'ಕೆಜಿಎಫ್ 2' ಬಗ್ಗೆ ಮಾತಾಡಿದ್ರಾ ನಟ ಸುದೀಪ್?, ವೈರಲ್ ವಿಡಿಯೋ ಅಸಲಿಯತ್ತೇನು?

ಕನ್ನಡದ 'ಕೆಜಿಎಫ್ 2' ಚಿತ್ರ ಪ್ಯಾನ್ ಇಂಡಿಯಾ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ. 600 ಕೋಟಿ ಕ್ಲಬ್ ಸೇರಿರುವ 'ಕೆಜಿಎಫ್ 2' ಬಗ್ಗೆ ಹಲವು ತಾರೆಯರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಪರಭಾಷೆಯ ನಟರು ಕೂಡ ಚಿತ್ರತಂಡಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ಆದರೆ ಕನ್ನಡದ ನಟರು ಈ ಬಗ್ಗೆ ಮಾತನಾಡುತ್ತಿಲ್ಲ ಎನ್ನುವ ಚರ್ಚೆ ಹುಟ್ಟಿಕೊಂಡಿದೆ.

Recommended Video

Sudeep Video Fact Check | 'KGF 2' ಸಿನಿಮಾ ಬಗ್ಗೆ ಸುದೀಪ್ ಮಾತನಾಡಿರುವ ಕ್ಲಿಪ್ ವೈರಲ್ !

ಇದರ ಜೊತೆಗೆ ನಟ ಸುದೀಪ್ ವಿಡಿಯೋ ಒಂದು ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ. ಜೊತೆಗೆ ಟ್ರೋಲ್ ಕೂಡ ಆಗುತ್ತಾ ಇದೆ. 'ಕೆಜಿಎಫ್ 2' ಚಿತ್ರದ ಬಗ್ಗೆ ಸುದೀಪ್ ನೀಡಿರುವ ಹೇಳಿಕೆ ಎಂದು ಹೇಳಲಾಗುತ್ತಿರುವ ವಿಡಿಯೋ ಬಳಸಿ ಸುದೀಪ್‌ರನ್ನು ಟ್ರೋಲ್ ಮಾಡಲಾಗುತ್ತಿದೆ.

ವಿಡಿಯೋದಲ್ಲಿ ನಟ ಸುದೀಪ್ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದರೆ ಈಗ ಟ್ರೋಲ್ ಮಾಡುತ್ತಿರುವ ಹಾಗೆ ಅವರು 'ಕೆಜಿಎಫ್ 2' ಯಶಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗಿದ್ದರೆ ಈ ವಿಡಿಯೋ ಈಗ ಯಾಕೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಹೇಳುತ್ತಿರೋದೇನು? ಈ ವಿಡಿಯೋ ಹಿಂದಿನ ನಿಜಾಂಶ ಏನು? ಎನ್ನುವ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ...

ಸುದೀಪ್‌ಗೆ ಕೆಜಿಎಫ್‌ನಲ್ಲಿ ನಿಮ್ಮ ರೋಲ್ ಏನು ಎನ್ನುವ ಪಶ್ನೆ!

'ಕೆಜಿಎಫ್ 2' ಚಿತ್ರದ ಯಶಸ್ಸಿನ ಬಗ್ಗೆ ನಟ ಸುದೀಪ್ ಮಾತನಾಡಿದ್ದಾರೆ ಎನ್ನುವ ಈ ವಿಡಿಯೋದಲ್ಲಿ ಇರುವುದಿಷ್ಟು. ಕಿಚ್ಚ ಸುದೀಪ್‌ಗೆ ಪತ್ರಕರ್ತರು ಪ್ರಶ್ನೆ ಮಾಡುತ್ತಾರೆ. 'ಕೆಜಿಎಫ್ 2' ಸಿನಿಮಾದಲ್ಲಿ ನಿಮ್ಮ ಪಾತ್ರ ಏನು? ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ "ನಾನು ಆ ಸಿನಿಮಾದ ಭಾಗವಲ್ಲ." ಎಂದು ಒಂದೇ ವಾಕ್ಯದಲ್ಲಿ ಪ್ರತಿಕ್ರಿಯೆ ನೀಡಿ ಸುಮ್ಮನಾಗುತ್ತಾರೆ. ಇದೇ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

'ಕೆಜಿಎಫ್ 2' ಯಶಸ್ಸಿನ ಬಗ್ಗೆ ಮಾತಾಡಿಲ್ಲ ಕಿಚ್ಚ!

