ಮೋಹಕತಾರೆಗೆ ಎಂಗೇಜ್ಮೆಂಟ್ ಆಯ್ತಾ? ರಮ್ಯಾ ಕೈಲಿ ಉಂಗುರ ನೋಡಿ ರಕ್ಷಿತಾ ಶಾಕ್

ಮದುವೆ ಅಂದ್ರೆ ಸಂಭ್ರಮ. ನೂರಾರು ಅತಿಥಿಗಳು ಒಂದೆಡೆ ಸೇರುವ ವೇದಿಕೆ. ಎಷ್ಟೋ ದಿನಗಳ ಕಾಲ ಭೇಟಿ ಆಗದೇ ಇರುವವರು ಮದುವೆ ಮನೆಗಳಲ್ಲಿ ಮುಖಾಮುಖಿ ಆಗುತ್ತಾರೆ. ಬಿಡುವು ಸಿಕ್ಕರೆ ಕೂತು ಹರಟುತ್ತಾರೆ. ನಟಿ ರಕ್ಷಿತಾ ಪ್ರೇಮ್ ಹಾಗೂ ಮೋಹಕ ತಾರೆ ರಮ್ಯಾ ಇತ್ತೀಚೆಗೆ ಭೇಟಿ ಆಗಿದ್ದರು.

ತಮ್ಮ ಸಹೋದರನ ಮದುವೆಯನ್ನು ರಕ್ಷಿತಾ ಪ್ರೇಮ್ ಮುಂದೆ ನಿಂತು ನೆರವೇರಿಸಿದ್ದಾರೆ. ಚಿತ್ರರಂಗದ ಆಪ್ತರನ್ನೆಲ್ಲಾ ವಿವಾಹ ಮಹೋತ್ಸವಕ್ಕೆ ಆಹ್ವಾನಿಸಿದ್ದರು. ದರ್ಶನ್, ರಮ್ಯಾ, ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ ಸೇರಿದಂತೆ ಸಾಕಷ್ಟು ತಾರೆಯರು ರಾಣಾ- ರಕ್ಷಿತಾ ಆತರಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಹಳ ದಿನಗಳ ಬಳಿಕ ರಮ್ಯಾ- ರಕ್ಷಿತಾ ಒಟ್ಟಿಗೆ ಕಾಣಿಸಿಕೊಂಡಿದ್ದ ವೀಡಿಯೋ, ಫೋಟೊ ವೈರಲ್ ಆಗುತ್ತಿದೆ.

Is Actress Ramya Secretly Engaged why rakshit shocked after seeing ramya ring

ರಕ್ಷಿತಾ ಹಾಗೂ ರಮ್ಯಾ ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ಹಾಗಾಗಿ ಸಹಜವಾಗಿಯೇ ಇಬ್ಬರ ನಡುವೆ ಪೈಪೋಟಿ ಇತ್ತು. 'ತನನಂ ತನನಂ' ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು. ಈ ವೇಳೆ ಸಣ್ಣ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಕೆಲ ದಿನಗಳ ಬಳಿಕ ಮುನಿಸು ಮರೆತು ಒಂದಾಗಿದ್ದರು. ಇದೀಗ ಬಹಳ ದಿನಗಳ ಬಳಿಕ ಸ್ನೇಹಿತರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಕಪ್ಪು ಬಣ್ಣದ ಸೀರೆಯಲ್ಲಿ ರಮ್ಯಾ ಮಿರಿ ಮಿರಿ ಮಿಂಚಿದ್ದಾರೆ. ಆಕೆಯ ಗ್ಲಾಮರಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ರಾಣಾ-ರಕ್ಷಿತಾ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದಿದ್ದ ಮೋಹಕ ತಾರೆ ವೇದಿಕೆ ಏರಿ ಇಬ್ಬರಿಗೂ ಶುಭ ಹಾರೈಸಿದರು. ಬಳಿಕ ಕೆಲ ಹೊತ್ತು ರಕ್ಷಿತಾ ಜೊತೆ ಕೂತು ಮಾತನಾಡಿದ್ದಾರೆ. ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ರಮ್ಯಾ ತಮ್ಮ ಕೈಲಿದ್ದ ಉಂಗುರವನ್ನು ರಕ್ಷಿತಾಗೆ ತೋರಿಸಿದ್ದು ಆಕೆ ಅಚ್ಚರಿ ವ್ಯಕ್ತಪಡಿಸಿರುವಂತೆ ಕಾಣುತ್ತಿದೆ.

ವೀಡಿಯೋ ನೋಡಿದ ಅಭಿಮಾನಿಗಳು ರಮ್ಯಾ ಕೈಲಿದ್ದ ಉಂಗುರ ನೋಡಿ ರಕ್ಷಿತಾ ಯಾಕೆ ಶಾಕ್ ಆದರು? ಸೀಕ್ರೆಟ್ ಆಗಿ ರಮ್ಯಾ ಎಂಗೇಜ್ಮೆಂಟ್ ಆಗಿಬಿಡ್ತಾ? ಅದನ್ನು ಕೇಳಿ ರಕ್ಷಿತಾ ಶಾಕ್ ಆದ್ರಾ? ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ವೀಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ. ಇನ್ನು ಸ್ಣೇಹಿತರಿಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿಯಾಗುತ್ತಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನಟಿ ರಮ್ಯಾ ಮದುವೆ ಬಗ್ಗೆ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದೆ. ಇತ್ತೀಚೆಗೆ ರಮ್ಯಾ ತಮ್ಮ ಸ್ನೇಹಿತ ಸಂಜೀವ್ ಜೊತೆಗಿದ್ದ ಫೋಟೊಗಳನ್ನು ನೋಡಿ ಸಾಕಷ್ಟು ಊಹಾಪೋಹ ಶುರುವಾಗಿತ್ತು. ಕೊನೆಗೆ ರಮ್ಯಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಅದೆಲ್ಲಾ ಸುಳ್ಳು ಎಂದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಅತಿಥಿ ಪಾತ್ರದಲ್ಲಿ ರಮ್ಯಾ ಕೊನೆಯದಾಗಿ ನಟಿಸಿದ್ದರು. ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

'ನಾಗರಹಾವು' ಚಿತ್ರದಲ್ಲಿ ನಾಯಕಿಯಾಗಿ ರಮ್ಯಾ ಕೊನೆಯದಾಗಿ ನಟಿಸಿದ್ದರು. 'ಸ್ವಾತಿಮುತ್ತಿನ ಮಳೆ ಹನಿಯೇ' ಚಿತ್ರ ನಿರ್ಮಿಸಿ ನಟಿಸಲು ಮುಂದಾಗಿದ್ದರು. ಆದರೆ ಬಳಿಕ ನಟಿಸಲು ಹಿಂದೇಟು ಹಾಕಿದ್ದರು. ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಿ ರಿಲೀಸ್ ಮಾಡಿದ್ದರು.

More from Filmibeat

English summary
Actress Ramya attend Raksitha brother marriage reception, rakshita and ramya's meeting video goes viral;
Read more about: ramya rakshita sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X