ದರ್ಶನ್ ಕರ್ಮದ ಮಾತುಗಳನ್ನು ಪವಿತ್ರಾ ಗೌಡ ಶೇರ್ ಮಾಡಿದ್ದೇಕೆ? ಮತ್ತೆ ಅಂತಹದ್ದೇನಾಯ್ತು?

By ಫಿಲ್ಮಿಬೀಟ್ ಡೆಸ್ಕ್

ನಿನ್ನೆ (ಮೇ 20) ತಾನೇ ದುಬೈನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದವು. ದರ್ಶನ್ ಅಭಿಮಾನಿಗಳು ಇಬ್ಬರನ್ನು ಒಟ್ಟಿಗೆ ನೋಡಿ ಖುಷಿಯನ್ನು ವ್ಯಕ್ತಪಡಿಸಿದ್ದರು. ಇಬ್ಬರಿಗೂ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದರು.

ಇವರಿಬ್ಬರ ಸಂಭ್ರಮದ ಬೆನ್ನಲ್ಲೇ ನಟಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ದರ್ಶನ್ ಕರ್ಮದ ಬಗ್ಗೆ ಆಡಿದ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡಿದ್ದರು. ಪವಿತ್ರಾ ಗೌಡ ಯಾಕೆ ಈ ವಿಡಿಯೋ ತುಣುಕನ್ನು ಯಾಕೆ ಹಂಚಿಕೊಂಡಿದ್ದಾರೆ? ಅಂತ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೀಗ ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಅಸಲಿಗೆ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ನಡುವಿನ ಕಿತ್ತಾ ಇನ್ನೂ ಮುಗಿದಿಲ್ಲವೇ? ಅನ್ನೋ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

Is Darshan and girlfriend Pavitra Gowda broke up discussion is on social media

ಕೆಲವು ತಿಂಗಳ ಹಿಂದಷ್ಟೆ ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರೂ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದು ಗೊತ್ತೇ ಇದೆ. ಇವರಿಬ್ಬರ ಕಿತ್ತಾಟದಲ್ಲಿ ದರ್ಶನ್ ಹೆಸರು ಚರ್ಚೆಗೆ ಬಂದಿತ್ತು. ಅದ್ಯಾವಾಗ ಬಹಿರಂಗವಾಗಿ ವೇದಿಕೆ ಮೇಲೆ ದರ್ಶನ್ ಡೈಲಾಗ್ ಬಿಟ್ಟರೋ ಅಲ್ಲಿಂದ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ಇಬ್ಬರೂ ಸೈಲೆಂಟ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊ, ವಿಡಿಯೋಗಳನ್ನು ಮಾತ್ರ ಶೇರ್ ಮಾಡಿಕೊಳ್ಳುತ್ತಿದ್ದರು.

ಇಬ್ಬರ ನಡುವೆ ಎಲ್ಲವೂ ಸರಿ ಹೋಗಿದೆ ಅಂತ ಅಂದುಕೊಳ್ಳುವಾಗಲೇ ಪವಿತ್ರಾ ಗೌಡ ತನ್ನ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ದರ್ಶನ್ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡಿದ್ದಾರೆ. ಹಿಂದೆ ಸಂದರ್ಶನವೊಂದರಲ್ಲಿ ದರ್ಶನ್ ಕರ್ಮದ ಬಗ್ಗೆ ಮಾತಾಡಿದ್ದರು. ಅದನ್ನು ಅಭಿಮಾನಿಯೊಬ್ಬರು ಶೇರ್ ಮಾಡಿಕೊಂಡಿದ್ದರು. ಅದೇ ವಿಡಿಯೋವನ್ನು ದರ್ಶನ್-ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವದ ದಿನವೇ ಪವಿತ್ರಾ ಗೌಡ ಹಂಚಿಕೊಂಡಿದ್ದು ಚರ್ಚೆಯ ಪ್ರಮುಖ ವಿಷಯವಾಗಿಬಿಟ್ಟಿದೆ.

