ಅಚ್ಚರಿ ಮೂಡಿಸಿದ ಸ್ಟೇಟಸ್: ಆಮಿ ಜಾಕ್ಸನ್ 'ಸಲಿಂಗಕಾಮಿ'ನಾ.?

By Bharath Kumar

ಬ್ರಿಟನ್ ಮೂಲದ ನಟಿ ಕಮ್ ಮಾಡೆಲ್ ಆಮಿ ಜಾಕ್ಸನ್ ಹಿಂದಿ ಹಾಗೂ ದಕ್ಷಿಣ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಸದ್ಯ, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ '2.0' ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಆಮಿ ಭಾರತದ ಸ್ಟಾರ್ ನಟಿಯರನ್ನ ಹಿಂದಿಕ್ಕಿದ್ದಾರೆ.

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಆಮಿ ಜಾಕ್ಸನ್ ನೋಡಿ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.

ಆದ್ರೀಗ, ಪಡ್ಡೆ ಹುಡುಗರು, ಯುವ ಅಭಿಮಾನಿಗಳು ಅಚ್ಚರಿ ಪಡುವಂತಾಗಿದೆ. ಹೌದು, ಆಮಿ ಜಾಕ್ಸನ್ ಸಲಿಂಗಕಾಮಿ ಎನ್ನಲಾಗುತ್ತಿದೆ. ಈ ವಿಷ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದನ್ನ ಸ್ವತಃ ಆಮಿಯೇ ಸುಳಿವು ನೀಡಿದ್ದಾರೆ. ಮುಂದೆ ಓದಿ....

ಆಮಿ ಜಾಕ್ಸನ್ ಫೋಟೋ ಏನು ಹೇಳುತ್ತಿದೆ

ಆಮಿ ಜಾಕ್ಸನ್ ಫೋಟೋ ಏನು ಹೇಳುತ್ತಿದೆ

ನಟಿ ಆಮಿ ಜಾಕ್ಸನ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಹಾಕಿದ್ದಾರೆ. ಈ ಫೋಟೋದಲ್ಲಿ ತನ್ನ ಗೆಳತಿಯೊಬ್ಬಳ ಜೊತೆ ತುಂಬಾ ಆತ್ಮೀಯವಾಗಿ ತಬ್ಬಿಕೊಂಡಿದ್ದು, ಇದಕ್ಕೆ 'ವೈಫ್-ಲೈಫ್' ಎಂದು ಅಡಿಬರಹ ನೀಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆಮಿ ಸಲಿಂಗಕಾಮಿನಾ?

ಆಮಿ ಸಲಿಂಗಕಾಮಿನಾ?

ಈ ಫೋಟೋ ಮತ್ತು ಸ್ಟೇಟಸ್ ನೋಡಿದ ನೆಟ್ಟಿಗರು ''ನೀವು ಸಲಿಂಗಕಾಮಿನಾ'' ಎಂದು ಕೇಳುತ್ತಿದ್ದಾರೆ. 'ಆ ಫೋಟೋವನ್ನ ಗಂಭೀರವಾಗಿ ಗಮನಿಸಿದ್ರೆ ಕೂಡ ಅದೇ ಫೀಲಿಂಗ್ ಬರ್ತಿದೆ' ಎಂದು ಕಾಮೆಂಟ್ ಮಾಡ್ತಿದ್ದಾರೆ. ಇನ್ನು ಆಮಿ ಹಾಕಿರುವ ಸ್ಟೇಟಸ್ ಇದಕ್ಕೆ ಪುಷ್ಠಿ ನೀಡುವಂತಿದೆ. ಇದೆಲ್ಲವನ್ನ ಗಮನಿಸಿದ್ರೆ ಇದು ನಿಜ ಇರಬಹುದು ಎನ್ನಲಾಗುತ್ತಿದೆ.

ನನ್ನ ಸ್ನೇಹಿತೆಯೊಬ್ಬಳು ಸಲಿಂಗಕಾಮಿ

ನನ್ನ ಸ್ನೇಹಿತೆಯೊಬ್ಬಳು ಸಲಿಂಗಕಾಮಿ

ಕಳೆದ ವರ್ಷ ನೀಡಿದ ಸಂದರ್ಶನವೊಂದರಲ್ಲಿ ಆಮಿ ಜಾಕ್ಸನ್ ಸಲಿಂಗಕಾಮದ ಬಗ್ಗೆ ಮಾತನಾಡುತ್ತಾ, "ನಾನು ಅದರ ಬಗ್ಗೆ ಬಹಿರಂಗವಾಗಿರುತ್ತೇನೆ, ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಸಲಿಂಗಕಾಮಿ ಇದ್ದಾರೆ'' ಎಂದು ಹೇಳಿಕೊಂಡಿದ್ದರು. ಬಹುಶಃ ಆ ಸ್ನೇಹಿತೆ ಇವರೇ ಇರಬಹುದು ಎಂಬ ಕುತೂಹಲ ಈಗ ಕಾಡುತ್ತಿದೆ.

ಸಲಿಂಗಕಾಮದ ಬಗ್ಗೆ ಮಾತನಾಡಿದ್ದ ಆಮಿ

ಸಲಿಂಗಕಾಮದ ಬಗ್ಗೆ ಮಾತನಾಡಿದ್ದ ಆಮಿ

ಅದೇ ಸಂದರ್ಶನದಲ್ಲಿ ಸಲಿಂಗಕಾಮದ ಬಗ್ಗೆ ಮುಕ್ತವಾಗಿ ಆಮಿ ಜಾಕ್ಸನ್ ಮಾತನಾಡಿದ್ದರು. ನಾನು ಚೆನ್ನಾಗಿ ಕಾಣುವ ಮಹಿಳೆಯನ್ನು ಪ್ರಶಂಸಿಸುತ್ತೇನೆ. ನಿಮ್ಮ ಭಾವನೆಗಳು ಮತ್ತು ಭಾವನೆಗಳೊಂದಿಗೆ ನೀವು ಹೋಗಬೇಕು. ಅದು ಸರಿ ಎಂದು ಭಾವಿಸಿದರೆ ಖಂಡಿತಾ ಹೋಗಬಹುದು'' ಎಂದಿದ್ದರು. ಅಂದಿನ ಮಾತುಗಳು, ಈಗಿನ ಫೋಟೋ ಎಲ್ಲವೂ ಹೋಲಿಕೆಯಾಗುತ್ತಿದೆ.

ಈ ಫೋಟೋ, ಸ್ಟೇಟಸ್ ನೋಡಿದ್ರೆ ನಿಮಗೆ ಭಾವನೆ ಏನು.?

ಈ ಫೋಟೋ, ಸ್ಟೇಟಸ್ ನೋಡಿದ್ರೆ ನಿಮಗೆ ಭಾವನೆ ಏನು.?

ಇನ್ನು ಆಮಿ ಜಾಕ್ಸನ್ ಅವರ ಈ ಹೊಸ ಫೋಸ್ಟ್ ನೋಡಿದ್ರೆ, ನಿಮ್ಮ ಮನಸ್ಸಿನಲ್ಲಿ ಏನು ಭಾವನೆ ಮೂಡುತ್ತಿದೆ. ನಿಮ್ಮ ಕಾಮೆಂಟ್ ಗಳನ್ನ ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

More from Filmibeat

English summary
Amy jackson has put up a photo with a lady and has quoted it by writing “WifeLife”. She is being embraced by another lady from behind in this picture. The netizens did not delay and came up with ridiculous doubts and comments. Most of them commented her as a ‘lesbian’ and a homosexual.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X