದಿತಾ ಮಾಡಿರುವ ಪೋಸ್ಟ್ ಕಾಮೆಂಟ್ ಬಾಕ್ಸ್‌ನಲ್ಲಿ ಕೂಡ ಕೆಲವರು ಸೃಜನ್ ಲೋಕೇಶ್ ಹೆಸರು ತೆಗೆದು ಕಾಮೆಂಟ್ ಮಾಡಿ ತಮಾಷೆ ನೋಡುತ್ತಿದ್ದಾರೆ. ಸೃಜನ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ.
ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಒಂದು ವೀಡಿಯೋ ಶೇರ್ ಮಾಡಿ ಶುಭ ಕೋರಿದ್ದರು. ಅದರಲ್ಲಿ ನಿವೇದಿತಾ ಜೊತೆಗಿನ ಒಂದಷ್ಟು ಫೋಟೊಗಳನ್ನು ಅವರು ಕೊಲಾಜ್ ಮಾಡಿ ಹಾಕಿದ್ದರು. ಸದ್ಯ ಈ ಡಿವೋರ್ಸ್ ಸುದ್ದಿ ಹೊರಬೀಳುತ್ತಿದ್ದಂತೆ ಕೆಲವರು ಆ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಆ ಪೋಸ್ಟ್‌ಗೆ ಕಾಮೆಂಟ್ ಬಾಕ್ಸ್‌ನಲ್ಲಿ ಹೋಗಿ ಇವರಿಬ್ಬರ ಡಿವೋರ್ಸ್ ಬಗ್ಗೆ ಚರ್ಚಿಸಲು ಆರಂಭಿಸಿದ್ದಾರೆ.

ಬಿಗ್‌ಬಾಸ್ ಬಳಿಕ ನಿವೇದಿತಾ ಗೌಡ ಕಿರುತೆರೆಯ ಮತ್ತೆರಡು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ವೀಕ್ಷಕರನ್ನು ರಂಜಿಸಿದ್ದರು. ಆ ಶೋಗೆ ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದರು. ಇನ್ನು ಬಳಿಕ ಬಂದ 'ರಾಜಾ ರಾಣಿ' ಚಂದನ್- ನಿವೇದಿತಾ ಭಾಗಿ ಆಗಿದ್ದರು. ಅಲ್ಲೂ ಸೃಜನ್ ತೀರ್ಪುಗಾರರಾಗಿದ್ದರು ಅಷ್ಟೇ. ಹಾಗಾಗಿ ಸೃಜನ್ ಹಾಗೂ ನಿವೇದಿತಾ ನಡುವೆ ಒಳ್ಳೆ ಬಾಂಧವ್ಯ ಇತ್ತು. ಅಷ್ಟೇ ಆದರೆ ಅದನ್ನೇ ಕೆಲವರು ಆಕೆಯ ಡಿವೋರ್ಸ್ ವಿಚಾರಕ್ಕೆ ಲಿಂಕ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇಬ್ಬರೂ ದೂರಾಗಲು ಸೃಜನ್ ಕಾರಣ ಎನ್ನುವಂತೆ ಟ್ರೋಲ್ ಮಾಡುತ್ತಿದ್ದಾರೆ.
ಸೃಜನ್ ಲೋಕೇಶ್ ಹಂಚಿಕೊಂಡಿದ್ದ ವೀಡಿಯೋದ ಹಿನ್ನೆಲೆಯಲ್ಲಿ ಬರುವ ಹಾಡಿನ ಬಗ್ಗೆಯೂ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಪ್ರೀತಿಪಾತ್ರರ ಬಗೆಗಿನ ಹಾಡಿದು. ಕಳೆದ ವರ್ಷ ಬಂದ ಬಾಲಿವುಡ್‌ನ 'ಲಪತ್ತಾ ಲೇಡೀಸ್' ಚಿತ್ರದ ಹಾಡಿದು. ಇದೇ ಹಾಡನ್ನು ಹಾಕಿ ಸೃಜನ್ ಯಾಕೆ ವಿಡಿಯೋ ಹಂಚಿಕೊಂಡಿದ್ದಾರೆ? ಅಂತಲೂ ಕೆಲವರು ಕೇಳುತ್ತಿದ್ದಾರೆ. ಆದರೆ ಈ ಹಾಡು ಹಾಕಿ ಪೋಸ್ಟ್ ಮಾಡಿದ ಕಾರಣಕ್ಕೆ ಏನೇನೋ ಅಂದುಕೊಳ್ಳಬೇಡಿ, ನಿವೇದಿತಾಗೆ ಸೃಜನ್ ತಂದೆ ವಯಸ್ಸಿನವರು. ಏನೇನೋ ಊಹಿಸಿಕೊಂಡು ಸುಖಾಸುಮ್ಮನೆ ಮನಸ್ಸಿಗೆ ಬಂದಂತೆ ಮಾತನಾಡಬೇಡಿ, ಇಬ್ಬರದ್ದು ಅಣ್ಣ-ತಂಗಿ ಬಾಂಧವ್ಯ ಇರಬಹುದು ಎನ್ನುವವರು ಇದ್ದಾರೆ.
ಡಿವೋರ್ಸ್ ಬಳಿಕ ಕೂಡ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. 'ಕ್ಯಾಂಡಿಕ್ರಶ್' ಎನ್ನುವ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದು ಈಗಾಗಲೇ ಚಿತ್ರತಂಡಕ್ಕೆ ಕರೆ ಮಾಡಿ ಚಿತ್ರೀಕರಣಕ್ಕೆ ಬರುತ್ತೇವೆ ಎಂದು ಹೇಳಿರುವುದಾಗಿ ವರದಿಯಾಗಿದೆ.


Click it and Unblock the Notifications