ನಾಲ್ಕು ವಾರಗಳ ಹಿಂದೆ ದರ್ಶನ್ ಡಿವೋಟೀಸ್ ಅನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಕರ್ಮದ ಬಗ್ಗೆ ಆಡಿದ ಮಾತನ್ನು ಶೇರ್ ಕೊಳ್ಳಲಾಗಿದೆ. ಅದರಲ್ಲಿ ದರ್ಶನ್ " ಕರ್ಮ ಅನ್ನೋದು ಬ್ಯಾಗೇಜ್ ಇದ್ದಂತೆ ಕಣಮ್ಮ. ನೀವು ಮಾಡಿದ್ರೋ ಅದನ್ನು ನೀವು ಪಡೆದುಕೊಳ್ಳುತ್ತೀರ. ಮೊದಲೆಲ್ಲ ಹೇಳೋರು, ಅಜ್ಜಿ ತಾತ ದೊಡ್ಡವರು ಎಲ್ಲಾ ಹೇಳೋರು. ಇದನ್ನೆಲ್ಲ ಮಾಡುತ್ತಿದ್ದೀಯಾ. ಮುಂದಿನ ಜನ್ಮಕ್ಕೆ ಈ ಕರ್ಮ ಇರುತ್ತೆ ಅಂತ ಹೇಳಿದ್ದರು. ಅದು ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ. ಈಗ ಅಲ್ಲೇ ಡ್ರಾ, ಅಲ್ಲೇ ಬಹುಮಾನ. " ಎಂದು ದರ್ಶನ್ ಹೇಳಿಕೊಂಡಿದ್ದರು.

Is Darshan and girlfriend Pavitra Gowda broke up discussion is on social media

ಪವಿತ್ರಾ ಈ ವಿಡಿಯೋವನ್ನು ಯಾಕಾಗಿ ಶೇರ್ ಮಾಡಿಕೊಂಡರು ಅನ್ನೋದು ಗೊತ್ತಿಲ್ಲ. ಯಾರಿಗಾದರೂ ಟಾಂಗ್ ಕೊಡುವುದಕ್ಕೆ ಈ ವಿಡಿಯೋ ಬಳಸಿಕೊಂಡರಾ? ಅನ್ನೋದಕ್ಕೂ ಸ್ಪಷ್ಟತೆ ಇಲ್ಲ. ವಿಜಯಲಕ್ಷ್ಮಿ ದರ್ಶನ್‌ಗೆ ಟಾಂಗ್ ಕೊಟ್ಟರಾ? ವಿವಾಹ ವಾರ್ಷಿಕೋತ್ಸವದ ಫೋಟೊ ಶೇರ್ ಮಾಡಿದ ಶೈಲಜಾ ನಾಗ್‌ಗೆ ಟಾಂಗ್ ಕೊಟ್ಟರಾ? ಇಲ್ಲ ದರ್ಶನ್‌ಗೆ ಟಾಂಗ್ ಕೊಟ್ಟರಾ? ಅನ್ನೋದು ಪ್ರಶ್ನೆ ಎದ್ದಿದೆ.

ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಚೆನ್ನಾಗಿದೆಯಾ? ಅನ್ನೋ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ, ಈ ಹಿಂದೆ ರಾದ್ಧಾಂತವಾದ ಬಳಿಕ ದರ್ಶನ್ ವೇದಿಕೆ ಮೇಲೆ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಅಲ್ಲದೆ ಇತ್ತೀಚೆಗೆ ದರ್ಶನ್ ತಮ್ಮ ಪತ್ನಿಯೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆಯೇ ಹೊರತು, ಪವಿತ್ರಾ ಜೊತೆ ಕಂಡಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Speculation about Darshan and Pavitra Gowda's breakup has sparked widespread discussion on social media platforms
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X