'ಕೆಜಿಎಫ್ 2' ಯಶಸ್ಸಿನ ಬಗ್ಗೆ ಮಾತಾಡಿಲ್ಲ ಕಿಚ್ಚ!

ಈಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಸುದೀಪ್ 'ಕೆಜಿಎಫ್ 2' ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಜನರು ಭಾವಿಸಿದ್ದಾರೆ. ಆದರೆ, ಇದು ಸುಳ್ಳು. ಇದು ಹಲವು ವರ್ಷಗಳ ಹಿಂದಿನ ವಿಡಿಯೋ. 2021ರಲ್ಲಿ ಗೋವಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಸುದೀಪ್ ಅತಿಥಿಯಾಗಿ ಭಾಗವಹಿಸಿದ್ದರು. ಆ ವೇಳೆ ಕಿಚ್ಚನಿಗೆ 'ಕೆಜಿಎಫ್ 2' ಸಿನಿಮಾದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆಗ ಚಿತ್ರ ಇನ್ನೂ ಬಿಡುಗಡೆಯಾಗಿರಲಿಲ್ಲ. ಆಗ ಸಿನಿಮಾದ ಬಗ್ಗೆ ಚಿತ್ರತಂಡ ಕೂಡ ಮಾತಾಡಿರಲಿಲ್ಲ. ಈ ಹೀಗಾಗಿ ಸುದೀಪ್ 'ಕೆಜಿಎಫ್ 2' ಯಶಸ್ಸಿನ ಬಗ್ಗೆ ಮಾತಾಡಿಲ್ಲ ಎನ್ನಲಾಗಿದೆ.

ಸುದೀಪ್ ಬಗ್ಗೆ ಟ್ರೋಲ್ ತಪ್ಪೇ?

ಸುದೀಪ್ ಬಗ್ಗೆ ಟ್ರೋಲ್ ತಪ್ಪೇ?

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೆ, ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಸುದೀಪ್ 'ಕೆಜಿಎಫ್ 2' ಯಶಸ್ಸಿನ ಬಗ್ಗೆ ಹೀಗೆ ಮಾತನಾಡಬಾರದಿತ್ತು ಎನ್ನುವ ಕಮೆಂಟ್‌ಗಳು ಬಂದಿವೆ. ಇದರ ಜೊತೆಗೆ ಸತ್ಯಾಂಶ ತಿಳಿಯದ ಹಲವರು ಕಿಚ್ಚನ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. 'ಕೆಜಿಎಫ್ 2' ಚಿತ್ರದ ಯಶಸ್ಸು ಕಂಡು ಸುದೀಪ್ ಉರ್ಕೊಂಡಿದ್ದಾರೆ ಎನ್ನುವ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ಅಸಲಿ ವಿಚಾರ ಇಷ್ಟೇ, ಸುದೀಪ್ 'ಕೆಜಿಎಫ್ 2' ರಿಲೀಸ್‌ಗೂ ಮುನ್ನ ಮಾತನಾಡಿರುವ ವಿಡಿಯೋ ಇದು. 'ಕೆಜಿಎಫ್ 2' ಯಶಸ್ಸಿನ ಬಗ್ಗೆ ಮಾತನಾಡಿರುವ ವಿಡಿಯೋ ಅಲ್ಲ.

'ವಿಕ್ರಾಂತ್ ರೋಣ'ನಾಗಿ ಕಿಚ್ಚನ ಎಂಟ್ರಿ!

'ವಿಕ್ರಾಂತ್ ರೋಣ'ನಾಗಿ ಕಿಚ್ಚನ ಎಂಟ್ರಿ!

ಕಿಚ್ಚ ಸುದೀಪ್ ಅಭಿನಯದ ಮುಂದಿನ ಚಿತ್ರ 'ವಿಕ್ರಾಂತ್ ರೋಣ'. ಜುಲೈ 28ಕ್ಕೆ 'ವಿಕ್ರಾಂತ್ ರೋಣ' ಬಿಡುಗಡೆಯಾಗಲಿದೆ. ಈ ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ವಿಶೇಷ. ಇನ್ನು 'ವಿಕ್ರಾಂತ್ ರೋಣ' 3ಡಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

More from Filmibeat

English summary
Fact Check On Actor Kichcha Sudeep Comment About KGF 2, Why His Statment Viral,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X