'KGF-2'ನಲ್ಲಿ ಸುದೀಪ್ ಮಾಡಬೇಕಿದ್ದ ಪಾತ್ರ ಸಂಜಯ್ ದತ್ ಪಾಲಾಯಿತಾ? ಕಿಚ್ಚ ಹೇಳಿದ್ದೇನು?

By ಫಿಲ್ಮ್ ಡೆಸ್ಕ್

ಸ್ಯಾಂಡಲ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಮಿಂಚಿರುವ ಸುದೀಪ್ ಸದ್ಯ ಕನ್ನಡದ ಫ್ಯಾಂಟಂ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ನಡುವೆ ಸುದೀಪ್ ಟಾಲಿವುಡ್ ನಟ ಮಹೇಶ್ ಬಾಬು ಅಭಿನಯದ ಸರ್ಕಾರ್ ವಾರಿ ಪಾಟ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಮತ್ತೊಂದು ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದೆ.

Recommended Video

Sushanth Singh Rajput ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ | Last Song shoot | Filmibeat Kannada

ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಸಿನಿಮಾದ ಪಾರ್ಟ್-2 ಸಿದ್ಧವಾಗುತ್ತಿದೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಕೆಜಿಎಫ್-2 ಬಗ್ಗೆ ಒಂದು ವಿಚಾರ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಮಾಡಬೇಕಿದ್ದ ಪಾತ್ರ ಸಂಜಯ್ ದತ್ ಪಾಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದು ನಿಜನಾ? ಈ ಬಗ್ಗೆ ಸುದೀಪ್ ಹೇಳಿದ್ದೇನು? ಮುಂದೆ ಓದಿ...

ಸುದೀಪ್ ಪಾತ್ರ ಸಂಜಯ್ ದತ್ ಪಾಲಾಯಿತಾ?

ಸುದೀಪ್ ಪಾತ್ರ ಸಂಜಯ್ ದತ್ ಪಾಲಾಯಿತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪರಭಾಷೆಯಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಆದರೆ ಕನ್ನಡದಲ್ಲಿಯೂ ಖಳ ನಟನಾಗಿ ಕಾಣಿಸಿಕೊಳ್ಳುವ ಬಿಗ್ ಆಫರ್ ಸುದೀಪ್ ಗೆ ಬಂದಿತ್ತು ಎನ್ನುವ ಮಾತು ಕೇಳಿಬರುತ್ತಿದೆ. ಕೆಜಿಎಫ್-2 ಸಿನಿಮಾದಲ್ಲಿ ಸಂಜಯ್ ದತ್ ಅಭಿನಯಿಸುತ್ತಿರುವ ಪಾತ್ರವನ್ನು ಸುದೀಪ್ ಮಾಡಬೇಕಿತ್ತು ಎನ್ನುವ ಅಚ್ಚರಿಕರ ಸುದ್ದಿ ಕೇಳಿಬರುತ್ತಿದೆ. ಆದರೀಗ ಈ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಸುದೀಪ್ ಹೇಳಿದ್ದೇನು?

ಸುದೀಪ್ ಹೇಳಿದ್ದೇನು?

ನಟ ಸುದೀಪ್ ಇತ್ತೀಚಿಗೆ ಹಿಂದಿ ವೆಬ್ ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಯೊಬ್ಬ ಸುದೀಪ್ ಗೆ 'ನೀವು ಮಾಡಬೇಕಾದ ಪಾತ್ರ ಸಂಜಯ್ ದತ್ ಪಾಲಾಯಿತಲ್ಲ ಯಾಕೆ?' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸುದೀಪ್ 'ಒಂದು ವೇಳೆ ನಿಜ ಆಗಿದ್ದರೆ, ನಾನು ಮಾಡಬೇಕಾದ ಪಾತ್ರ ಸಂಜಯ್ ದತ್ ಮಾಡುತ್ತಿದ್ದಾರಲ್ಲಾ ಎಂದು ಖುಷಿಪಡುತ್ತಿದ್ದೆ' ಎಂದಿದ್ದಾರೆ. ನಂತರ ನಿರೂಪಕ ಕೆಜಿಎಪ್-2 ಸಿನಿಮಾಗೆ ಆಫರ್ ಬಂದಿತ್ತಾ ಎಂದು ಕೇಳಿದ್ದಾರೆ. "ನನಗೆ ಯಾವುದೆ ಆಫರ್ ಬಂದಿಲ್ಲ" ಎಂದು ಸುದೀಪ್ ಹೇಳಿದ್ದಾರೆ.

ಸಿನಿಮಾ ನೋಡಲು ಕರೆದಿದ್ದರು

ಸಿನಿಮಾ ನೋಡಲು ಕರೆದಿದ್ದರು

ಸಿನಿಮಾದಲ್ಲಿ ನಟಿಸಲು ಆಫರ್ ಬಂದಿಲ್ಲ. ಆದರೆ ಸಿನಿಮಾ ರಿಲೀಸ್ ಆದಾಗ ನೋಡಲು ಕರೆದಿದ್ದರು ಎಂದು ಹೇಳಿದ್ದಾರೆ. ಎಲ್ಲರೂ ನನ್ನ ಸ್ನೇಹಿತರು ಆದರೆ ಈ ರೀತಿ ಸುದ್ದಿ ಹೇಗೆ ಹರಿದಾಡಿದಾಡುತ್ತಿದೆ ಗೊತ್ತಿಲ್ಲ. ಎಂದಿದ್ದಾರೆ.

ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಾರಾ ಸುದೀಪ್

ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುತ್ತಾರಾ ಸುದೀಪ್

ಟಾಲಿವುಡ್ ನಟ ಮಹೇಶ್ ಬಾಬು ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಈಗಲೆ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಸಿನಿಮಾತಂಡ ಸಂಪರ್ಕ ಮಾಡಿರುವುದಾಗಿ ಹೇಳಿರುವ ಸುದೀಪ್ ನಟಿಸುತ್ತಾರಾ ಇಲ್ಲವ ಎನ್ನುವ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. ಸದ್ಯ ಕನ್ನಡದಲ್ಲಿ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಂನಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Sudeep says 'Even if it is a replacement, I'm honoured that Sanjay Dutt replaced me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X