ಕೆವಿಎನ್ ಬ್ಯಾನರ್‌ನಲ್ಲಿ ದರ್ಶನ್ ಸಿನಿಮಾ; ಅನುಮಾನ ಹುಟ್ಟಿಸಿದ ರಕ್ಷಿತಾ ಪೋಸ್ಟ್

ನಟ ದರ್ಶನ್ ಯಾವಾಗ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣದಲ್ಲಿ ಭಾಗಿ ಆಗಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಇದೆಲ್ಲದರ ನಡುವೆ ದರ್ಶನ್ ನಟಿಸಬೇಕಿರುವ ಮತ್ತೆರಡು ಚಿತ್ರಗಳ ಬಗ್ಗೆ ಭಾರೀ ಚರ್ಚೆ ನಡೀತಿದೆ.

'ಡೆವಿಲ್' ಬಳಿಕ ಇನ್ನು ಮೂರ್ನಾಲ್ಕು ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಜೋಗಿ ಪ್ರೇಮ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಘೋಷಣೆ ಆಗಿರುವುದು ಗೊತ್ತೇಯಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ಬರಬೇಕಿದೆ. ಕಳೆದ ವರ್ಷ ಸಣ್ಣ ಡೈಲಾಗ್ ಟೀಸರ್ ಸಹ ಬಿಡುಗಡೆ ಆಗಿತ್ತು. ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ಕೂಡ ನಟಿಸುತ್ತಾರೆ ಎನ್ನುವ ವದಂತಿ ಹರಡಿತ್ತು.

Is Darshan And KVN production s D58 Film Shelved Rakshita prem shares cryptic post

ಕೆವಿಎನ್ ಹಾಗೂ ದರ್ಶನ್ ಕಾಂಬಿನೇಷನ್‌ ಸಿನಿಮಾ ನಿಂತು ಹೋಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸೂರಪ್ಪ ಬಾಬು ನಿರ್ಮಾಣದಲ್ಲೂ ದರ್ಶನ್ ಒಂದು ನಟಿಸುತ್ತಾರೆ ಎನ್ನಲಾಗಿತ್ತು. ಈ ಎರಡೂ ಚಿತ್ರಗಳಿಗೆ ಪಡೆದಿದ್ದ ಅಡ್ವಾನ್ಸ್ ಅನ್ನು ದರ್ಶನ್ ಹಿಂತಿರುಗಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಈ ಬಗ್ಗೆ ರಕ್ಷಿತಾ ಪ್ರೇಮ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಬ್ಯಾನರ್ ಯಾವುದೇ ಆಗಿದ್ದರೂ ದರ್ಶನ್- ಪ್ರೇಮ್ ಒಟ್ಟಿಗೆ ಸಿನಿಮಾ ಮಾಡುವುದು ಪಕ್ಕಾ ಎಂದಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ದರ್ಶನ್ ನಟಿಸುತ್ತಾರೋ ಇಲ್ಲವೋ? ಅಥವಾ ದರ್ಶನ್‌, ಪ್ರೇಮ್, ಕೆವಿಎನ್ ಕಾಂಬಿನೇಷನ್‌ ಸಿನಿಮಾ ಬರುತ್ತೋ ಇಲ್ವೋ? ಒಟ್ಟಿನಲ್ಲಿ ದರ್ಶನ್ ಚಿತ್ರಕ್ಕೆ ಪ್ರೇಮ್ ಆಕ್ಷನ್ ಕಟ್ ಹೇಳ್ತಾರೆ ಎಂದು ರಕ್ಷಿತಾ ಹೇಳಿಕೊಂಡಿದ್ದರು. ಇದೆಲ್ಲದರ ನಡುವೆ ಆಕೆಯ ಇನ್‌ಸ್ಟಾಗ್ರಾಮ್‌ ಸ್ಟೋರಿ ಇದೀಗ ವೈರಲ್ ಆಗುತ್ತಿದೆ. ಆ ಪೋಸ್ಟ್‌ಗೆ ಕೆವಿಎನ್ ಪ್ರೊಡಕ್ಷನ್ಸ್ - ದರ್ಶನ್ ಕಾಂಬಿನೇಷನ್‌ ಸಿನಿಮಾ ವಿಚಾರ ಸೇರಿಸಿ ವೈರಲ್ ಮಾಡಲಾಗುತ್ತಿದೆ.

Is Darshan And KVN production s D58 Film Shelved Rakshita prem shares cryptic post

ನೇರವಾಗಿ ರಕ್ಷಿತಾ ಪ್ರೇಮ್ ಏನನ್ನೂ ಹೇಳಿಲ್ಲ. "ಸ್ನೇಹಿತರು ಸ್ನೇಹಿತರೇ, ಎಲ್ಲವೂ ಚೆನ್ನಾಗಿಯೇ ಇದೆ. ಪಾಲುದಾರರ ಜೊತೆ ಸಮೀಕರಣ ಬದಲಾಗಬಹುದು, ಸ್ನೇಹಿತರ ನಡುವೆ ಅಲ್ಲ" ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಪ್ರೇಮ್ ಹಾಗೂ ದರ್ಶನ್ ಒಟ್ಟಿಗೆ ಸಿನಿಮಾ ಮಾಡುವುದು ನಿಶ್ಚಿತ. ಆದರೆ ಕೆವಿಎನ್ ಬ್ಯಾನರ್ ಅಡಿಯಲ್ಲಿ ಅಲ್ಲ, ಬದಲಿಗೆ ಬೇರೆ ಬ್ಯಾನರ್‌ನಲ್ಲಿ ಸಿನಿಮಾ ಬರಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ದರ್ಶನ್- ಪ್ರೇಮ್- ಕೆವಿಎನ್ ಕಾಂಬೋ ಚಿತ್ರಕ್ಕೆ ಟೈಟಲ್ ಫೈನಲ್ ಆಗಿಲ್ಲ. ಅದು ದರ್ಶನ್ ನಟನೆಯ 58ನೇ ಸಿನಿಮಾ. ಹಾಗಾಗಿ D58 ಎಂದು ಕರೆಯಲಾಗುತ್ತಿದೆ. ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಪ್ರೇಮ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ನಾನು ಇನ್ನು ಮುಂದೆ ದರ್ಶನ್ ಜೊತೆ ಸಿನಿಮಾ ಮಾಡಲ್ಲ ಎಂದು ಸ್ವತಃ ಪ್ರೇಮ್ ಹೇಳಿಕೆ ನೀಡಿದ್ದರು. ಬಳಿಕ ಎಲ್ಲ ಮರೆತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಕೋನ ವೆಂಕಟ್ ಹುಟ್ಟುಹಬ್ಬದ ದಿನವೇ D58 ಸಿನಿಮಾ ಘೋಷಣೆ ಆಗಿತ್ತು.

ಪ್ರೇಮ್ ಹಾಗೂ ದರ್ಶನ್ ನಡುವೆ ರಕ್ಷಿತಾ ಸಂಧಾನ ಮಾಡಿ ಭಿನ್ನಾಭಿಪ್ರಾಯ ಶಮನಗೊಳಿಸಿದ್ದರು. D58 ಸಿನಿಮಾ ಶುರುವಾಗಲೇ ರಕ್ಷಿತಾ ಮುಖ್ಯ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ರಕ್ಷಿತಾ ಸಹೋದರ ರಾಣಾ ಮದುವೆ ನಿಶ್ಚಯವಾಗಿದೆ. ಈ ಮದುವೆ ಸಮಾರಂಭಕ್ಕೆ ದರ್ಶನ್ ಕೂಡ ಹಾಜರಾಗುತ್ತಾರೆ ಎಂದು ರಕ್ಷಿತಾ ಹೇಳಿದ್ದಾರೆ.

ಬೆಂಗಳೂರಿನ 'ಮುಕ್ತ ಚಾಮರ ವಜ್ರ' ಪ್ಯಾಲೇಸ್ ಗ್ರೌಂಡ್‌ನಲ್ಲಿ ರಾಣಾ ಮದುವೆ ನಡೆಯಲಿದೆ. ಅಂದಹಾಗೆ ರಾಣಾ ಕೈ ಹಿಡಿಯಲಿರುವ ಹುಡುಗಿಯ ಹೆಸರು ಕೂಡ ರಕ್ಷಿತಾ ಎನ್ನುವುದು ವಿಶೇಷ. ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗುತ್ತಿದ್ದಾರೆ.

More from Filmibeat

English summary
Rakshita prem's cryptic post hints Darshan And KVN productions D58 Film Stopped
Read more about: darshan prem rakshita
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X